ಇಳಕಲ್ : ಒಂಬತ್ತು ತಿಂಗಳಿಂದ ತನ್ನಿಂದ ದೂರವಿದ್ದ ಪತ್ನಿಯನ್ನು ನೋಡಿದ ಪತಿ ಅವಳ ಜೊತೆಗೆ ವಾಗ್ವಾದಕ್ಕೆ ಇಳಿದು ಚೂರಿ ಹಾಕಿದ ಘಟನೆ ನಗರದಲ್ಲಿ ನಡೆದಿದೆ.
ಕೂಕನಪಳ್ಳಿ ಗ್ರಾಮದ ರೇಣುಕಾ ಇಳಕಲ್‌ದ ರಾಘವೇಂದ್ರ ಗರ‍್ಲಾ ಎಂಬುವವರನ್ನು ಇಪ್ಪತ್ತು ವರ್ಷಗಳ ಹಿಂದೆ ಮದುವೆಯಾಗಿ ನಾಲ್ಕು ಪುತ್ರಿಯರಿಗೆ ಜನುಮ ನೀಡಿದ್ದಾಳೆ ಅದರಲ್ಲಿ ಮೂವರ ಮದುವೆಯಾಗಿ ಪುತ್ರಿಯರು ತಮ್ಮ ತಮ್ಮ ಗಂಡಂದಿರ ಮನೆಯಲ್ಲಿ ವಾಸವಾಗಿದ್ದಾರೆ ಎಸ್ ಎಸ್ ಎಲ್ ಸಿ ಓದುತ್ತಿರುವ ಕೊನೆಯ ಮಗಳು ಮಾತ್ರ ಈಗ ಅವಳ ಬಳಿ ಇದ್ದಾಳೆ
ಒಂಬತ್ತು ತಿಂಗಳ ಹಿಂದೆ ಪತಿ ಪತ್ನಿಯರ ನಡುವೆ ಮಧ್ಯ ಬಂದ ಜಗಳದಿಂದಾಗಿ ರೇಣುಕಾ ಸದ್ಯ ತನ್ನ ತವರುಮನೆ ಕೂಕನಪಳ್ಳಿಯಲ್ಲಿ ಮಗಳ ಜೊತೆಗೆ ವಾಸ ಮಾಡುತ್ತಿದ್ದಾಳೆ ಮಗಳ ಆಧಾರ ಕಾರ್ಡ್ ಬೇಕಾಗಿದ್ದರಿಂದ ಅದನ್ನು ಮಾಡಿಸಲು ಇಳಕಲ್‌ಗೆ ಬಂದಾಗ ಅವಳನ್ನು ನೋಡಿದ ಪತಿ ರಾಘವೇಂದ್ರ ಪತ್ನಿಯ ಜೊತೆಗೆ ಮಾತಿಗೆ ಇಳಿದು ಯಾವ ಗೆಣೆಯನನ್ನು ನೋಡಲು ಬಂದಿರುವೆ ಎಂದು ಬಯ್ಯುತ್ತಾ ಅವಳ ಕೊರಳಿಗೆ ಚೂರಿ ಹಾಕಿ ಕೊಯ್ಯಲು ಪ್ರಯತ್ನಿಸಿದ್ದಾನೆ. ಆದರೆ ಅಲ್ಲಿಯೇ ಇದ್ದ ಜನರು ಅವರಿಬ್ಬರ ಜಗಳ ಬಿಡಿಸಲು ಪ್ರಯತ್ನಿಸಿ ರೇಣುಕಾಳನ್ನು ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಶಹರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಪಿಎಸ್ ಐ ಷಹಜಹಾನ ನಾಯಕ ಪತಿ ರಾಘವೇಂದ್ರ ಗರ‍್ಲಾನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.