ಚಿಕ್ಕಮಗಳೂರು: ಕಳೆದ ಕೆಲವು ದಿನಗಳಿಂದ ಚಾರ್ಮಾಡಿ ಘಾಟಿಯಲ್ಲಿ ಗುರುವಾರ ತಡರಾತ್ರಿ ಒಂಟಿ ಸಲಗ ಕಾಣಿಸಿಕೊಂಡಿದ್ದು, ವಾಹನ ಸವಾರರು ಭಯಭೀತರಾಗಿದ್ದರು.
ಮೂರು ದಿನದ ಹಿಂದೆ ಎಂಟನೇ ತಿರುವು ಬಳಿ ಸಂಜೆ ವೇಳೆ ಕಾಣಿಸಿದ್ದ ಆನೆಯು ಗುರುವಾರ ರಾತ್ರಿ ಸರ್ಕಾರಿ ಬಸ್ಸಿಗೆ ಅಡ್ಡ ನಿಂತಿದೆ. ಸಂಜೆಯೂ ಚಾರ್ಮಾಡಿ ಘಾಟಿಯಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗಿದೆ.
ಸುಮಾರು ಅರ್ಧ ಗಂಟೆಗಳ ಕಾಲ ಒಂಟಿ ಸಲಗ ನಿಂತಲ್ಲೇ ನಿಂತಿದ್ದು, ಕಿ.ಮೀ. ಗಟ್ಟಲೆ ಸಂಚಾರ ಜಾಮ್ ಆಗಿತ್ತು. ಚಾರ್ಮಾಡಿ ಘಾಟ್ ಒಂದೆಡೆ ಗುಡ್ಡ, ಮತ್ತೊಂದೆಡೆ ಪ್ರಪಾತ ಇದ್ದು, ಆನೆ ದಾಳಿಗೆ ಮುಂದಾದರೆ ತಪ್ಪಿಸಿಕೊಳ್ಳುವುದು ಬಹಳ ಕಷ್ಟ.
ಕಾರು ಚಾಲಕ ಆನೆಯಿಂದ ಕೂದಲೆಳೆಯ ಅಂತರದಿಂದ ತಪ್ಪಿಸಿಕೊಂಡಿದ್ದಾನೆ. ಆನೆಯನ್ನು ಸೆರೆ ಹಿಡಿದು ಸ್ಥಳಾಂತರಿಸುವಂತೆ ಸ್ಥಳೀಯರು, ಪ್ರವಾಸಿಗರು ಒತ್ತಾಯಿಸಿದ್ದಾರೆ.