ಉ.ಕ. ಪಾಕಿಸ್ತಾನಿಗಳಿಗೆ ಸಮಸ್ಯೆ ಇಲ್ಲ..?

0
41

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ದೀರ್ಘಾವಧಿ ವೀಸಾದಡಿ ಮೂವರು ಮಕ್ಕಳು ಸೇರಿ 15 ಪಾಕಿಸ್ತಾನಿ ಪ್ರಜೆಗಳಿದ್ದು, ಉಳಿದ ವೀಸಾದವರು ಇಲ್ಲ. ಹೀಗಾಗಿ ಇದ್ದವರನ್ನು ಸರ್ಕಾರ ಆದೇಶದನ್ವಯ ಗಡಿಪಾರು ಮಾಡಲು ಬರುತ್ತಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ತಿಳಿಸಿದರು.
ಪೆಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ಬಳಿಕ ಸರ್ಕಾರ ಪಾಕಿಸ್ತಾನಿ ಪ್ರಜೆಗಳನ್ನು ಏ. 27ರೊಳಗೆ ದೇಶದಿಂದ ಹೊರಕ್ಕೆ ಕಳುಹಿಸಲು ಸೂಚನೆ ನೀಡಿದೆ. ಅಲ್ಲದೆ ಮೆಡಿಕಲ್ ವಿಸಾ ಹೊಂದಿರುವವರಿಗೆ ಏ. 29ರೊಳಗೆ ಗಡಿಪಾರು ಮಾಡುವಂತೆ ಸೂಚಿಸಿದೆ. ರಾಜ್ಯದಲ್ಲಿ 88 ಮಂದಿ ದೀರ್ಘಾವಧಿ ವೀಸಾ ಹಾಗೂ 4 ಜನರು ವಿಸಿಟರ್ ವೀಸಾದಲ್ಲಿದ್ದಾರೆ. ಹೊನ್ನಾವರದ ವಲ್ಕಿಯ ಯುವತಿ ಪಾಕಿಸ್ತಾನದಲ್ಲಿ ಮದುವೆಯಾಗಿದ್ದು, ಅಲ್ಲಿನ ಸರ್ಕಾರದ ತೀರ್ಮಾನಕ್ಕಾಗಿ ಕಾಯಲಾಗುತ್ತಿದೆ. ನಮ್ಮ ಪೊಲೀಸರು ಪರಿಶೀಲನೆ ನಡೆಸಿದ್ದು ಎಲ್ಲರೂ ಇಲ್ಲೇ ಇರುವ ಬಗ್ಗೆ ಖಚಿತವಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

Previous articleದೇವದುರ್ಗ ಶಾಸಕಿ ಪುತ್ರನಿಂದಲೇ ಟೋಲ್‌ಗೇಟ್ ಧ್ವಂಸ
Next articleಅಗಳಕೇರಾದಲ್ಲಿ ಕಾರ್ಮಿಕರ ಮೇಲೆ ವಾಮಾಚಾರ: ಗ್ರಾಮಸ್ಥರಿಂದ ಧರ್ಮದೇಟು, ನಾಲ್ವರು ಪೊಲೀಸ್ ವಶಕ್ಕೆ‌