ಕಾಮಿಡಿ ಸ್ಟಾರ್ ಚಂದ್ರಪ್ರಭಾ ಕಾರು ಪೊಲೀಸ್ ವಶ

0
7

ಚಿಕ್ಕಮಗಳೂರು: ಕಳೆದೆರಡು ದಿನಗಳ ಹಿಂದೆ ನಡೆದ ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿ ಕಾಮಿಡಿ ನಟ ಚಂದ್ರಪ್ರಭಾ ಅವರ ಕಾರನ್ನು ಟ್ರಾಫಿಕ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಂದ್ರಪ್ರಭಾ ಅವರು ಅಪಘಾತ ಮಾಡಿ ಗಾಡಿ ನಿಲ್ಲಿಸದೇ ಹೋಗಿದ್ದು, ಅಪಘಾತಕ್ಕೀಡಾದ ಯುವಕನಿಗೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಬಗ್ಗೆ ಚಿಕ್ಕಮಗಳೂರು ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಶುಕ್ರವಾರ ಠಾಣೆಗೆ ಹಾಜರಾದ ಕಾಮಿಡಿ ನಟ ಚಂದ್ರಪ್ರಭಾ ಅವರು ಬಹಿರಂಗ ಕ್ಷಮೆ ಯಾಚಿಸಿದ್ದು, ಯುವಕ ಮದ್ಯ ಸೇವಿಸಿದ್ದಾರೆ ಎಂದು ತಪ್ಪು ಮಾಹಿತಿ‌ ನೀಡಿದ್ದೇನೆ. ಆಸ್ಪತ್ರೆಗೆ ಹೋಗಿ ಯುವಕ ಹಾಗೂ ಆ ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತೇನೆ ಎಂದಿದ್ದಾರೆ.

Previous articleಸನಾತನ ಧರ್ಮ ಟೀಕಿಸುವವರಗೆ ಏಡ್ಸ್, ಕುಷ್ಠ ರೋಗ ಬಂದಿದೆ: ಯತ್ನಾಳ
Next articleಜೈಲರ್ ಚಿತ್ರದ ನಟ ‘ಮಾರಿಮುತ್ತು’ ಹೃದಯಘಾತದಿಂದ ಸಾವು