ವಿಮಾನ ನಿಲ್ದಾಣದಲ್ಲೂ ಅಗ್ಗದ ಬೆಲೆಯಲ್ಲಿ ಚಹಾ

0
26

ಉಡಾನ್ ಯಾತ್ರಿ ಕೆಫೆಯಲ್ಲಿ ವಿಮಾನ ನಿಲ್ದಾಣದಲ್ಲಿ ಅಗ್ಗದ ಬೆಲೆಯಲ್ಲಿ ಚಹಾ ಸವಿಯಬಹುದಾಗಿದೆ.

ಕೋಲ್ಕತ್ತಾ: ನೇತಾಜಿ ಸುಭಾಸ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು “ಉಡಾನ್ ಯಾತ್ರಿ ಕೆಫೆ” ಯನ್ನು ಪ್ರಾರಂಭಿಸುವುದರೊಂದಿಗೆ ಕೈಗೆಟುಕುವ ದರದಲ್ಲಿ ಉಪಹಾರ ನಿಡಲಿದೆ.
ಎಲ್ಲಾ ಪ್ರಯಾಣಿಕರಿಗೆ ಆಹಾರ ಮತ್ತು ಪಾನೀಯಗಳನ್ನು ಅಗ್ಗದ ಬೆಲೆಯಲ್ಲಿ ಸವಿಯಲು ಪ್ರಾಯೋಗಿಕ ಯೋಜನೆ ಆರಂಭವಾಗಿದೆ, ಈ ಕೆಫೆಯಲ್ಲಿ 10 ರೂ.ಗೆ ಚಹಾ ಮತ್ತು ಪ್ಯಾಕೇಜ್ ಮಾಡಿದ ಕುಡಿಯುವ ನೀರು, 20 ರೂ.ಗೆ ಸಮೋಸಾ ಮತ್ತು ಸಿಹಿ ಐಟಂ ಸೇರಿದಂತೆ ಆರ್ಥಿಕ ದರಗಳಲ್ಲಿ ಅಗತ್ಯ ಉಪಹಾರಗಳನ್ನು ಒದಗಿಸುತ್ತದೆ. ಅದರ ಉದ್ಘಾಟನೆಯ ನಂತರ, ಕೆಫೆಯು ಪ್ರತಿದಿನ 900 ಗ್ರಾಹಕರನ್ನು ಆಕರ್ಷಿಸುತ್ತಿದೆ ಮತ್ತು ಅದು ಪ್ರಾರಂಭವಾದಾಗಿನಿಂದ ಸುಮಾರು 27,000 ಗ್ರಾಹಕರು ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (AAI) ಈ ಉಪಕ್ರಮವನ್ನು ದೇಶಾದ್ಯಂತ ಇತರ ವಿಮಾನ ನಿಲ್ದಾಣಗಳಿಗೆ ವಿಸ್ತರಿಸುವ ಯೋಜನೆಯನ್ನು ಸೂಚಿಸಿದೆ. ಕೋಲ್ಕತ್ತಾದ ಪ್ರಾಯೋಗಿಕ ಯೋಜನೆಯು ಯಶಸ್ವಿಯಾದರೆ, ರಾಷ್ಟ್ರವ್ಯಾಪಿ AAI-ಚಾಲಿತ ವಿಮಾನ ನಿಲ್ದಾಣಗಳಲ್ಲಿ ಶೀಘ್ರದಲ್ಲೇ ಇದೇ ರೀತಿಯ ಕೆಫೆಗಳನ್ನು ಸ್ಥಾಪಿಸಬಹುದು ಎಂದಿದ್ದಾರೆ.

Previous articleರೇಣುಕಾಸ್ವಾಮಿ ಕೊಲೆ ಪ್ರಕರಣ: ಏಳು ಆರೋಪಿಗಳಿಗೆ ಸುಪ್ರೀಂ ಕೋರ್ಟ್‌ನಿಂದ ನೋಟೀಸ್
Next articleಕಲಬುರಗಿ ರೈಲ್ವೇ ವಿಭಾಗೀಯ ಕಚೇರಿಗಾಗಿ ರೈಲು ತಡೆಗೆ ಯತ್ನ