ಸಾಲ ಬಾಧೆ ತಾಳಲಾರದೆ ನೇಕಾರ ಆತ್ಮಹತ್ಯೆ

0
18

ರಬಕವಿ-ಬನಹಟ್ಟಿ: ಸಾಲ ಬಾಧೆ ತಾಳದೇ ಮನನೊಂದು ತಮ್ಮದೇ ಕಾರ್ಖಾನೆ ಶೆಡ್‌ನಲ್ಲಿ ನೇಣು ಬಿಗಿದುಕೊಂಡು ನೇಕಾರನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದಲ್ಲಿ ಬುಧವಾರ ಬೆಳಗಿನ ಜಾವ ನಡೆದಿದೆ.
ನಾವಲಗಿ ಗ್ರಾಮದ ಭೀಮಪ್ಪ ಕಲ್ಲಪ್ಪ ಮಡಿವಾಳ(45) ಆತ್ಮಹತ್ಯೆಗೆ ಶರಣಾಗಿರುವ ನೇಕಾರ. ಹಲವಾರು ವರ್ಷಗಳಿಂದ ನೇಕಾರಿಕೆ ಉದ್ದಿಮೆ ಕೈಕೊಟ್ಟ ಕಾರಣ ಹಾನಿಯಾಗಿತ್ತು. ಅಲ್ಲದೆ ಅಷ್ಟೊಂದು ಆದಾಯ ಇಲ್ಲದ್ದರಿಂದ ಅವರಿವರ ಬಳಿ ಮಾಡಿಕೊಂಡಿದ್ದ ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

Previous articleನಾನು ಸಕ್ರಿಯ ರಾಜಕಾರಣಿ ರೆಡಿಮೇಡ್ ಫುಡ್ ಅಲ್ಲ
Next articleಗಾಂಜಾ ಮಾರಾಟ: ಮೂವರು ಪೊಲೀಸರ ವಶಕ್ಕೆ