ವಿದ್ಯುತ್ ಶಾಕ್: ವ್ಯಾಪಾರಿ ಸಾವು

0
12

ಬೆಳಗಾವಿ: ಇಲ್ಲಿನ ಆಂಟೋನಿ ಮಾರುಕಟ್ಟೆಯಲ್ಲಿ ತರಕಾರಿ ಮಾರಲು ಬಂದಿದ್ದ ವ್ಯಾಪಾರಿಯೊಬ್ಬರು ವಿದ್ಯುತ್ ಆಘಾತದಿಂದ ಮೃತಪಟ್ಟ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.

ಮಾರುತಿ ಜ್ಯೋತಿಯಪ್ಪ ಗೋಳಬಾವಿ (೩೨) ಎಂಬುವನೇ ಮೃತ ವ್ಯಕ್ತಿ. ಈತ ತನ್ನ ಸಹೋದರನೊಂದಿಗೆ ಟಾಟಾ ಏಸ್ ವಾಹನದಲ್ಲಿ ತರಕಾರಿ ಮಾರಾಟ ಮಾಡುವ ವ್ಯಾಪಾರಿಯಾಗಿದ್ದು, ಗುರುವಾರ ಮದ್ಯಾಹ್ನ ಡಿಪಿ ಬಳಿ ವಾಹನ ನಿಲ್ಲಿಸಿದ ವೇಳೆ ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿ ಕೊನೆಯುಸಿರು ಎಳೆದಿದ್ದಾರೆ.
ಈ ಬಗ್ಗೆ ಮೃತರ ಸಹೋದರ ಶಿವಾನಂದ ನಿಪ್ಪಾಣಿ ಠಾಣೆಗೆ ದೂರು ನೀಡಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಚಿಗರಿಗೆ ಚಿಗರಿ ಡಿಕ್ಕಿ: ತಪ್ಪಿದ ಅನಾಹುತ
Next articleಶಾಲಾ ಬ್ಯಾಗ್ ರಹಿತದಿನ ಮಕ್ಕಳಿಗೆ ಸಂತಸದ ಕ್ಷಣ