ಅಪ್ರಾಪ್ತೆ ಮೇಲೆ ಅತ್ಯಾಚಾರ: ಇಬ್ಬರ ಬಂಧನ

ಗದಗ: ಗಜೇಂದ್ರಗಡದಲ್ಲಿ ಅಪ್ರಾಪ್ತೆಯೋರ್ವಳು ಲವ್ ಜಿಹಾದ್‌ಗೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜನಮಾನಸದಲ್ಲಿ ಇನ್ನೂ ಹಸಿರಾಗಿರುವಾಗಲೇ ನರೇಗಲ್‌ನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದನ್ನು ವಿಡಿಯೋ ಚಿತ್ರೀಕರಣ ಮಾಡಿಕೊಂಡು ಬಾಲಕಿಯನ್ನು ಪದೇ ಪದೇ ಪೀಡಿಸುತ್ತಿದ್ದ ಇಬ್ಬರನ್ನು ನರೇಗಲ್ ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿದ್ದಾರೆ. ಬಂಧಿತರನ್ನು ನರೇಗಲ್‌ನ ಸುಲೇಮಾನ್ ತಂದೆ ರಾಜೇಸಾಬ ಮೋತೆಖಾನ, ಅಲ್ತಾಫ್ ಕಾಶಿಮಸಾಬ ಬಾಬಣ್ಣವರ ಎಂದು ಗುರುತಿಸಲಾಗಿದೆ.