ಎಮ್ಮೆ ಮೈ ತೊಳೆಯಲು ಹೋದ ಯುವಕ ನೀರು ಪಾಲು

0
9

ಹಾವೇರಿ: ಜಿಲ್ಲೆಯಲ್ಲಿ ನದಿಗಳು ಮೈದುಂಬಿ ಹರಿಯುತ್ತಿದ್ದು, ನದಿಯಲ್ಲಿ ಎಮ್ಮೆ ಮೈ ತೊಳೆಯಲು ಹೋದ ಯುವಕನೋರ್ವ ಮೃತಪಟ್ಟಿರುವ ಘಟನೆ ಹಾನಗಲ್ಲ ತಾಲೂಕಿನಲ್ಲಿ ರವಿವಾರ ಸಂಭವಿಸಿದೆ.
ಹಾನಗಲ್ಲ ತಾಲೂಕಿನ ಹೊಂಬಳಿ ಗ್ರಾಮದ ಯಮನಪ್ಪ ಬಂಡಿವಡ್ಡರ(24) ಮೃತಪಟ್ಟಿರುವ ದುರ್ದೈವಿ. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಧರ್ಮಾ ನದಿ ದಡದಲ್ಲಿ ಎಮ್ಮೆ ಮೈ ತೊಳೆಯಲು ಹೋಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ. ಈ ಕುರಿತು ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಧಾರವಾಡ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ
Next articleಹಾವೇರಿ: ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ