ಬಿಜೆಪಿ ಆತ್ಮಾವಲೋಕನ‌ ಸಭೆ ಆರಂಭ

0
35
CM

ಬೆಳಗಾವಿ: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು ಕಳೆದ ವಿಧಾನಸಭೆ ಚುನಾವಣೆ ಸೋಲಿನ ಆತ್ಮಾವಲೋಕನ ಸಭೆ ಇಲ್ಲಿನ ಖಾಸಗಿ ಹೊಟೇಲನಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಬಿಜೆಪಿಯ ಗೆದ್ದ ಮತ್ತು ಸೋತ ಅಭ್ಯರ್ಥಿಗಳು ಸೇರಿದಂತೆ ಪಕ್ಷದ ನಾಯಕರು ಸಭೆಯಲ್ಲಿ ಹಾಜರಿದ್ದಾರೆ.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಂಗಲಾ ಅಂಗಡಿ, ಪಕ್ಷದ ಜಿಲ್ಲಾಧ್ಯಕ್ಷ. ಸಂಜಯ ಪಾಟೀಲ ಸೇರಿದಂತೆ ಶಾಸಕ ಅಭಯ ಪಾಟೀಲ, ಅರುಣ ಶಹಾಪುರ, ಪಿ.ರಾಜೀವ, ಧುರ್ಯೋಧನ ಐಹೊಳೆ, ಜಗದೀಶ ಮೆಟಗುಡ್, ಉಜ್ವಲಾ ಬಡವನ್ನಾಚೆ ಸೇರಿದಂತೆ ಮತ್ತಿತರರು‌ ಈ ಸಂದರ್ಭದಲ್ಲಿ ಹಾಜರಿದ್ದಾರೆ.

Previous article“ಶಾಂತಿಯುತ ಕರ್ನಾಟಕ” ಸ್ಥಾಪನೆಗೆ ಎಂ ಬಿ ಪಾಟೀಲ್‌ ಮನವಿ
Next articleಪ್ರಕೃತಿಯ ಜತೆಗೆ ನಾವು ಬೆಳೆಯಬೇಕು