ಚಾಕು ಇರಿತ ಪ್ರಕರಣ: ಆರು ಜನ ಬಂಧನ

0
10

ಹುಬ್ಬಳ್ಳಿ: ಹಳೇಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಆನಂದ ನಗರದ ಮದಿನಿ ಮಸೀದಿ ಬ್ರಿಡ್ಜ್ ಹತ್ತಿರ ಕಳೆದ‌ ರಾತ್ರಿ ನಡೆದ ಚಾಕು ಇರಿತ ಪ್ರಕರಣದಲ್ಲಿ ಪೊಲೀಸರು ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಅಸ್ಲಾಂ ಎಂಬುವನಿಗೆ ಚಾಕು ಇರಿಯಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಸಲ್ಮಾನ, ಹುಸೇನಸಾಬ್, ಅಷ್ಪಾಕ್, ಶಾನು, ಮಲ್ಲಿಕ್, ರೋಹಿಬ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಎರಡು ಗುಂಪುಗಳ ನಡುವೆ ಗಲಾಟೆ ನಡೆದು ಚಾಕು ಹಾಕುವ ಹಂತಕ್ಕೆ ಹೋಗಿದೆ. ಈ ವೇಳೆ ಒಂದು ಗುಂಪು ಅಸ್ಲಾಂನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದೆ. ದೂರು ಪ್ರತಿದೂರು ದಾಖಲಿಸಿಕೊಂಡ ಹಳೇಹುಬ್ಬಳ್ಳಿ ಪೊಲೀಸರು ಆರೋಪಿಗಳನ್ನು ಹೆಡೆಮುರಿಕಟ್ಟಿದ್ದಾರೆ.

Previous articleಯೋಜನೆ ಸ್ಥಗಿತ ಮಾಡಲ್ಲ: ನಮ್ಮ ಸರ್ಕಾರ ಇರುವವರೆಗೆ ಗೃಹಲಕ್ಷ್ಮಿಯ ಹಣ
Next articleSSLC-3 ಫಲಿತಾಂಶ ಪ್ರಕಟ