ಕಲ್ಯಾಣ ಕರ್ನಾಟಕ: ಏಪ್ರಿಲ್‌ 16 ರಂದು ಬೃಹತ್‌ ಉದ್ಯೋಗ ಮೇಳ

ಬೆಂಗಳೂರು: ಏಪ್ರಿಲ್‌ 16 ರಂದು ಕಲಬುರಗಿಯಲ್ಲಿ ಬೃಹತ್‌ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ದೃಶ್ಯ ಸಂದೇಶ ಪೋಸ್ಟ್‌ ಮಾಡಿ ಕೌಶಲ್ಯ, ಸಾಮರ್ಥ್ಯ, ಪ್ರತಿಭೆ, ಆಸಕ್ತಿ ಹೊಂದಿರುವ ಯುವಜನತೆಗೆ ಉತ್ತಮ ಭವಿಷ್ಯ ರೂಪಿಸಿಕೊಡುವ ನಿಟ್ಟಿನಲ್ಲಿ ನಮ್ಮ ಸರ್ಕಾರವು ಪ್ರಾಮಾಣಿಕ ಹೆಜ್ಜೆ ಇಡುತ್ತಿದೆ. ಕಲ್ಯಾಣ ಕರ್ನಾಟಕದ ಪ್ರತಿಭಾವಂತ ಯುವಶಕ್ತಿಗೆ ಉದ್ಯೋಗ ದೊರಕಿಸಿಕೊಡಲು ಏಪ್ರಿಲ್‌ 16 ರಂದು ಕಲಬುರಗಿಯಲ್ಲಿ ಬೃಹತ್‌ ಉದ್ಯೋಗ ಮೇಳ ಆಯೋಜಿಸಲಾಗಿದೆ. ಉದ್ಯೋಗಾಕಾಂಕ್ಷಿಗಳೇ, ರಾಜ್ಯದ 200ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ನಿಮಗಾಗಿ ಉದ್ಯೋಗವನ್ನು ಅರಸಿ ತರಲಿದೆ. ಬನ್ನಿ ಉದ್ಯೋಗ ಮೇಳದಲ್ಲಿ ಭಾಗವಹಿಸಿ, ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಎಂದಿದ್ದಾರೆ.