ಸೊಲ್ಲಾಪುರ: ಜಮ್ಮು ಕಾಶ್ಮೀರದ ಪಹಲ್ಗಾಮ್‌ದಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಜಿಲ್ಲೆಯಲ್ಲಿನ ಪ್ರವಾಸಿಗರು ಸುರಕ್ಷಿತರಾಗಿದ್ದಾರೆ.
ಜಿಲ್ಲೆಯಿಂದ ಒಟ್ಟು 47 ಪ್ರವಾಸಿಗರು ಶ್ರೀನಗರ ಹೋಟಲ್‌ವೊಂದರಲ್ಲಿ ಸರಕ್ಷಿತರಾಗಿದ್ದಾರೆ. ಇನ್ನೂ ಎಷ್ಟು ಜನ ಪವಾಸಕ್ಕೆ ಹೋಗಿದ್ದಾರೆ ಎಂಬ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಲು ಟೂರಿಸ್ಟ್ ಕಂಪನಿಯೊಂದಿಗೆ ಜಿಲ್ಲಾಡಳಿವು ಸಂಪರ್ಕಿಸುತ್ತಿದೆ ಎಂದು ಜಿಲ್ಲಾಧಿಕಾರಿ ಕುಮಾರ ಆಶೀರ್ವಾದ ತಿಳಿಸಿದ್ದಾರೆ.
ಜಮ್ಮು ಕಾಶ್ಮೀರಕ್ಕೆ ಪ್ರವಾಸಕ್ಕಾಗಿ ತೆರಳಿದ ಪ್ರವಾಸಿಗರ ಸಂಬಂಧಿಕರು ಜಿಲ್ಲಾಡಳಿತದೊಂದಿಗೆ ಸಂಪರ್ಕಿಸಬೇಕು. ಪ್ರವಾಸಿಗರ ರಕ್ಷಣೆಗಾಗಿ ಅವರನ್ನು ಸಂಪರ್ಕಿಸಲು ತಹಸೀಲ್ದಾರ್ ಮತ್ತು ಪ್ರಾಂತಾಧಿಕಾರಿಗಳ ಜತೆ ಜಿಲ್ಲಾಧಿಕಾರಿ ಕುಮಾರ ಆಶೀರ್ವಾದ ಚರ್ಚಿಸಲು ಬುಧವಾರ ಮುಂಜಾನೆ ಸಭೆ ನಡೆಸಿದರು. ಸಭೆಯಲ್ಲಿ ಜಿಲ್ಲಾವಾರು ಪ್ರವಾಸಿಗರ ಪಟ್ಟಿ ಸಿದ್ಧಪಡಿಸಲು ಜಿಲ್ಲಾಧಿಕಾರಿ ಸೂಚನೆ ನೀಡಿದರು. ಅದರಂತೆ ಟೂರಿಸ್ಟ್ ಕಂಪನಿಗಳೊಂದಿಗೆ ಸಂಪರ್ಕಿಸಿ ಹೆಸರುಗಳ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಅಲ್ಲಿದ್ದ ಪ್ರವಾಸಿಗರನ್ನು ಮರಳಿ ತಾಯಿನಾಡಿಗೆ ತರಲು ವಿಮಾನ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.