ಬೆಳಗಾವಿ: ರಾಜಕೀಯ ಮತ್ತು ಕಾನೂನು ಹೋರಾಟಕ್ಕೆ ಸಿದ್ಧ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಮುಡಾ ಪ್ರಕರಣದಲ್ಲಿ ಬಿಜೆಪಿ ಮಾಡುತ್ತಿರುವ ಆರೋಪಕ್ಕೆ ಹೋರಾಟಕ್ಕೆ ರೆಡಿಯಾಗಿದ್ದೇವೆ, ಈಗಾಗಲೇ, ಅಬ್ರಾಹಂ ಕೊಟ್ಟಿರುವ ಕಂಪ್ಲೇಂಟ್‌ನ್ನ ತಿರಸ್ಕಾರ ಮಾಡಲು ನಾನು ಮನವಿ ಮಾಡಿದ್ದೇನೆ ಎಂದರು.
ಅತೀವೃಷ್ಠಿಯಿಂದಾದ ಹಾನಿಯನ್ನು ನೋಡಲು ಬೆಳಗಾವಿಗೆ ಬಂದಿದ್ದೇನೆ. ಪರಿಹಾರ ಕೊಡುವ ಕೆಲಸವನ್ನ ಸರಕಾರ ಮಾಡುತ್ತಿದೆ, ಪ್ರವಾಹದ ಗ್ರಾಮಗಳಿಗೆ ಶಾಶ್ವತ ಪರಿಹಾರದ ಕುರಿತಂತೆ ತಿರ್ಮಾನ ಮಾಡಲಾಗುತ್ತಿದೆ. ಜನರು ಸಹಕಾರ ಕೊಡಬೇಕು ಎಂದರು.