ಮಂಗಳೂರು: ಸಿಇಟಿ ಪರೀಕ್ಷೆ ಬರೆಯಲು ಬಂದ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ಕತ್ತರಿಸಿದ ಪೊಲೀಸರಿಗೆ ಹಿಜಾಬ್ ಧರಿಸಿ ಬಂದು ಪರೀಕ್ಷೆ ಬರೆದ ವಿದ್ಯಾರ್ಥಿಗಳ ಮುಂದೆ ಈ ಧೈರ್ಯ ಏಕೆ ಇರಲಿಲ್ಲ, ಈ ಸರಕಾರಕ್ಕೆ ಬ್ರಾಹ್ಮಣರ ಶಾಪ ತಟ್ಟಿದ್ದು ಇದರ ಪರಿಣಾಮ ಶೀಘ್ರ ತಿಳಿಯಲಿದೆ. ಪೊಲೀಸರ ಅತಿರೇಕದ ವರ್ತನೆಯೂ ಹೆಚ್ಚುತ್ತಿದೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಹಿಂದುಗಳನ್ನು ಅವಮಾನಿಸಲು ಎಲ್ಲಾ ಕಡೆ ಪ್ರಯತ್ನಿಸುತ್ತಲೇ ಇದೆ. ಹಿಂದೂ ಪರ ಹೋರಾಟಗಾರರಿಗೆ, ಶಾಸಕರುಗಳಿಗೆ ಕೇಸಿನ ಮೇಲೆ ಕೇಸು ಹಾಕುವ ಈ ಸರ್ಕಾರ ಇದೀಗ ಬ್ರಾಹ್ಮಣರ ಜನಿವಾರವನ್ನ ಕತ್ತರಿಸುವ ಮೂಲಕ ಬ್ರಾಹ್ಮಣರ ಶಾಪಕ್ಕೆ ಗುರಿಯಾಗಿದೆ. ಈ ಘಟನೆಯ ವಿರುದ್ಧ ಬ್ರಾಹ್ಮಣ ಸಂಘಟನೆ ಮಾತ್ರ ಅಲ್ಲ, ರಾಜ್ಯದ ಇಡೀ ಹಿಂದೂ ಸಮುದಾಯ ಎದ್ದುನಿಂತು ಒಕ್ಕೊರಳಿನಿಂದ ಪ್ರತಿಭಟಿಸುವ ಕೆಲಸ ಮಾಡಬೇಕು ಎಂದರು.