ಬಾಣಂತಿಯರ ಸರಣಿ ಸಾವು : ಮಾಜಿ ಸಚಿವ ಶ್ರೀರಾಮುಲು ಧರಣಿ

0
114

ಬಳ್ಳಾರಿ: ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ದ ಮಾಜಿ ಸಚಿವ ಶ್ರೀರಾಮುಲು ಧರಣಿ ನಡೆಸುತ್ತಿದ್ದಾರೆ.
ಬಳ್ಳಾರಿ ಜಿಲ್ಲಾಸ್ಪತ್ರೆ ಮುಂದೆ ರಾಮುಲು ನೇತೃತ್ವದಲ್ಲಿ ಧರಣಿ ನಡೆದಿದ್ದು, ಬಿಜೆಪಿ ಮುಖಂಡರು ಸಾಥ್ ನೀಡಿದ್ದಾರೆ. ಈ ವೇಳೆ ಮಾತನಾಡಿದ ಶ್ರೀರಾಮುಲು, ಇಂದಿನಿಂದ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ. ಬಾಣಂತಿಯರ ಸರಣಿ ಸಾವುಗಳು ನಡೆದಿದ್ದರೂ ಯಾವುದೇ ಕ್ರಮವಿಲ್ಲ. ಸರ್ಕಾರ ಕಣ್ಮುತ್ತಿ ಕುಳಿತಿದೆ. ಒಂದೇ ಒಂದು ಜೀವ ಮೃತಪಟ್ಟರೂ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿತ್ತು. ಆರೋಗ್ಯ ಸಚಿವರು ನನ್ನ ತಪ್ಪು ಇದ್ರೆ ರಾಜೀನಾಮೆ ನೀಡುತ್ತೇನೆ ಎನ್ನುತ್ತಾರೆ ನಾವು ರಾಜೀನಾಮೆ ಕೇಳುತ್ತಿಲ್ಲ. ಕೆಲಸ ಮಾಡಿ ಮೃತಕುಟುಂಬಸ್ಥರಿಗೆ ಪರಿಹಾರ ನೀಡಬೇಕಿತ್ತು. ಸಿಎಂ ಸಿದ್ದರಾಮಯ್ಯ ಆಸ್ಪತ್ರೆಗೆ ಭೇಟಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Previous articleಸಚ್೯ ವಾರಂಟ್ ಸಹಿತ ಜಿಲ್ಲಾ ಆಸ್ಪತ್ರೆಗೆ ಲಗ್ಗೆ ಇಟ್ಟ ಲೋಕಾಯುಕ್ತ ಅಧಿಕಾರಿಗಳು
Next articleವಾರ್ಡ್‌ಗೆ ಸೌಲಭ್ಯ ಆಗ್ರಹಿಸಿ: ನಗರಸಭೆ ಸದಸ್ಯನಿಂದ ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟನೆ