ಕಲಬುರಗಿ: ಕಲಬುರಗಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸಚಿವ ಶಿವಾನಂದ ಪಾಟೀಲ್ ಭೇಟಿ ನೀಡಿ , ವರ್ತಕರ,ಅಧಿಕಾರಿಗಳ ಹಾಗೂ ವಿಧಾನ ಪರಿಷತ್ ಸದಸ್ಯರ ಸಭೆ ನಡೆಸಿದರು.
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸಮಸ್ಯೆಗಳ ಕುರಿತು ಪರಿಶೀಲಿಸಿದರು.
ಎಪಿಎಂಸಿ ಗಳಲ್ಲಿ ತೂಕದ ಯಂತ್ರ ಹಾಕುವ ಚಿಂತನೆಯಿದೆ, ಸಕ್ಕರೆ ಕಾರ್ಖಾನೆಗಳಲ್ಲಿ ರೈತರಿಗೆ ತೂಕದಲ್ಲಿ ಮೋಸ ಆಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಹೀಗಾಗಿ ಎಪಿಎಂಸಿ ಗಳಲ್ಲಿ ತೂಕದ ಯಂತ್ರ ಹಾಕುವ ಪ್ಲ್ಯಾನ್ ಇದೆ ಎಂದರು.
ಎಪಿಎಂಸಿ ಮತ್ತು ತೂಕ ಮತ್ತು ಅಳತೆ ಇಲಾಖೆ ಅಧಿಕಾರಿಗಳು ತಪ್ಪು ಮಾಡಿದ್ದರಿಂದ ಈ ಸಮಸ್ಯೆ ಉದ್ಬವವಾಗಿದೆ ಎಂದರು. ಅಲ್ಲದೆ ಎಪಿಎಂಸಿ ಗಳಲ್ಲಿ ವಾಣಿಜ್ಯ ಮಳಿಗೆಗಳು ತಲೆ ಎತ್ತಿವೆ. ಲೈಸನ್ಸ್ ದಾರರು ಅಂಗಡಿ ಪಡೆದು ಬಾಡಿಗೆ ಕೊಟ್ಟಿದ್ದಾರೆ, ಅಂಥವರ ಲೈಸನ್ಸ್ ರದ್ದು ಮಾಡುವುದಾಗಿ ಎಚ್ಚರಿಸಿದರು. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೃಷಿ ಚಟುವಟಿಕೆಗಳು ನಡೆಯಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಎಪಿಎಂಸಿ ಕಾಯ್ದೆ ಜಾರಿಗೆ ಬಗ್ಗೆ ವಿಧಾನಪರಿಷತ್ ಸದಸ್ಯರ ಅಧ್ಯಯನ ತಂಡ ಶಿವಮೊಗ್ಗ, ಕಲಬುರಗಿ ಮತ್ತು ರಾಯಚೂರು ಎಪಿಎಂಸಿ ಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸುತ್ತಿದೆ ಎಂದರು. ವರದಿ ಆಧರಿಸಿ ಎಪಿಎಂಸಿ ಕಾಯ್ದೆ ಜಾರಿ ಮಾಡುವುದಾಗಿ ಹೇಳಿದರು.
ನಂತರ ವರ್ತಕರ ಅಹವಾಲು ಸ್ವೀಕರಿಸಿದರು. ವಿಧಾನಪರಿಷತ್ ಸದಸ್ಯರಾದ ಡಿ.ಎಸ್. ಅರುಣ, ಕೇಶವ ಪ್ರಸಾದ್, ತಿಪ್ಪೇಸ್ವಾಮಿ, ಶಶೀಲ್ ಜಿ. ನಮೋಶಿ, ಸುನೀಲ್ ವಲ್ಲ್ಯಾಪುರ ಮತ್ತಿತರರಿದ್ದರು.