ಮೂರು ಶತಕಗಳ ಕಾಯುವಿಕೆ ಅಂತ್ಯ

0
27

ಹುಬ್ಬಳ್ಳಿ: “ನಂದಿಯ ಜೊತೆಗೆ ಹಿಂದೂಗಳ ಮೂರು ಶತಕಗಳ ಶ್ರದ್ಧೆಯ ಕಾಯುವಿಕೆ ಇಂದು ಅಂತ್ಯವಾಯಿತು” ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದ್ದಾರೆ.
“ಕಾಶಿ ಜ್ಞಾನವಾಪಿ ಮಂದಿರ”ದಲ್ಲಿ ಪೂಜೆ ನಡೆದಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು, “ನಂದಿಯ ಜೊತೆಗೆ ಹಿಂದೂಗಳ ಮೂರು ಶತಕಗಳ ಶ್ರದ್ಧೆಯ ಕಾಯುವಿಕೆ ಇಂದು ಅಂತ್ಯವಾಯಿತು.” “ಕಾಶಿ ಜ್ಞಾನವಾಪಿ ಮಂದಿರ”ದಲ್ಲಿ ನ್ಯಾಯಾಲಯದ ಆದೇಶದಂತೆ ಹಿಂದೂ ಸಂಪ್ರದಾಯದಂತೆ ಪೂಜಾ ಕಾರ್ಯ ನೆರವೇರಿದ ಪುಣ್ಯದ ಕ್ಷಣ. ಜೈ ಮಹಾಕಾಲ್.. ಎಂದು ಪೂಜೆ ಸಲ್ಲಿಸುತ್ತಿರುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

Previous articleರಾಜಕಾರಣದಲ್ಲಲ್ಲ ಈ ದೇಶದಲ್ಲೇ ಇರಲು ನಾಲಾಯಕ್‌
Next article“ಇದು ವಿಕಸಿತ ಭಾರತ ಅಲ್ಲ ವಿನಾಶಕಾರಿ ಭಾರತದ ಬಜೆಟ್”