ಬೆಂಗಳೂರು: ರಾಮಭಕ್ತ ಹನುಮನನ್ನು ಕೆಣಕಿದ ರಾವಣನ ಪರಿಸ್ಥಿತಿ ಏನಾಯಿತು ಎನ್ನುವುದು ಜಗತ್ತಿಗೇ ತಿಳಿದಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಸಿ ಎನ್ ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.
ಹುಬ್ಬಳ್ಳಿಯ ಕರಸೇವಕ ಶ್ರೀಕಾಂತ ಬಂಧನ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿರುವ ಅವರು ರಾಮಭಕ್ತ ಹನುಮನನ್ನು ಕೆಣಕಿದ ರಾವಣನ ಪರಿಸ್ಥಿತಿ ಏನಾಯಿತು ಎನ್ನುವುದು ಜಗತ್ತಿಗೇ ತಿಳಿದಿದೆ, ಹನುಮನುದಿಸಿದ ನಾಡಿನ ರಾಮಭಕ್ತರನ್ನು ಕೆಣಕುತ್ತಿರುವ ಕಾಂಗ್ರೆಸ್ ಸರ್ಕಾರದ ಭವಿಷ್ಯ ಏನಾಗಬಹುದೆಂಬ ಅರಿವಿರಲಿ ಎಂದರು. ಜಗತ್ತಿನ ಸಮಸ್ತ ರಾಮಭಕ್ತರ ಐದು ಶತಮಾನಗಳ ಕನಸು ನನಸಾಗುತ್ತಿರುವ ಶುಭ ಸಂದರ್ಭದಲ್ಲಿ ಪವಿತ್ರ ರಾಮ ಮಂದಿರಕ್ಕಾಗಿ ಹೋರಾಟ ನಡೆಸಿದ ಕರಸೇವಕರ 30ಕ್ಕೂ ವರ್ಷ ಹಳೆಯ ಪ್ರಕರಣಗಳನ್ನು ಕೆದಕಿ ಶ್ರೀಕಾಂತ್ ಪೂಜಾರಿ ಸಹಿತ ರಾಮ ಭಕ್ತರನ್ನು ಬಂಧಿಸುತ್ತಿರುವ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಬೃಹತ್ ಪ್ರತಿಭಟನೆ ನಡೆಸಲಾಯಿತು.