ಮುಂಬೈ: ಐಸಿಸಿ ಟಿ-೨೦ ವಿಶ್ವಕಪ್ ಪಂದ್ಯಾವಳಿಯಲ್ಲಿ ಪ್ರಶಸ್ತಿ ಪಡೆದ ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ೧೨೫ ಕೋಟಿ ರೂ ಬಹುಮಾನ ಘೋಷಿಸಿದೆ. ಬಿಸಿಸಿಐ ಕಾರ್ಯದರ್ಶಿ ಜಯ ಶಾ, ವಿಜಯಿ ತಂಡಕ್ಕೆ ೧೨೫ ಕೋಟಿ ರೂಗಳ ದೊಡ್ಡ ಮೊತ್ತದ ಬಹುಮಾನ ಘೋಷಿಸಿದ್ದಲದೇ ತಂಡದ ಆಟಗಾರರು, ಕೋಚ್ ಹಾಗೂ ಸಹಾಯಕ ಸಿಬ್ಬಂಧಿಯನ್ನು ಅಭಿನಂದಿಸಿದ್ದಾರೆ.