ಚಿಕ್ಕೋಡಿ: ರಾಜ್ಯ ಸರಕಾರದ ಮಹತ್ವಾಂಕ್ಷಿ ಯೋಜನೆಯಾದ ಗೃಹಲಕ್ಷ್ಮೀ ಯೋಜನೆ ಜಾರಿ ಹಿನ್ನಲೆಯಲ್ಲಿ ವಯೋ ವೃದ್ದೆ ಕುಲಸುಂಬಿ ದಾವಲ ಸಯ್ಯದ(72 ) ಅವರು ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಗೃಹಲಕ್ಷ್ಮೀ ಯೋಜನೆ ನೇರ ಪ್ರಸಾರ ಕಾರ್ಯಕ್ರಮದ ಹಿನ್ನಲೆಯಲ್ಲಿ ಸ್ಚಯಂ ಪ್ರೇರಿತರಾಗಿ ಆಗಮಿಸಿ ಎಲ್ಲಾರ ಗಮನ ಸೆಳೆದರು. ನನ್ನ ಖಾತೆಗೆ ಯಾವಾಗ ಹಣ ಜಮಾ ಆಗುತ್ತದೆ ಎಂದು ನಾನು ಕುತುಹಲದಿಂದ ಕಾಯುತ್ತಿದ್ದೆನೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾರಿಗೆ ತಂದಿರುವ ಈ ಯೋಜನೆಯಿಂದ ನನ್ನಂತಹ ಕಡು ಬಡವರಿಗೆ ಸಾಕಷ್ಟು ಸಹಕಾರಿಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಸುಡು ಬಿಸಲಿನಲ್ಲಿ ವೃದ್ದ ಮಹಿಳೆ ಕಾರ್ಯಕ್ರಮಕ್ಕೆ ಆಗಮಿಸುವ ಮೂಲಕ ಎಲ್ಲಾರ ಗಮನ ಸೆಳೆದರು.