ಕೊಪ್ಪಳ: ನಗರದ ವಿಪ್ರ ಮುಖಂಡರು ಹಾಗೂ ಮಾಜಿ ಕಾರ್ಪೊರೇಟರ್ ವೇಣುಗೋಪಾಲ ಜಹಗೀರ್ದಾರ್ ಅವರ ಮನೆಯಲ್ಲಿ ಭಾನುವಾರ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ ಹಾರನಹಳ್ಳಿ ನೇತೃತ್ವದಲ್ಲಿ ನಡೆದ ವಿಪ್ರ ಮುಖಂಡರ ಸಭೆಯು ಯಶಸ್ವಿಯಾಗಿ ಜರುಗಿತು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ನಡೆದು ಬಂದ ಹಾದಿ ಹಾಗೂ ವಿಪ್ರ ಸಮಾಜ ಎದುರಿಸುತ್ತಿರುವ ಸವಾಲುಗಳ ಕುರಿತು ಮುಖಂಡರ ಜತೆಗೆ ಚರ್ಚಿಸಿದರು.
ಕೊಪ್ಪಳ ಜಿಲ್ಲೆಯಲ್ಲೂ ಕೂಡಾ ವಿಪ್ರ ಸಂಘಟನೆಯನ್ನು ಇನ್ನಷ್ಟು ಬಲಗೊಳಿಸುವುದಾಗಿ ಸಮಾಜದ ಪ್ರಮುಖರಾದ ಅಪ್ಪಣ್ಣ ಪದಕಿ, ಡಾ.ಕೆ.ಜಿ.ಕುಲಕರ್ಣಿ, ನಗರಸಭೆ ಮಾಜಿ ಅಧ್ಯಕ್ಷ ಸುರೇಶ್ ದೇಸಾಯಿ, ನಗರಸಭೆ ಮಾಜಿ ಸದಸ್ಯ ಪ್ರಾಣೇಶ್ ಮಾದಿನೂರು, ಮಹಿಳಾ ಮುಖಂಡರಾದ ಮಧುರ ಕರ್ಣಂ, ವೈಷ್ಣವಿ ಹುಲಗಿ, ಲತಾ ಮುಧೋಳ್, ವಾಣಿ ದೇಶಪಾಂಡೆ, ಸೌಮ್ಯ ಗುಡಿ ಹಾಗು ಶಾಸ್ತ್ರಿ ಮಾಲಿನಿ ಭರವಸೆ ನೀಡಿದರು.
ಸಮಾಜದ ಮುಖಂಡರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ ಹಾರನಹಳ್ಳಿಗೆ ಸನ್ಮಾನಿಸಿ, ಗೌರವಿಸಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ(ರಿ)ದ ಸಂಘಟನಾ ಕಾರ್ಯದರ್ಶಿ ಕಾರ್ತಿಕ್ ಬಾಪಟ್ ಮಾತನಾಡಿ, ಎಲ್ಲ ಮುಖಂಡರು ಅಶೋಕ ಹಾರನಹಳ್ಳಿ ಅವರ ವಿಪ್ರ ಸಮಾಜದೆಡೆಗಿರುವ ಕಾಳಜಿಯನ್ನು ಕೊಂಡಾಡಿದರು. ಹಾಗೂ ಅವರ ಮುಖಂಡತ್ವದಲ್ಲಿ ವಿಪ್ರ ಸಮಾಜದ ಸಂಘಟನೆ ಬೆಂಗಳೂರಿನಿಂದ ಸಣ್ಣ ಸಣ್ಣ ಪಟ್ಟಣಗಳ ಕಡೆಗೂ ವಿಸ್ತರಿಸಿರುವುದು ಹೆಮ್ಮೆಯ ವಿಷಯ ಅಗಿಹಾಗು ಮುಂದೆಯೂ ಇದು ಹೀಗೆ ನಡೆಯಬೇಕು ಎಂದು ವಿನಂತಿಸಿದರು.