ಬೆಂಗಳೂರು ಗಲಭೆ ಆರೋಪಿ ಸಿಂದಗಿಯಲ್ಲಿ ಸೆರೆ

0
17

ಸಿಂದಗಿ(ವಿಜಯಪುರ): ೨೦೨೦ರಲ್ಲಿ ಬೆಂಗಳೂರಿನ ಕೆಜಿಹಳ್ಳಿ-ಡಿಜೆ ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಲವರನ್ನು ಬಂಧಿಸಿದ್ದರು. ಇದೀಗ, ಪಕ್ರರಣದ ಮೋಸ್ಟ್ ವಾಂಟೆಡ್ ಆರೋಪಿ ಮೌಸೀನ್ ಅಲಿಯಾಸ್ ಇಮ್ತಿಯಾಝ್ ಶುಕುರ್‌ನನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಆರೋಪಿ ೩೦೨ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆಂದು ಹೇಳಲಾಗಿದೆ.
ಶಿರಸಿಯ ಟಿಪ್ಪುನಗರ ನಿವಾಸಿ ಮೌಸೀನ್ ಅಲಿಯಾಸ್ ಇಮ್ತಿಯಾಝ್ ಶುಕುರ್ ಬಂಧಿತ ಆರೋಪಿ. ಆರೋಪಿ ಪಿಎಫ್‌ಐ ಕಾರ್ಯಕರ್ತನಾಗಿದ್ದಲ್ಲದೇ ಉಗ್ರರಿಂದ ತರಬೇತಿ ಪಡೆದಿದ್ದನು. ಗಲಭೆ ನಂತರ ಆರೋಪಿ ​ ತಲೆಮರೆಸಿಕೊಂಡಿದ್ದನು. ಮೌಸೀನ್ ಹೈದರಾಬಾದ್‌ಗೆ ತೆರಳಿ, ಬಳಿಕ ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ನೆಲೆಸಿದ್ದನು.
ಈತನನ್ನು ಸೆರೆಹಿಡಿಯಲು ಉತ್ತರ ಕನ್ನಡ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಎಂ.ನಾರಾಯಣ್ ನೇತೃತ್ವದ ವಿಶೇಷ ತಂಡ ಕಾರ್ಯಾಚರಣೆಗೆ ಇಳಿದಿತ್ತು. ಈತ ಸಿಂದಗಿಯಲ್ಲಿರುವ ಮಾಹಿತಿ ತಿಳಿದ ಪೊಲೀಸರು, ಕಾರ್ಯಪ್ರವೃತ್ತರಾಗಿ ಆತನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿಂದೆ ಉಗ್ರ ಚಟುವಟಿಕೆ ಸಂಬಂಧಿಸಿ ಶಿರಸಿಯಲ್ಲಿ ಎನ್​ಎಯಿಂದ ಬಂಧಿತನಾಗಿದ್ದ ಸಾದಿಕ್​, ಆರೋಪಿ ಮೌಸೀನ್‌ನನ್ನು ಟ್ರೇನ್​ ಮಾಡಿದ್ದನು. ಶಿರಸಿಯಲ್ಲಿ ಈ ಹಿಂದಿನ ೩೦೨ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಕೊನೆಗೂ, ಮೋಸ್ಟ್ ವಾಂಟೆಡ್ ಮೌಸೀನ್ ಶುಕುರ್ ಪೊಲೀಸರ ಅತಿಥಿಯಾಗಿದ್ದಾನೆ.

Previous article7 ವರ್ಷದ ಬಾಲಕಿಗೆ 55 ವರ್ಷದ ವ್ಯಕ್ತಿಯಿಂದ ಲೈಂಗಿಕ ಕಿರುಕುಳ
Next articleತಂದೆಗೆ ಇಲ್ಲದ ಹಕ್ಕಿನಲ್ಲಿ ಮಗಳಿಗೆ ಹಿಸ್ಸೆ ಸಿಗದು