ಮನೆ ಬಿಟ್ಟು ಓಡಿ ಬಂದಿದ್ದ ಬಾಲಕನ ರಕ್ಷಣೆ ಮಾಡಿದ ಟಿಟಿಇ

0
12
ಬಾಲಕನ ರಕ್ಷಣೆ

ಹುಬ್ಬಳ್ಳಿ: ಮನೆ ಬಿಟ್ಟು ಓಡಿ ಬಂದು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬಾಲಕನನ್ನು ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ಕರ್ತವ್ಯ ನಿರತ ಪ್ರಯಾಣಿಕರ ಟಿಕೆಟ್ ಪರೀಕ್ಷಕ (ಟಿಟಿಇ) ದತ್ತರಾಜ ಎ.ಎಚ್ ಅವರು ಮೈಸೂರು-ಹಜರತ್ ನಿಜಾಮುದ್ದೀನ್ ಎಕ್ಸಪ್ರೆಸ್ ರೈಲಿ ಎಸಿ ಕೋಚ್‌ನಲ್ಲಿ ಹುಬ್ಬಳ್ಳಿ-ಮಿರಜ್ ಮಾರ್ಗ ಮಧ್ಯದಲ್ಲಿ ಪತ್ತೆ ಮಾಡಿ ರಕ್ಷಣೆ ಮಾಡಿದ್ದಾರೆ.
ಟಿಟಿಇ ಅವರು ಟಿಕೆಟ್ ಪರೀಕ್ಷಣೆ ಮಾಡುವ ವೇಳೆ ಬಾಲಕ ಟಿಕೆಟ್‌ ಇಲ್ಲದೇ ಪ್ರಯಾಣ ಮಾಡುತ್ತಿದ್ದುದು ಗೊತ್ತಾಗಿದೆ. ಬಾಲಕನನ್ನು ವಿಚಾರಣೆ ಮಾಡಿದಾಗ ಆತ ಒಂದಿಷ್ಟು ಲಗೇಜ್ ಮತ್ತು ಸ್ವಲ್ಪ ಹಣದೊಂದಿಗೆ ಮನೆ ಬಿಟ್ಟು ಓಡಿ ಬಂದಿರುವುದು ಗೊತ್ತಾಗಿದೆ. ತಕ್ಷಣ ಟಿಟಿಇ ದತ್ತರಾಜ್ ಅವರು ಬಾಲಕನನ್ನ ಅವರ ಕುಟುಂಬದವರೊಂದಿಗೆ ಒಂದುಗೂಡಿಸಲು ಮಿರಜ್‌ನಲ್ಲಿ ಮಕ್ಕಳ ಸಹಾಯವಾಣಿ ಕೇಂದ್ರಕ್ಕೆ ಬಾಲಕನನ್ನು ಹಸ್ತಾಂತರಿಸಿದ್ದಾರೆ. ಸಕಾಲಕ್ಕೆ ಟಿಟಿಇ ದತ್ತರಾಜ ತೋರಿದ ಕಾಳಜಿಗೆ ರೈಲ್ವೆ ಹಿರಿಯ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Previous articleಡಾ. ಪ್ರಭಾಕರ ಕೋರೆಗೆ ರಾಷ್ಟ್ರಮಟ್ಟದ ಶ್ರೀ ವೀರಭದ್ರೇಶ್ವರ ಪ್ರಶಸ್ತಿ
Next articleಶಾಂತಿಯುತ ಗಣೇಶೋತ್ಸವ: ಪೊಲೀಸ್‌ ಅಧಿಕಾರಿಗಳಿಗೆ ಸನ್ಮಾನ