ಗಾಳಿ ಮಳೆಗೆ ವಿದ್ಯುತ್ ಕಂಬಗಳಿಗೆ ಹಾನಿ

0
35

ಸುಳ್ಯ: ಭಾನುವಾರ ಸುರಿದ ಭಾರೀ ಗಾಳಿ ಮಳೆಯಿಂದ ಸುಳ್ಯಕ್ಕೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತ್ತು.
ಏ. 27ರಂದು ಸಂಜೆ ಸುರಿದ ಭಾರೀ ಮಳೆ ಹಾಗೂ ಬೀಸಿದ ಭಾರೀ ಗಾಳಿಗೆ ಸುಳ್ಯ ತಾಲೂಕಿನಲ್ಲಿ ವಿದ್ಯುತ್ ಕಂಬಗಳಿಗೆ, ಲೈನ್‌ಗಳಿಗೆ ಹಾನಿ ಸಂಭವಿಸಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. 33 ಕೆವಿ ಲೈನ್‌ನಲ್ಲಿ ಮರ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಅಲ್ಲದೆ ಸುಳ್ಯ ನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ಮರ ಬಿದ್ದು, ಕಂಬ ಮುರಿದು ವಿದ್ಯುತ್ ಸಂಪರ್ಕ ಜಾಲ ಅಸ್ತವ್ಯಸ್ತಗೊಂಡಿದೆ. ಆದುದರಿಂದ ವಿವಿಧ ಕಡೆಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತ್ತು. ‌

Previous articleಪೊಲೀಸ್‌ ಗಂಡನ ವಿರುದ್ಧ ದೂರು ಸಲ್ಲಿಸಿದ ಮಹಿಳಾ ಪೊಲೀಸ್‌
Next articleಕೇಂದ್ರದ ಆಂತರಿಕ ಭದ್ರತೆ ವೈಫಲ್ಯವೇ ಪಹಲ್ಗಾಮ್ ಘಟನೆಗೆ ಕಾರಣ