ಅವಕಾಶ ಕೊಟ್ಟರೆ ವಿಪಕ್ಷ ನಾಯಕನಾಗುವೆ

0
11

ಬೆಂಗಳೂರು: ಅವಕಾಶ ಕೊಟ್ಟರೆ ನಾನು ವಿರೋಧ ಪಕ್ಷದ ನಾಯಕನಾಗಲು ಸಿದ್ಧ ಎಂದು ಪರೋಕ್ಷವಾಗಿ ವಿಪಕ್ಷ ಸ್ಥಾನದ ಆಕಾಂಕ್ಷೆಯನ್ನು ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ ಹೊರಹಾಕಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ನಮ್ಮಲ್ಲಿ ವಿರೋಧ ಪಕ್ಷದ ನಾಯಕನಾಗಲು ಯಾವುದೇ ಆಕಾಂಕ್ಷಿಗಳಿಲ್ಲ. ಹೈಕಮಾಂಡ್ ಹೇಳಿದವರಿಗೆ ಸ್ಥಾನ ಸಿಗಲಿದೆ. ನಮಗೆ ವಿರೋಧ ಪಕ್ಷದ ನಾಯಕನ ಆಯ್ಕೆಗೆ ಅವಸರ ಇರಲಿಲ್ಲ. ನಾಳೆ ಅಧಿವೇಶನ ಆರಂಭ ಆಗಲಿದ್ದು, ಹೀಗಾಗಿ ನಾಳೆಯೊಳಗೆ ವಿರೋಧ ಪಕ್ಷದ ನಾಯಕನ ಘೋಷಣೆ ಆಗಲಿದೆ ಎಂದರು.

Previous articleವಿಪಕ್ಷ ನಾಯಕನ ಬಗ್ಗೆ ಕಾಂಗ್ರೆಸ್‌ ತಲೆ ಕೆರೆದುಕೊಳ್ಳುವುದು ಬೇಡ
Next articleಮಹಾ ಡಿಸಿಎಂ ಆಗಿ ಅಜಿತ್ ಪವಾರ್ ಪ್ರಮಾಣ ವಚನ ಸ್ವೀಕಾರ