ಮಹಿಳೆಯರಿಗೆ ಮತ್ತಷ್ಟು ಬಲ ಮತ್ತು ವಿಶ್ವಾಸ
ಬೆಂಗಳೂರು: ರಾಜ್ಯ ಸರ್ಕಾರ MSIL ಮೂಲಕ ವಿಶೇಷ ಚಿಟ್ ಫಂಡ್ ಯೋಜನೆಯನ್ನು ಜಾರಿಗೆ ತರುವ ಯೋಜನೆಗೆ ಚಿಂತನೆ ನಡೆಸಿದೆ ಎಂದು ಕೈಗಾರಿಕೆ, ಮೂಲ ಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ನುಡಿದಂತೆ ನಡೆಯುತ್ತಿರುವ #ನಮ್ಮಸರ್ಕಾರ, ಮಹಿಳೆಯರ ಸ್ವಾವಲಂಬನೆಗಾಗಿ ಅನೇಕ ಯೋಜನೆಗಳನ್ನು ರೂಪಿಸುತ್ತಾ ಬಂದಿದೆ. #ಗೃಹಲಕ್ಷ್ಮಿ ಮತ್ತು #ಶಕ್ತಿ ಯೋಜನೆಗಳು ಲಕ್ಷಾಂತರ ಮಹಿಳೆಯರ ಬದುಕಿಗೆ ಬೆಳಕಾಗಿವೆ. ಆರ್ಥಿಕ ಭದ್ರತೆ ಮತ್ತು ಸ್ವಾತಂತ್ರ್ಯ ನೀಡಿದ್ದು ಸ್ವಾವಲಂಬಿ ಜೀವನ ಕಲ್ಪಿಸಿಕೊಟ್ಟಿವೆ.
ನಮ್ಮ ಸರ್ಕಾರ MSIL ಮೂಲಕ ವಿಶೇಷ ಚಿಟ್ ಫಂಡ್ ಯೋಜನೆಯನ್ನು ಜಾರಿಗೆ ತರುವ ಯೋಜನೆಗೆ ಚಿಂತನೆ ನಡೆಸಿದೆ. ಮಹಿಳೆಯರಿಗೆ ಮತ್ತಷ್ಟು ಬಲ ಮತ್ತು ವಿಶ್ವಾಸ ನೀಡಲು ಸಹಾಯ ಮಾಡಲಿದೆ. ಪಿಗ್ಮಿ ಏಜೆಂಟ್ ಆಗುವ ಅವಕಾಶವನ್ನು ಒದಗಿಸುವುದರಿಂದ, ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಮತ್ತು ಆದಾಯದ ಹೊಸ ಅವಕಾಶಗಳು ಲಭಿಸುವ ಸಾಧ್ಯತೆಯಿದೆ.
ಸರ್ಕಾರದ ಬೆಂಬಲವಿರುವ ಈ ಚಿಟ್ ಫಂಡ್ ವ್ಯವಸ್ಥೆ ಸಂಪೂರ್ಣ ಸುರಕ್ಷಿತ ಮತ್ತು ವಿಶ್ವಾಸಾರ್ಹವಾಗಿದ್ದು, ಮಹಿಳಾ ಶಕ್ತಿ ಮತ್ತು ಆತ್ಮವಿಶ್ವಾಸವನ್ನು ಉತ್ತೇಜಿಸುವ ಮಹತ್ವದ ಹೆಜ್ಜೆಯಾಗಲಿದೆ ಎಂದಿದ್ದಾರೆ
ತಮಿಳುನಾಡು ಮತ್ತು ಕೇರಳಗಳಲ್ಲಿ ಚಿಟಫಂಡ್ ವ್ಯವಸ್ಥೆ ಬಹಳ ಯಶಸ್ವಿಯಾಗಿದೆ. ಕೇರಳದಲ್ಲಿ ಸುಮಾರು ರೂ. 25000 ಕೋ. ಗಿಂತಲೂ ಹೆಚ್ಚಿನ ವ್ಯವಹಾರ ನಡೆಯುತ್ತದೆ. ಅದೇ ರೀತಿ ಕೇರಳ ಮಾದರಿಯಲ್ಲಿ ಕರ್ನಾಟಕದಲ್ಲಿ ಎಂ.ಎಸ್.ಐ.ಎ ಮೂಲಕ ಚಿಟಫಂಡ್ ವ್ಯವಸ್ಥೆ ಜಾರಿ ಮಾಡುವ ಮೂಲಕ ಸ್ವಸಹಾಯ ಗುಂಪುಗಳಿಗೆ ಶಕ್ತಿ ತುಂಬಲು ಚಿಂತನೆ ನಡೆದಿದೆ. ಪಿಗ್ಮಿ ಏಜೆಂಟರ ರೀತಿಯಲ್ಲಿ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಇದರಿಂದ ಉದ್ಯೋಗ ಸಿಗಲಿದೆ. ಗೃಹಲಕ್ಷ್ಮಿ ಯೋಜನೆ ಹಣವೂ ಸದುಪಯೋಗವಾಗಲಿದೆ. ಸರಕಾರವೇ ಇದನ್ನು ನಡೆಸುವುದರಿಂದ ಜನರಿಗೆ ವಿಶ್ವಾಸ ಹೆಚ್ಚಲಿದ್ದು, ಹಣವೂ ಸುರಕ್ಷಿತವಾಗಿರುತ್ತದೆ ಶೀಘ್ರದಲ್ಲಿ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು.
: ಸಚಿವ ಎಂ. ಬಿ. ಪಾಟೀಲ