ಯಾವುದು ಶಾಶ್ವತ ಹಿತವಲ್ಲ

0
7
PRATHAPPHOTOS.COM

ವಿಷಯ ಭೋಗಗಳಲ್ಲಿ ಆಗಬಾರದು. ಇವುಗಳೆಲ್ಲ ಅಶಾಶ್ವತ, ನಶ್ವರ ಎಂಬುದಾಗಿ ತಿಳಿಯಬೇಕು. ಜೀವನಕ್ಕಾಗಿ ಬದುಕಿಗಾಗಿ ಎಷ್ಟು ಬೇಕೋ ಅಷ್ಟನ್ನು ಅವಶ್ಯವಾಗಿ ಭೋಗ ಮಾಡಬಹುದು. ಅದಕ್ಕಿಂತ ಹೆಚ್ಚು ತಾನು ವಿಶೇಷಯಾಸಕ್ತಿಯನ್ನು ಪಡೆಯುವುದರಲ್ಲಿ ಅರ್ಥವಿಲ್ಲ. ಹೇಗೆ ಎಷ್ಟು ಹಸಿವಿರುತ್ತದೆ ಅಷ್ಟೇ ಊಟ ಮಾಡಿದ್ರೆ ಆರೋಗ್ಯಕ್ಕೆ ಹಿತವೋ ಅದಕ್ಕೂ ಹೆಚ್ಚು ಊಟ ಮಾಡಿದರೆ ರೋಗಕ್ಕೆ ಕಾರಣವಾಗುತ್ತದೆ. ಇದಕ್ಕೆ ಶ್ರೀ ರಾಘವೇಂದ್ರ ಸ್ವಾಮಿಗಳು ತಮ್ಮ ಗೀತಾ ವಿವೃತ್ತಿಯಲ್ಲಿ `ಅಶೋಭನೆ ಶೋಭನಾದ್ಯಾಸ’ ವೆಂದಿದ್ದಾರೆ.
ಯಾವುದು ನನಗೆ ಶಾಶ್ವತ ಹಿತವಲ್ಲ ಅದನ್ನು ಹಿತ ಎಂದು ತಿಳಿದರೆ ಅದರಿಂದ ಸಂಸಾರದಲ್ಲಿ ಸಿಲುಕಿ ಒದ್ದಾಡುವ ಪ್ರಸಂಗ ಒದಗಿ ಬರುತ್ತದೆ. ಅಂತಹ ಅಭಿಮಾನ ಬಿಟ್ಟು ಜಗತ್ತಿನ ಪ್ರಕೃತಿಯ ಮಧ್ಯದಲ್ಲಿ ನಾವು ಇರುವುದರಿಂದ ಪ್ರಾಕೃತವಾದ ಎಲ್ಲ ವಸ್ತುಗಳನ್ನು ಬಿಟ್ಟು ಹೋಗಲು ಆಗುವುದಿಲ್ಲ ಆದ್ದರಿಂದ ಅಭಿಮಾನ ಪರಿತ್ಯಾಗ ಮಾಡಿ ಜೀವನ ಮಾಡಬೇಕು. ಇದು ನನ್ನದು ಎಂಬುದನ್ನು ಬಿಡಬೇಕು ಎಂದು ತಿಳಿಸಿದ್ದಾರೆ.
ರಾಘವೇಂದ್ರ ಸ್ವಾಮಿಗಳ ಚರಿತ್ರೆಯಲ್ಲಿಯೂ ಕೂಡ ರಾಘವೇಂದ್ರ ಸ್ವಾಮಿಗಳು ಇದೇ ಸಂದೇಶವನ್ನು ಕೊಟ್ಟಿದ್ದಾರೆ. ಏನೆಂದರೆ ಮಾವಿನಹಣ್ಣಿನ ಶೀಕರಣಿಯಲ್ಲಿ ಬಿದ್ದ ಮಗುವನ್ನು ತಮ್ಮ ತಪಸ್ಸಿನ ಬಲದಿಂದ ಬದುಕಿಸಿದರು ಅಂದರೆ ಶೀಕರಣಿಯಲ್ಲಿ(ಸಂಸಾರ ಸಿಹಿ) ಬಿದ್ದು ಒದ್ದಾಡುತ್ತಿದ್ದಾನೆ. ಅದರಿಂದ ಮೇಲಕ್ಕೆತ್ತಿ ತೀರ್ಥ ಅಂದರೆ ದೇವರ ತೀರ್ಥ ಎಂದರೆ ದೇವರ ಪವಿತ್ರವಾದ ಜ್ಞಾನ ಪ್ರೋಕ್ಷಿಸಿ ಬದುಕಿಸಿದರು ಎಂದರೆ ಸಂಸಾರಿಕ ವಿಷಯ ಭೋಗಗಳಲ್ಲಿ ಆಸಕ್ತರಾಗದಂತೆ ಮೇಲೆ ಬಂದು ನಿತ್ಯದಲ್ಲಿ ಶುದ್ಧ ಸದಾಚಾರಿಗಳಾಗಿ ವಿಷ್ಣುವಿನ ಪೂಜೆ ಮಾಡಿ ತೀರ್ಥ ಪ್ರಾಶನನಶನಾದಿಗಳನ್ನು ಸೇವಿಸಿ ಬದುಕಿದರೆ ಮೋಕ್ಷ ಮಾರ್ಗದಲ್ಲಿ ನಡೆದಂತೆ.
ಧರ್ಮವನ್ನು ಮತ್ತು ಸಾಧನೆ ಮಾಡುವುದಕ್ಕೆ ಬದುಕಬೇಕು. ಅಂತ ಶರೀರದ ರಕ್ಷಣೆಗಾಗಿ ಪೋಷಣೆಗಾಗಿ ನಾವು ವಿಷಯಗಳನ್ನು ಭೋಗ ಮಾಡಲೇಬೇಕು. ಇನ್ನಿತರ ನಾನಾ ರೀತಿಯ ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳ ಸೇವನೆಯನ್ನು ಮಾಡಬೇಕಾಗುತ್ತದೆ ನಿಜ. ಆದರೆ ಅದಕ್ಕೂ ಅಧಿಕವಾಗಿ ನಾವು ಭೋಗ ಮಾಡಿದರೆ ಅದು ಸಂಸಾರಕ್ಕೆ ಕಾರಣ. ಇದು ಮೋಕ್ಷಕ್ಕೆ ಅಡ್ಡಿಯಾಗುತ್ತದೆ ಎಂದು ಶ್ರೀ ಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ಉಪದೇಶ ಮಾಡಿದ್ದಾರೆ.

Previous articleಹಾವೇರಿ ಪಟಾಕಿ ಗೋದಾಮ ಬೆಂಕಿ ಪ್ರಕರಣ: ಮೃತರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ
Next articleಚಿಕ್ಕೋಡಿ ಪ್ರಕರಣ ತಲೆಮಾರಿನ ತಲ್ಲಣ