ಧಗಧಗನೇ ಹೊತ್ತಿ ಉರಿದ ಕಾರು

ಇಳಕಲ್ : ಇಲ್ಲಿನ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಮಾರುತಿ ಕಾರೊಂದು ಧಗಧಗನೇ ಹೊತ್ತಿ ಉರಿದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
ರೋಗಿಯನ್ನು ಕರೆದುಕೊಂಡು ಬಂದು ಅದನ್ನು ಆಸ್ಪತ್ರೆಗೆ ಸೇರಿಸಿ ಮರಳಿ ಚಾಲಕ ಕಾರನ್ನು ಚಾಲು ಮಾಡಲು ಹೋದಾಗ ಈ ಘಟನೆ ನಡೆದಿದೆ ಬೆಂಕಿ ಹತ್ತಿಕೊಂಡ ಕೂಡಲೇ ಚಾಲಕ ಕಾರಿಂದ ಕೆಳಗೆ ಇಳಿದಿದ್ದಾನೆ
ಕಾರು ಬೆಂಕಿಗೆ ಆಹುತಿಯಾಗುತ್ತಿರುವದನ್ನು ಆಸ್ಪತ್ರೆಯಲ್ಲಿ ಇದ್ದ ಜನರು ಮತ್ತು ತಹಸೀಲ್ದಾರ ಕಚೇರಿ ಬಳಿ ಇದ್ದ ಜನರು ನೋಡತ್ತಾ ನಿಂತಿದ್ದರು.ಶಹರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಪೋಲಿಸರು ತನಿಖೆ ನಡೆಸಿದ್ದಾರೆ