ಕ್ರೂಸರ್ ಅಪಘಾತ: ಮೃತರ ಸಂಖ್ಯೆ ಮೂರಕ್ಕೆ ಏರಿಕೆ

0
16

ಹುಬ್ಬಳ್ಳಿ: ಧಾರವಾಡದ ಕ್ಯಾರಕೊಪ್ಪ ಬಳಿ‌ ನಡೆದ ಕ್ರೂಸರ್ ಅಪಘಾತದಲ್ಲಿ ಮೃತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
ಹಾಗೂ ಕೋಳಿಕೇರಿಯ ಸುಮಾರು 14 ಜನ ಕ್ರೂಸರ್ ತೆಗೆದುಕೊಂಡು ಕಲಕೇರಿಗೆ ಮಹಿಳೆಯೊಬ್ಬರ ಶವ ಸಂಸ್ಕಾರಕ್ಕೆಂದು ಹೊರಟಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕ್ರೂಸರ್ ಮರಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ 4 ಜನರಿಗೆ ತೀವ್ರ ಸ್ವರೂಪದ ಗಾಯವಾಗಿದ್ದವು. ಅವರ ಪರಿಸ್ಥಿತಿ ಕೂಡ ಚಿಂತಾಜನಕವಾಗಿತ್ತು. ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಕಿಮ್ಸ್‌ಗೆ ದಾಖಲಾದವರ ಪೈಕಿ ಶಾಂತವ್ವ ಎಂಬ ಮಹಿಳೆ ನಿನ್ನೆ ರಾತ್ರಿಯೇ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದರು. ಬೆಳಗಿನಜಾವ ಮಂಜುಳಾ ವನಹಳ್ಳಿ ಹಾಗೂ ರವಿ ಮಡಿವಾಳರ ಎಂಬುವರು ಮೃತಪಟ್ಬಟಿದ್ದಾರೆ ಎಂದು ಕೆಎಂಸಿಆರ್ ಐ ನಿರ್ದೇಶಕ‌ಡಾ.ಎಸ್.ಎಫ್. ಕಮ್ಮಾರ ತಿಳಿಸಿದ್ದಾರೆ.

Previous articleಕಾಶಿಯಲ್ಲಿ ಬಾಗಲಕೋಟೆ ವ್ಯಕ್ತಿ ಸಾವು
Next articleಸೈಂಟಿಸ್ಟ್ ಮಂಜ್ಯಾ ಸೇರಿ ಇನ್ನಿಬ್ಬರ ಬಂಧನ