ಹರಿಪ್ರಸಾದ ಬಂಧನಕ್ಕೆ ಬೆಲ್ಲದ ಆಗ್ರಹ

0
22
ಅರವಿಂದ ಬೆಲ್ಲದ

ಹುಬ್ಬಳ್ಳಿ: ಗೋದ್ರಾ ಹತ್ಯಾಕಾಂಡದ ಮಾದರಿಯ ಕೃತ್ಯ ಕರ್ನಾಟಕ ನಡೆತಲಿದೆ ಎಂದು ಹೇಳಿಕೆ ನೀಡಿರುವ ಬಿ.ಕೆ. ಹರಿಪ್ರಸಾದ ವಿರುದ್ಧ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ತೀವೃ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಗೆ ಕೇವಲ‌ ಮುಸ್ಲಿಮರು ಮತ‌ ಹಾಕಿದ್ದಾರಾ. ಹಿಂದುಗಳು ವೋಟ್ ಹಾಕಿಲ್ವಾ. ಜವಾಬ್ದಾರಿಯುತ ಸರ್ಕಾರ ಎಲ್ಲ ಸಮಯದಾಯಗಳ ರಕ್ಷಣೆಗೆ ನಿಲ್ಲಬೇಕು. ಗೋದ್ರಾ‌‌ ರೀತಿಯ ಘಟನೆ ಮರುಕಳಿಸಲಿದೆ‌ ಎಂಬ ಹೇಳಿಕೆಯ ಆಧಾರದ ಮೇಲೆ ಹರಿಪ್ರಸಾದ ಅವರನ್ನು ಬಂಧಿಸಬೇಕು. ಮತಿಯ ಭಾವನೆ ಕೆರಳಿಸಿ ಮುಸ್ಲಿಂ ಸಮಾಜದಿಂದ ಹಿಂದೂಗಳ ಮೇಲೆ ದಾಳಿ ಮಾಡಿಸುವ‌ ಹುನ್ನಾರ ಇದಾಗಿದೆ ಎಂದು ಕಿಡಿ ಕಾರಿದರು.
ಸರ್ಕಾರ ಈ‌ ಕೂಡಲೇ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ರಾಮ, ಚೈತ್ರ ಯುಗದವನು‌. ಒಳ್ಳೆ ಆಡಳಿತಕ್ಕೆ ರಾಮ ರಾಜ್ಯ ಆದರ್ಶ. ಅಂತಹ ರಾಮನ ದೇವಸ್ಥಾನ ಉದ್ಘಾಟನೆ ಎಂದರೆ ಅದು ಸಾರ್ವಜನಿಕ ಕಾರ್ಯಕ್ರಮ. ಇದರಲ್ಲಿ ರಾಜಕೀಯ ಮಾಡಬಾರದು ಎಂದು ಆಗ್ರಹಿಸಿದರು.

Previous articleಕರಸೇವಕ ಬಂಧನ ಖಂಡಿಸಿ ಬಿಜೆಪಿ ಪ್ರತಿಭಟನೆ
Next articleಹನುಮನನ್ನು ಕೆಣಕಿದ ರಾವಣನ ಪರಿಸ್ಥಿತಿ ಏನಾಯಿತು