ವೈದ್ಯರ ಕಾರಿನ ಮೇಲೆ ಗುಂಡಿನ ದಾಳಿ

0
16

ರಾಯಚೂರು: ಅಪರಿಚಿತರು ವೈದ್ಯರೊಬ್ಬರ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ಗುರುವಾರ ಮಧ್ಯಾಹ್ನ ನಗರ ಹೊರವಲಯದ ಸಾಥ್‌ಮೈಲ್ ಕ್ರಾಸ್‌ನಲ್ಲಿ ನಡೆದಿದೆ.
ನಗರದ ಖ್ಯಾತ ವೈದ್ಯ ಡಾ. ಜಯಪ್ರಕಾಶ ಬೆಟ್ಟದೂರು ಮಧ್ಯಾಹ್ನ 2.30ಕ್ಕೆ ರಾಯಚೂರಿನಿಂದ ಮಾನ್ವಿಗೆ ಹೋಗುವಾಗ ಸಾಥಮೈಲ್ ಕ್ರಾಸ್ ಹತ್ತಿರ‌ ಇವರ ಕಾರಿನ ಮೇಲೆ ಇಬ್ಬರು ಅಪರಿಚಿತ ವ್ಯಕ್ತಿಗಳು ದ್ವಿಚಕ್ರ ವಾಹನದಲ್ಲಿ ಬಂದು ಗುಂಡಿನ‌ ದಾಳಿ ಮಾಡಿದ್ದು, ಕಾರಿನ ಬಾನಟ್‌ಗೆ ಗುಂಡು ತಗುಲಿದ್ದು, ವೈದ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಹಿಂದೆ ವೈದ್ಯರಿಗೆ ಹಣ ನೀಡುವಂತೆ ಒತ್ತಾಯಿಸಿದ್ದರು ಎಂದು ತಿಳಿದುಬಂದಿದೆ.
ಈ ಬಗ್ಗೆ ಘಟನಾ ಸ್ಥಳಕ್ಕೆ ಎಸ್ಪಿ ನಿಖಿಲ್ ಅವರು ಭೇಟಿ ನೀಡಿದ್ದಾರೆ. ಘಟನೆ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು. ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ನಿಖಿಲ್ ತಿಳಿಸಿದ್ದಾರೆ.

Previous articleಬೋಗಸ್‌ ಬಿಪಿಎಲ್‌ ಕಾರ್ಡ್‌ ಸಂಖ್ಯೆ ಹೆಚ್ಚಳ
Next articleಜನರ ಹಿತಾಸಕ್ತಿಯನ್ನು ರಕ್ಷಿಸದ ಕೇಂದ್ರ ಸರ್ಕಾರ