ಹೊಸ ಬಾಟಲಿ ಹಳೆ ವೈನ್ ನೋ ರೀಯಾಕ್ಷನ್

0
17

ಚಿತ್ರದುರ್ಗ: ಹೊಸ ಬಾಟಲಿ ಹಳೆ ವೈನ್ ನೋ ರೀಯಾಕ್ಷನ್ ಎಂದು ಚಿತ್ರದುರ್ಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದ್ದಾರೆ.
ಬಿಜೆಪಿ ನೂತನ ರಾಜ್ಯ ಅಧ್ಯಕ್ಷ ವಿಜಯೇಂದ್ರ ನೇಮಕ ವಿಚಾರವಾಗಿ ಪ್ರತಿಕ್ರಿಯಿಸರುವ ಅವರು ಹೊಸ ಬಾಟಲಿ ಹಳೆ ವೈನ್ ನೋ ರೀಯಾಕ್ಷನ್ ಎಂದ ಅವರು, ಬಿಜೆಪಿಯಲ್ಲಿ ಹಲವರ ಅಸಮಧಾನ ಚರ್ಚೆ ವಿಚಾರವಾಗಿ ಅವರ ಪಕ್ಷದಲ್ಲಿ ಅಸಮಾಧಾನ ಅವರ ಆಂತರಿಕ ವಿಚಾರ, ನಾವು ಮೂಗು ತೂರಿಸಲ್ಲ. ನಮ್ಮ ಸಿದ್ದಾಂತ ಬೇರೆ, ಅವರ ಸಿದ್ದಾಂತ ಬೇರೆ, ಅವರು ಜಾತಿ ಸಮಾಜ ಒಡೆದು ಆಳುವ ನೀತಿಯನ್ನ ನೋಡುತ್ತಿದ್ದೇವೆ. ಯಾರನ್ನೇ ನೇಮಕ ಮಾಡಿದರೂ ರಾಜ್ಯದಲ್ಲಿ ಬಿಜೆಪಿ ಜನರ ಆಶೀರ್ವಾದ ಪಡೆಯಲು ಸಾಧ್ಯವಿಲ್ಲ. DK ಶಿವಕುಮಾರ್‌ಗೆ ವಿಜಯೇಂದ್ರ ಅವರನ್ನ ಕಂಪೇರ್ ಮಾಡ್ಬೇಡಿ. ಅವರ ಅನುಭವ, ತಾಳ್ಮೆ, ಪಕ್ಷ ಸಂಘಟನೆ ಮಾಡಿ ಪಕ್ಷ ಅಧಿಕಾರಕ್ಕೆ ತಂದಿದ್ದಾರೆ. ಎಲ್ಲಾ ಜಾತಿಯವರು ನಮ್ಮ ಪಕ್ಷದ ಜೊತೆಗೆ ಇದ್ದಾರೆ ಎಂದರು, ಇನ್ನು ಎಸ್.ಟಿ.ಸೋಮಶೇಖರ್ ಜಾಮೂನು- ವಿಷ ಹೇಳಿಕೆ ವಿಚಾರವಾಗಿ ಸೋಮಶೇಖರ್ ನನ್ನ ಆಪ್ತ, ಅವರ ಮೈಯಲ್ಲಿ ಕಾಂಗ್ರೆಸ್ ರಕ್ತ ಹರಿಯುತ್ತಿದೆ, ಹಲವು ಕಾರಣಗಳಿಂದ ಆಪರೇಷನ್ ಕಮಲಕ್ಕೆ ಹೋಗಿದ್ದರು, ವಾಪಸ್ ಬರುತ್ತಾರೆ. ರಾಜ್ಯದ್ಯಕ್ಷ ನೇಮಕ ಮಾಡಿದ ಕುರಿತು ಕಾಂಗ್ರೇಸನವರು ಗೇಲಿ‌ ಮಾಡಿಲ್ಲ BJP ಇನ್ನೂ ಕೂಡಾ ವಿರೋಧ ಪಕ್ಷದ ನಾಯಕರ ನೇಮಕ ಮಾಡಿಲ್ಲ ಎಂದರು.

Previous article40 ಸಾವಿರ ಕೋಟಿ ಹೂಡಿಕೆ, 1 ಲಕ್ಷ ಉದ್ಯೋಗ ಸೃಷ್ಟಿ
Next articleಪರಿಸರಸ್ನೇಹಿ ಹಸಿರು ಕೃಷಿಗಾಗಿ ನ್ಯಾನೊ ಗೊಬ್ಬರಗಳು