ಬೆಂಗಳೂರು: ಮೈಸೂರು ಕಾಗದ ಕಾರ್ಖಾನೆ ಪುನಾರಂಭಕ್ಕೆ ಮಹತ್ವದ ಚರ್ಚೆ ನಡೆದಿದೆ ಎಂದು ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ, ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ಅವರು “ದೇಶದಲ್ಲೇ ಅತ್ಯಂತ ಗುಣಮಟ್ಟದ ಕಾಗದದ ಉತ್ಪಾದನೆಗೆ ಹೆಸರುವಾಸಿಯಾಗಿದ್ದ ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆ (MPM)ಗೆ ಬೀಗ ಮುದ್ರೆ ಬಿದ್ದಿದ್ದು, ಪುನಶ್ಚೇತನ ನೀಡುವ ಸಂಬಂಧ ಇಂದು ಮಹತ್ವದ ಚರ್ಚೆ ನಡೆಸಿದೆ. ಇಂದಿನ ಸಭೆಯಲ್ಲಿ ಭದ್ರಾವತಿ ಶಾಸಕರಾದ ಶ್ರೀ ಬಿ ಕೆ ಸಂಗಮೇಶ್ವರ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ಸೆಲ್ವಕುಮಾರ್, ಶಿವಮೊಗ್ಗ ಜಿಲ್ಲಾಧಿಕಾರಿ ಮತ್ತು #MPM ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸೆಲ್ವಮಣಿ ಸೇರಿದಂತೆ ಪ್ರಖ ಅಧಿಕಾರಿಗಳು ಉಪಸ್ಥಿತರಿದ್ದರು ಎಂದಿದ್ದಾರೆ.