ಪತ್ನಿ ಶೀಲ ಶಂಕಿಸಿ ಡಬಲ್ ಮರ್ಡರ್: ಆರೋಪಿ ಬಂಧನ

0
14
ಕೊಲೆ

ಬೆಳಗಾವಿ: ಅಂಕಲಗಿ ಪೊಲೀಸ್ ಠಾಣಾ ವ್ಯಾಪ್ತಿಯ ಅಕ್ಕತಂಗೇರಹಾಳದಲ್ಲಿ ಮಂಗಳವಾರ ಜೋಡಿ ಕೊಲೆ ನಡೆದಿದೆ.
ಅಕ್ಕತಂಗೇರಹಾಳ ಗ್ರಾಮದ ಮಲ್ಲಿಕಾರ್ಜುನ ಜಗದಾರ(40) ಹಾಗೂ ರೇಣುಕಾ ಮಾಳಗಿ (42) ಹತ್ಯೆಗೀಡಾದವರು. ಕೊಲೆಗೈದ ವ್ಯಕ್ತಿ ಯಲ್ಲಪ್ಪ ಮಾಳಗಿ(45) ಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೊಲೆಗೆ ಅನೈತಿಕ ಸಂಬಂಧದ ಶಂಕೆ ವ್ಯಕ್ತವಾಗಿದೆ.
ಅಕ್ರಮ ಸಂಬಂಧ ಶಂಕಿಸಿ ಪತಿ ಯಲ್ಲಪ್ಪ ಮನೆಯಲ್ಲಿದ್ದ ರೇಣುಕಾಳನ್ನು ಕೊಲೆ ಮಾಡಿದ್ದಾನೆ. ನಂತರ ಅಲ್ಲಿಂದ ಮಲ್ಲಿಕಾರ್ಜುನ ಮನೆಗೆ ಹೋಗಿದ್ದಾನೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ ಮಲ್ಲಿಕಾರ್ಜುನ ಮನೆ ಹೊರ ಭಾಗದಲ್ಲಿ ಸ್ನಾನ ಮಾಡುತ್ತಿರುವಾಗಲೇ ಮಾರಕಾಸ್ತ್ರದಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅಂಕಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಬೆಳಗಾವಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಹಾಗೂ ಅಂಕಲಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Previous articleಮಾನ ಹಾನಿಕಾರಕ ವೀಡಿಯೋ ವೈರಲ್ : ಯುವಕನ ಬಂಧನ
Next articleಭಾರತಕ್ಕೆ ರೋಚಕ ಗೆಲುವು