ಫೈನಾನ್ಸ್‌ ಸಾಲ: ಬಾಣಂತಿ, ಹಸುಗೂಸನ್ನು ಹೊರಗೆ ಹಾಕಿ ಮನೆ ಜಪ್ತಿ

0
15

ಸಾಲ ಮರುಪಾವತಿಸಿಲ್ಲ ಎಂಬ ಕಾರಣಕ್ಕೆ ಫೈನಾನ್ಸ್‌ನವರಿಂದ ಮನೆ ಜಪ್ತಿ

ಬೆಳಗಾವಿ: ಸಾಲ ವಸೂಲಿಗೆ ಬಂದ ಖಾಸಗಿ ಫೈನಾನ್ಸ್ ಸಿಬ್ಬಂದಿ, ಒಂದು ತಿಂಗಳ ಬಾಣಂತಿ ಹಾಗೂ ಹಸುಗೂಸು ಸೇರಿ ಮನೆಯ ಎಲ್ಲರನ್ನೂ ಹೊರಗೆ ಹಾಕಿದ ಘಟನೆ ನಡೆದಿದೆ.
ತಾಲೂಕಿನ ತಾರಿಹಾಳ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸಾಲ ಮರುಪಾವತಿಸಿಲ್ಲ ಎಂಬ ಕಾರಣಕ್ಕೆ ಫೈನಾನ್ಸ್‌ನವರು ಏಕಾಏಕಿ ಮನೆ ಜಪ್ತಿ ಮಾಡಿ ಬಾಣಂತಿ ಹಾಗೂ ಹಸುಗೂಸನ್ನು ಹೊರಗೆ ಹಾಕಿದ್ದಾರೆ, ತಾರಿಹಾಳ ಗ್ರಾಮದ ಗಣಪತಿ ರಾಮಚಂದ್ರ ಲೋಹಾರ ಎಂಬವರ ಮನೆಯನ್ನು ಫೈನಾನ್ಸ್ ನವರು ಜಪ್ತಿ ಮಾಡಿದ್ದರಿಂದ ಬಾಣಂತಿ ಹಾಗೂ ಕುಟುಂಬ ಬೀದಿಪಾಲಾಗಿದ್ದಾರೆ. ಖಾಸಗಿ ಫೈನಾನ್ಸ್‌ನಲ್ಲಿ ಲೋಹಾರ ಕುಟುಂಬ 5 ವರ್ಷಗಳ ಹಿಂದೆ ಮನೆ ನಿರ್ಮಾಣಕ್ಕಾಗಿ ಐದು ಲಕ್ಷ ರೂ. ಗೃಹಸಾಲ ಪಡೆದಿದ್ದರು. ಗಣಪತಿ ಲೋಹಾರ ಬಳಿಕ ಮೂರು ವರ್ಷಗಳ ಕಾಲ ನಿರಂತರ ಕಂತು ತುಂಬಿದ್ದರು. ವೃದ್ಧ ತಾಯಿಗೆ ಅನಾರೋಗ್ಯ ಮಗಳ ಹೆರಿಗೆ ಹಿನ್ನೆಲೆಯಲ್ಲಿ ಕಳೆದ 6 ತಿಂಗಳಿಂದ ಕಂತು ಪಾವತಿ ಅಸಾಧ್ಯವಾಗಿತ್ತು, ಇನ್ನು ಕಂತು ತುಂಬದ ಹಿನ್ನೆಲೆಯಲ್ಲಿ ಕೋರ್ಟ್ ಮೊರೆ ಹೋಗಿದ್ದ ಫೈನಾನ್ಸ್ ಕೋರ್ಟ್ ಆದೇಶದಂತೆ ಪೊಲೀಸರು ಹಾಗೂ ವಕೀಲರ ಸಮ್ಮುಖದಲ್ಲಿ ಮನೆ ಜಪ್ತಿ ಮಾಡಲಾಗಿದೆ.

Previous articleವಿಜಯಪುರ ಬಳಿ ಅಪಘಾತ 3 ಸಾವು: ಸಚಿವ ಪಾಟೀಲ್‌ ಸಂತಾಪ
Next articleಹೆಬ್ಬಾಳ್ಕರ್ ಆರೋಗ್ಯ ವಿಚಾರಿಸಿದ ಶಿವಾಚಾರ್ಯ ಮಹಾಸ್ವಾಮಿಗಳು