ಲಂಡನ್ ಹಳ್ಳಕ್ಕೆ ತಲೆಕೆಳಗಾಗಿ ಬಿದ್ದ ಬಸ್

0
13

ಬಂಕಾಪುರ: ಪಟ್ಟಣದ ಲಂಡನ್ ಹಳ್ಳದ ಕ್ರಾಸ್‌ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಗದಗ ಡಿಪೋಕ್ಕೆ ಸೇರಿದ ಸಾರಿಗೆ ಸಂಸ್ಥೆ ಬಸ್‌ವೊಂದು ತಲೆ ಕೆಳಗಾಗಿ ಹಳ್ಳಕ್ಕೆ ಬಿದ್ದು 8 ಪ್ರಯಾಣಿಕರು ಗಾಯಗೊಂಡಿರುವ ಘಟನೆ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.
ನಿಂಗಪ್ಪ ರುದ್ರಪ್ಪ ಸಂಕಪ್ಪನವರ, ನಾಗರತ್ನ ಮೃತ್ಯುಂಜಯ ಮಾಳಗಿ, ಕಾವ್ಯಾ ಮೃತ್ಯುಂಜಯ ಮಾಳಗಿ, ಶಫಿವುಲ್ಲಾ ಮಹ್ಮದ್‌ಗೌಸ್ ಮುಲ್ಲಾನವರ, ಬಸ್ ಚಾಲಕ ಧರ್ಮರಾಜ ಜಟ್ಟೆಪ್ಪ ಕೋಟಿಹಾಳ, ನಿರ್ವಾಹಕ ವೀರನಗೌಡ ಗದಿಗೆಪ್ಪಗೌಡ ಹಲಗೌಡ್ರ, ಜಗದೀಶ ಶಿವಪ್ಪ ಬಜನರ, ವೀರಯ್ಯ ಶಿವಬಸಯ್ಯ ಓದಿಸೋಮಠ ಗಾಯಾಳು ಪ್ರಯಾಣಿಕರು.
ಈ ಗಾಯಾಳುಗಳಿಗೆ ಪಟ್ಟಣದ ಆಲದಕಟ್ಟಿ ಸರಕಾರಿ ಸಮದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಕಾಪುರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಘಟನೆ ವಿವರ: ಗದಗ ಡಿಪೋಗೆ ಸೇರಿದ ಬಸ್, ಹಾವೇರಿಯಿಂದ ಬಂಕಾಪುರ ಮಾರ್ಗವಾಗಿ ಗದುಗಿಗೆ ಹೋಗುವಾಗ ಬಂಕಾಪುರ ಪಟ್ಟಣದ ಲಂಡನ್ ಹಳ್ಳದ ಕ್ರಾಸ್‌ನಲ್ಲಿ ದಿಢೀರ್‌ನೇ ಚಾಲಿತ ಬಸ್ ಸ್ಥಗಿತಗೊಂಡು ಸ್ಟೇರಿಂಗ್ ಲಾಕ್ ಆಗಿದ್ದರಿಂದ ಹಳ್ಳಕ್ಕೆ ಬಸ್ ತಲೆಕೆಳಗಾಗಿ ಬಿದ್ದಿರುವುದಾಗಿ ಚಾಲಕ ಸಂಯುಕ್ತ ಕರ್ನಾಟಕಕ್ಕೆ ಮಾಹಿತಿ ನೀಡಿದ್ದಾನೆ.

Previous articleಮಂತ್ರಾಲಯದ ಶ್ರೀಮಠದಲ್ಲಿ ಅನಂತ ಪದ್ಮನಾಭ ವ್ರತ ಆಚರಣೆ
Next articleನಿವೃತ್ತ ಉಪನೋಂದಣಾಧಿಕಾರಿ ಶಾಂತಯ್ಯ ನಿಧನ