Home ಅಪರಾಧ ಕುಕ್ಕರ್‌ ಬಾಂಬ್‌ ಸ್ಪೋಟ ಆರೋಪಿ: ಮಾರ್ಚ್‌ 15ರವರೆಗೆ ಕಸ್ಟಡಿಗೆ ಪಡೆದ NIA

ಕುಕ್ಕರ್‌ ಬಾಂಬ್‌ ಸ್ಪೋಟ ಆರೋಪಿ: ಮಾರ್ಚ್‌ 15ರವರೆಗೆ ಕಸ್ಟಡಿಗೆ ಪಡೆದ NIA

0
93

ಬೆಂಗಳೂರು: ನವೆಂಬರ್‌ ತಿಂಗಳಲ್ಲಿ ಮಂಗಳೂರಿನಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟಿಸಿ ತೀವ್ರವಾದ ಸುಟ್ಟ ಗಾಯಗಳಿಂದ ಆಸ್ಪತ್ರೆ ಸೇರಿದ್ದ ಶಂಕಿತ ಉಗ್ರ ಶಾರೀಕ್‌ ಚೇತರಿಸಿಕೊಂಡಿದ್ದು, ಆತನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಈತನನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು ಮಾರ್ಚ್‌ 15ರವರೆಗೆ ಶಾರಿಕ್ ಎನ್‌ಐಎ ಅಧಿಕಾರಿಗಳ ಕಸ್ಟಡಿಗೆ ನೀಡಿ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯದಿಂದ ಆದೇಶ ಹೊರಡಿಸಲಾಗಿದೆ. ಕಸ್ಟಡಿಗೆ ಪಡೆದು ಶಾರಿಕ್​ನ ವಿಚಾರಣೆ ಮಾಡಲಿದ್ದಾರೆ.