ಮಂಗಳೂರು: ನಗರದ ಕೆ.ಎಸ್.ರಾವ್ ರೋಡ್ ನ ಲಾಡ್ಜ್ ವೊಂದರಲ್ಲಿ ನಾಲ್ಕು ಮಂದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ನಗರದ ಕರುಣಾ ರೆಸಿಡೆನ್ಸಿ ಲಾಡ್ಜ್‌ನಲ್ಲಿ ಮೈಸೂರಿನ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಸೂರು ವಿಜಯನಗರದ ದೇವೇಂದ್ರ (46), ಅವರ ಪತ್ನಿ ಹಾಗೂ ಇಬ್ಬರು ಮಕ್ಕಳಾದ ಚೈತ್ರಾ ಮತ್ತು ಚೈತನ್ಯ ಅವಳಿ ಮಕ್ಕಳಾಗಿದ್ದು, ಪ್ರಾಣ ಕಳೆದುಕೊಂಡಿದ್ದಾರೆ. ಮೈಸೂರಿನ ವಿಜಯನಗರ ಮೂಲದ ನಿವಾಸಿಗಳಾಗಿದ್ದ ದೇವೇಂದ್ರ ಮತ್ತು ಕುಟುಂಬ ಮಾರ್ಚ್ 27ರಂದು ಮಂಗಳೂರಿಗೆ ಬಂದು ಲಾಡ್ಜ್‌ನಲ್ಲಿ ರೂಂ ಬುಕ್ ಮಾಡಿದ್ದರು. ದೇವೇಂದ್ರ ಕುಟುಂಬ ನಿನ್ನೆ ಸಂಜೆ ರೂಂ ಚೆಕ್ ಔಟ್ ಮಾಡಬೇಕಾಗಿತ್ತು. ಆದರೆ ಬಾಗಿಲು ತೆರೆಯದ ಕಾರಣ ಅನುಮಾನಗೊಂಡು ಬಾಗಿಲು ಓಪನ್ ಮಾಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಮಂಗಳೂರು ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.


























