ಡಾ.ಗಂಗೂಬಾಯಿ ಹಾನಗಲ್ ಗುರುಕುಲ ಉಳಿವಿಗಾಗಿ ಎಬಿವಿಪಿ ಪ್ರತಿಭಟನೆ

0
8

ಹುಬ್ಬಳ್ಳಿ : ಡಾ.ಗಂಗೂಬಾಯಿ ಹಾನಗಲ್ ಗುರುಕುಲ ಉಳಿವಿಗಾಗಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಗುರುಕುಲದ ಮುಂದೆ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿಗಳೇ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಪಟ್ಟು ಹಿಡಿದರು. ತಹಶೀಲ್ದಾರ ಅವರಿಗೆ ಮನವಿ ಕೊಡುವುದಿಲ್ಲ. ಜಿಲ್ಲಾಧಿಕಾರಿಗಳೇ ಬರಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ತಹಶೀಲ್ದಾರ ಕಲಗೌಡ ಪಾಟೀಲ ಆಗಮಿಸಿ ಮನವಿ ಸ್ವೀಕಾರಕ್ಕೆ ಮುಂದಾದರೂ ಮನವಿ ಕೊಡಲಿಲ್ಲ.
ಕೂಡಲೇ ಬರದೇ ಇದ್ದರೆ ಗುರುಕುಲದೊಳಗಡೆ ನಡೆದಿರುವ ಭರತ ನಾಟ್ಯ ಬೋರ್ಡ್ ಪರೀಕ್ಷೆ ಗೆ ಅಡ್ಡಿ ಪಡಿಸುವುದಾಗಿ ಎಚ್ಚರಿಸಿದರು.

Previous articleಪ್ರವಾಹ ಹಾನಿ: ಶಾಶ್ವತ ಪರಿಹಾರಕ್ಕಾಗಿ ಆಗ್ರಹಿಸಿ ಮುಧೋಳ ಬಂದ್
Next articleಬಿಜೆಪಿಯವರು ರಾಜಕಾರಣ ಮಾಡುವುದು ಸರಿಯಲ್ಲ