Home ಅಪರಾಧ ಶಾಸಕನ ಹೆಸರು ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಎಸ್‌ಡಿಎ ನೌಕರ

ಶಾಸಕನ ಹೆಸರು ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಎಸ್‌ಡಿಎ ನೌಕರ

0
ಶಾಸಕನ ಹೆಸರು ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಎಸ್‌ಡಿಎ ನೌಕರ

ಚಿತ್ರದುರ್ಗ: ಶಾಸಕರ ಅಮಾನರು ಬೆದರಿಕೆ, ತಾಪಂ ಹಾಗೂ ಗ್ರಾಪಂ ಸದಸ್ಯರು ಕಿರುಕುಳದಿಂದ ಎಸ್​ಡಿಎ ನೌಕರನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಉಪ್ಪರಿಗೇನಹಳ್ಳಿ ಗ್ರಾಮ ಪಂಚಾಯಿತಿ ಎಸ್​ಡಿಎ ತಿಪ್ಪೇಸ್ವಾಮಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೊಳಲ್ಕೆರೆ ಬಿಜೆಪಿ ಶಾಸಕ ಎಂ ಚಂದ್ರಪ್ಪ ಮತ್ತು ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್​ನೋಟ್​ನಲ್ಲಿ ಬರೆದಿಟ್ಟಿದ್ದಾರೆ.
ನಿನ್ನೆ(ಆಗಸ್ಟ್ 06) ಸಂಬಂಧಿಕರಿದ್ದ ಹೊಸದುರ್ಗ ತಾಲೂಕಿನ ಜಾನಕಲ್ ಗ್ರಾಮಕ್ಕೆ ತೆರಳಿದ್ದಾಗ ತಿಪ್ಪೇಸ್ವಾಮಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಕುರಿತಂತೆ ಮೃತ ತಿಪ್ಪೇಸ್ವಾಮಿ ಪುತ್ರಿ ಹೊಸದುರ್ಗ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಆದರೆ ದೂರಿನಲ್ಲಿ ಶಾಸಕ ಎಂ.ಚಂದ್ರಪ್ಪ, ತಾ.ಪಂ ಇಓ ರವಿ ಹೆಸರು ಉಲ್ಲೇಖವಿಲ್ಲ. ಗ್ರಾಪಂ ಸದಸ್ಯರ ಕಿರುಕುಳ ಹಿನ್ನಲೆ ಆತ್ಮಹತ್ಯೆ ಎಂದು ದೂರು ನೀಡಿದ್ದು, ಮೋಹನ್, ಮೂರ್ತಿ, ಉಗ್ರಪ್ಪ, ಲವ, ರಾಜಪ್ಪ ಎಂಬುವರ ಕಿರುಕುಳ ಎಂದು ದೂರು ನೀಡಿದ್ದಾರೆ.