ಅರಿಸಿನಕ್ಕೆ ದಾಖಲೆಯ ಬೆಲೆ: ಬೆಳೆಗಾರನ ದಿಲ್‌ ಖುಷ್

0
45

ಬಾಗಲಕೋಟೆ: ಸತತ ದರ ವೈಫಲ್ಯದಿಂದ ಬಳಲುತ್ತಿದ್ದ ಅರಿಸಿನ ಬೆಳೆದಾರರಿಗೆ ಕಳೆದ ವರ್ಷ ಕೈ ಹಿಡಿದಿತು. ಪ್ರಸಕ್ತ ವರ್ಷ ಆರಂಭಿಕ ಬೆಲೆಯೇ ದಾಖಲೆಯಾಗಿದ್ದು ಪ್ರತಿ ಕ್ವಿಂಟಲ್‌ಗೆ 18 ರಿಂದ 22 ಸಾವಿರ ರೂ.ಗಳರೆಗೆ ಮಾರಾಟವಾಗುತ್ತಿದೆ. ಮಹಾರಾಷ್ಟ್ರದ ಸಾಂಗಲಿ ಮಾರುಕಟ್ಟೆಯಲ್ಲಿ ಸಂಸ್ಕರಿಸಿದ ಅರಿಸಿನ ಬೆಲೆ ಕಳೆದ ವರ್ಷದಲ್ಲಿ 20 ಸಾವಿರ ರೂ. ಗರಿಷ್ಠವಾಗಿತ್ತು. ಇದೀಗ ಆರಂಭಿಕ ಬೆಲೆ ರೈತರನ್ನೇ ಹುಬ್ಬೇರಿಸುವಂತೆ ಮಾಡಿದೆ. ಅರಿಸಿನ ಬೆಳೆಯುವ ರಾಜ್ಯಗಳಲ್ಲಿ ಕರ್ನಾಟಕ 3ನೇ ಸ್ಥಾನ ಹೊಂದಿದೆ. ಮೊದಲೆರಡು ಸ್ಥಾನ ಮಹಾರಾಷ್ಟ್ರ ಹಾಗೂ ತೆಲಂಗಾಣವಾಗಿದ್ದು, ಕಳೆದ ವರ್ಷಕ್ಕಿಂತಲೂ ಅರಿಸಿನ ಬೆಳೆಯುತ್ತಿದ್ದ ರಾಜ್ಯಗಳಲ್ಲಿ ಮತ್ತಷ್ಟು ಕುಂಠಿತಗೊಂಡಿರುವದು ಅರಿಸಿನ ಧಾರಣೆ ಏರಿಕೆಗೆ ಕಾರಣವೆಂದು ವಿಶ್ಲೇಷಿಸಲಾಗಿದೆ.
ಸಮೀಪವೇ ಇರುವ ಸಾಂಗಲಿ ಮಾರುಕಟ್ಟೆಯಲ್ಲಿ ಅತಿ ದಪ್ಪ, ದಪ್ಪ ಮತ್ತು ಸಾಮಾನ್ಯವೆಂದು ವಿಂಗಡಿಸಿದ ಅರಿಸಿನ ಕೊನೆಯ ದಿನವಗಳವರೆಗೂ ಕ್ವಿಂಟಲ್‌ಗೆ 20 ರಿಂದ 25 ಸಾವಿರ ರೂ.ಗಳ ಗರಿಷ್ಠ ಬೆಲೆಗೆ ಮಾರಾಟವಾಗಿದೆ. ಇನ್ನೂ ಆಗಸ್ಟ್‌ವರೆಗೂ ಮಾರಾಟವಾಗುವ ಅರಿಸಿನಕ್ಕೆ ದುಪ್ಪಟ್ಟು ಬೆಲೆ ಸಿಗಬಹುದೆಂಬುದು ಕೆಲ ತಜ್ಞರ ಅಭಿಪ್ರಾಯ.
ಈ ಬಾರಿಯೂ ಮಳೆ ಕೊರತೆ ಹಿನ್ನಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಅರಿಸಿನ ನಾಟಿ ಮಾಡಿಲ್ಲ. ಹೀಗಾಗಿ ಅರಿಸಿನಕ್ಕೆ ಸಹಜವಾಗಿಯೇ ಬೇಡಿಕೆಯುಂಟಾಗಿದೆ.
ಇದು ಧಾರಣೆಯಲ್ಲಿ ತೀವ್ರ ಏರಿಕೆಗೆ ಕಾರಣವಾಗಿದೆ. ಈ ಭಾಗದಲ್ಲಿ ಕಬ್ಬು ನಂತರದ ಸ್ಥಾನ ಹೊಂದಿದ್ದ ಅರಿಸಿನ ಬೆಳೆಯಿಂದ ದೂರ ಉಳಿದಿದ್ದು, ಸಾವಿರ ಲೆಕ್ಕದಲ್ಲಿದ್ದ ರೈತರು ನೂರರ ಲೆಕ್ಕದ ಎಕರೆಯಲ್ಲಿ ಬೆಳೆ ಬೆಳೆಯುವಲ್ಲಿ ಕಾರಣವಾಗಿದೆ. ಹೀಗಾಗಿ ಅಳಿದುಳಿದ ಅರಿಸಿನ ಬೆಳೆಗಾರರೇ ಪ್ರಸಕ್ತ ವರ್ಷ ಧನ್ಯರಾಗುವ ಸಾಧ್ಯತೆಯಿದೆ.

Previous articleಶ್ರೀ ನಿಮಿಷಾಂಬಾ ದೇವಾಲಯದಲ್ಲಿ ಮಾಘ ಶುದ್ಧ ಪೌರ್ಣಿಮೆ ಮಹೋತ್ಸವ
Next articleದೈವದ ಮೊರೆ ಹೋದ ತಮಿಳು ನಟ ವಿಶಾಲ್