ಪಂ. ಗಣಪತಿ ಭಟ್ ಹಾಸಣಗಿ ಅವರಿಗೆ “ಪುಟ್ಟರಾಜ ಸಮ್ಮಾನ”

0
35

ಧಾರವಾಡ: ಖ್ಯಾತ ಹಿಂದೂಸ್ತಾನಿ ಗಾಯಕ . ಗಣಪತಿ ಭಟ್ ಹಾಸಣಗಿ ಅವರಿಗೆ “ಪುಟ್ಟರಾಜ ಸಮ್ಮಾನ” ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪದ್ಮಭೂಷಣ ಡಾ. ಪುಟ್ಟರಾಜ ಗವಾಯಿಗಳ ೧೧೧ನೇ ಜನ್ಮದಿನದ ಅಂಗವಾಗಿ ಡಾ. ಪುಟ್ಟರಾಜ ಗವಾಯಿ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೋಮವಾರ ಆಲೂರ ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ಕಾರ್ಯಕ್ರಮ ನಡೆಯಿತು. ಸಮ್ಮಾನ ೧ ಲಕ್ಷ ರೂ. ನಗದು ಹಾಗೂ ಸ್ಮರಣಿಕೆ ಹೊಂದಿದೆ.

ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ರಾಘವೇಂದ್ರ ಆಯಿ, ಮಹಾಬಲೇಶ್ವರ ಹಾಸಿನಾಳ, ಶಂಕರ ಕುಂಬಿ, ಪಂ. ವೆಂಕಟೇಶ ಕುಮಾರ, ಕೈವಲ್ಯಕುಮಾರ ಗುರವ ಇದ್ದರು.

Previous articleಯಾಳಗಿಯ ಸದ್ಗುರು ರಾಮಪ್ಪಯ್ಯ ಮಠದಲ್ಲಿ ಸಹಸ್ರ ಲಿಂಗಗಳ ಪ್ರತಿಷ್ಠಾಪನೆ
Next articleಮಾಜಿ ಎಂಎಲ್‍ಸಿ ಅರಶದ್ ಅಲಿ ಇನ್ನಿಲ್ಲ