karnatak Archives - Samyukta Karnataka

ಉಮರ್ ಖಾಲಿದ್ ಕಾರ್ಯಕ್ರಮ: ಅನುಮತಿ ರದ್ದುಪಡಿಸಲು ಆಗ್ರಹ
ಬೆಂಗಳೂರು: 2020ರ ದೆಹಲಿ ದಂಗೆ ಪ್ರಕರಣದಲ್ಲಿ ಯುಎಪಿಎ ಕಾಯ್ದೆಯಡಿ ತಿಹಾರ್ ಜೈಲಿನಲ್ಲಿ ಇರುವ ಉಮರ್ ಖಾಲಿದ್ ಕುರಿತ ಪುಸ್ತಕ ಬಿಡುಗಡೆ ಹಾಗೂ ವಿಚಾರ ಸಂಕಿರಣಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿರುವ ವಿಚಾರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಈ ಕಾರ್ಯಕ್ರಮವನ್ನು ತಕ್ಷಣವೇ ರದ್ದುಪಡಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಗ್ರಹಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಜೋಶಿ, “ದೆಹಲಿಯಲ್ಲಿ ನಡೆದ ಗಲಭೆ ಪ್ರಕರಣದ ಆರೋಪಿಗೆ ಸಂಬಂಧಿಸಿದ ಕಾರ್ಯಕ್ರಮಕ್ಕೆ ವೇದಿಕೆ ನೀಡುವುದು ಸೂಕ್ತವಲ್ಲ. ರಾಜ್ಯ ಸರ್ಕಾರ ಸಾರ್ವಜನಿಕ ಸುರಕ್ಷತೆ ಮತ್ತು ಕಾನೂನು ಪಾಲನೆಗೆ ಆದ್ಯತೆ ನೀಡಿ ಅನುಮತಿಯನ್ನು ಹಿಂಪಡೆಯಬೇಕು” ಎಂದು ಹೇಳಿದ್ದಾರೆ.

ಈ ನಡುವೆ, ಬಿಜೆಪಿ ಸಂಸದ ಪಿ.ಸಿ. ಮೋಹನ್ ಅವರು ಕೂಡ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಉಮರ್ ಖಾಲಿದ್ ದೆಹಲಿ ದಂಗೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರು. ಇಂತಹ ವ್ಯಕ್ತಿಯನ್ನು ಬೆಂಗಳೂರಿಗೆ ಕರೆಸಿ ವೈಭವೀಕರಿಸುವ ಅಗತ್ಯವೇನು?” ಎಂದು ಪ್ರಶ್ನಿಸಿದರು.

ಅವರು ಕಾರ್ಯಕ್ರಮ ಆಯೋಜಕರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ಭಯೋತ್ಪಾದಕರನ್ನು ವೈಭವೀಕರಿಸುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದ್ದಾರೆ. ಇತರ ರಾಜ್ಯಗಳಲ್ಲಿ ಇಂತಹ ಕಾರ್ಯಕ್ರಮಗಳಿಗೆ ಅವಕಾಶ ಸಿಗುವುದಿಲ್ಲ, ಆದರೆ ಕರ್ನಾಟಕದಲ್ಲಿ ಮಾತ್ರ ಇಂತಹ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರದ ಮೇಲೆ ಬಿಜೆಪಿ ನಾಯಕರು ಟೀಕೆ ವ್ಯಕ್ತಪಡಿಸಿದ್ದು, ಭದ್ರತಾ ವಿಷಯದಲ್ಲಿ ಸರ್ಕಾರ ಮೃದು ಧೋರಣೆ ಹೊಂದಿದೆ ಎಂದು ಆರೋಪಿಸಿದ್ದಾರೆ.

ಕೇಜ್ರಿವಾಲ್ ನಂತರ ಮನೀಶ್ ಸಿಸೋಡಿಯಾ ಸಹ ಗಾಂಧಿಗಿರಿ ಮಾರ್ಗ

The post ಉಮರ್ ಖಾಲಿದ್ ಕಾರ್ಯಕ್ರಮ: ಅನುಮತಿ ರದ್ದುಪಡಿಸಲು ಆಗ್ರಹ appeared first on Samyukta Karnataka.

ಅಶ್ಲೀಲ ವಿಡಿಯೋ ವಿವಾದ: “ನನ್ನ ಮೇಲೆ ಯಾವ ಕೇಸೂ ಇಲ್ಲ” ಎಂದ ಅಮಾನತುಗೊಂಡ ಡಿಜಿಪಿ ರಾಮಚಂದ್ರ ರಾವ್!
ಬೆಂಗಳೂರು: ಕಚೇರಿಯಲ್ಲಿಯೇ ಮಹಿಳಾ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ರಾಜ್ಯ ಸರ್ಕಾರದಿಂದ ಅಮಾನತುಗೊಂಡಿರುವ ಹಿರಿಯ ಐಪಿಎಸ್ ಅಧಿಕಾರಿ, ಡಿಜಿಪಿ ರಾಮಚಂದ್ರ ರಾವ್ ಅವರು ವಿಡಿಯೋ ವೈರಲ್ ಆದ ಬಳಿಕ ಇದೇ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಮೇಲಿನ ಆರೋಪಗಳ ಕುರಿತು ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.

ಸೋಮವಾರ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸರ್ಕಾರಿ ನಿವಾಸಕ್ಕೆ ಭೇಟಿ ನೀಡಿದ ರಾಮಚಂದ್ರ ರಾವ್, ಸಚಿವರೊಂದಿಗೆ ಕೆಲಕಾಲ ರಹಸ್ಯ ಮಾತುಕತೆ ನಡೆಸಿದರು. ತಮ್ಮ ಅಮಾನತು ಆದೇಶದ ಕುರಿತಾಗಿಯೇ ಅವರು ಗೃಹ ಸಚಿವರೊಂದಿಗೆ ಚರ್ಚಿಸಲು ಆಗಮಿಸಿದ್ದರು ಎನ್ನಲಾಗಿದೆ.

“ನಾನು ಈಗಾಗಲೇ ಸಾಕಷ್ಟು ಅನುಭವಿಸಿದ್ದೇನೆ”: ಸಚಿವರ ಭೇಟಿಯ ಬಳಿಕ ಹೊರಬಂದ ರಾಮಚಂದ್ರ ರಾವ್ ಅವರನ್ನು ಮಾಧ್ಯಮಗಳು ಸುತ್ತುವರಿದಾಗ ಪ್ರತಿಕ್ರಿಯಿಸಿದ ಅವರು, “ಗೃಹ ಸಚಿವರನ್ನು ಭೇಟಿಯಾಗಿ ನನ್ನ ಸಸ್ಪೆಂಡ್ ಬಗ್ಗೆ ಚರ್ಚೆ ಮಾಡಿದ್ದೇನೆ. ಪ್ರಕರಣದ ತನಿಖೆ ನಡೆಯುತ್ತಿರುವುದರಿಂದ ನಾನು ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಆದರೆ, ನನ್ನ ಮೇಲೆ ಯಾವುದೇ ಕೇಸು ದಾಖಲಾಗಿಲ್ಲ. ಈ ವಿಚಾರದಲ್ಲಿ ನಾನು ಈಗಾಗಲೇ ಸಾಕಷ್ಟು ಸಫರ್ ಆಗಿದ್ದೇನೆ. ದಯವಿಟ್ಟು ನನ್ನನ್ನು ಬಿಟ್ಟುಬಿಡಿ” ಎಂದು ಹೇಳುತ್ತಾ ಕಾರು ಹತ್ತಿ ತೆರಳಿದರು.

ಬಯಲಾಗಿತ್ತು ‘ಎಐ’ ಸುಳ್ಳು!: ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಡಿಜಿಪಿ ಆಗಿದ್ದಾಗ ಕಚೇರಿಯಲ್ಲೇ ನಡೆದಿದೆ ಎನ್ನಲಾದ ಈ ರಾಸಲೀಲೆ ವಿಡಿಯೋ ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತಿದ್ದ ರಾಮಚಂದ್ರ ರಾವ್, “ಇದು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಸೃಷ್ಟಿಸಿದ ನಕಲಿ ವಿಡಿಯೋ. ನನ್ನ ತೇಜೋವಧೆ ಮಾಡಲು ಈ ರೀತಿ ಮಾಡಲಾಗಿದೆ” ಎಂದು ವಾದಿಸಿದ್ದರು.

ಆದರೆ, ಎಡಿಜಿಪಿ ಆರ್. ಹಿತೇಂದ್ರ ನೇತೃತ್ವದ ತನಿಖಾ ಸಮಿತಿ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯ (FSL) ತಜ್ಞರು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ 100ಕ್ಕೂ ಹೆಚ್ಚು ಪುಟಗಳ ವರದಿಯಲ್ಲಿ ಆ ವಿಡಿಯೋ ನಕಲಿಯಲ್ಲ, ಅದು ‘ಅಸಲಿ ವಿಡಿಯೋ’ ಎಂಬ ಸ್ಫೋಟಕ ಸತ್ಯವನ್ನು ಬಯಲು ಮಾಡಿದ್ದರು. ಎಫ್‌ಎಸ್‌ಎಲ್ ವರದಿ ಅಸಲಿ ಎಂದಿದ್ದರೂ, ಇದೀಗ ಡಿಜಿಪಿ ಅವರು “ನನ್ನ ಮೇಲೆ ಯಾವ ಕೇಸೂ ಇಲ್ಲ” ಎಂದಿರುವುದು ತೀವ್ರ ಕುತೂಹಲ ಕೆರಳಿಸಿದೆ.

The post ಅಶ್ಲೀಲ ವಿಡಿಯೋ ವಿವಾದ: “ನನ್ನ ಮೇಲೆ ಯಾವ ಕೇಸೂ ಇಲ್ಲ” ಎಂದ ಅಮಾನತುಗೊಂಡ ಡಿಜಿಪಿ ರಾಮಚಂದ್ರ ರಾವ್! appeared first on Samyukta Karnataka.

ಬಿಸಿಲಿನ ಅಲೆಗೆ ಬಲಿಯಾಗಬೇಡಿ: ಹೊರಹೋಗುವ ಮುನ್ನ ಎಚ್ಚರ; ʻಹೀಟ್‌ಸ್ಟ್ರೋಕ್ʼ ಬಗ್ಗೆ ಗಮನ ಇರಲಿ, ಇಲ್ಲಿದೆ ಮಾಹಿತಿ
ಬೆಂಗಳೂರು: ಈ ವರ್ಷದ ಬೇಸಿಗೆಯು ನಿರೀಕ್ಷೆಗಿಂತ ಮೊದಲೇ ಅಸಾಮಾನ್ಯ ತೀವ್ರತೆಯೊಂದಿಗೆ ಬಂದಪ್ಪಳಿಸಿದೆ. ದೇಶದ ಹಲವು ಭಾಗಗಳಲ್ಲಿ ತಾಪಮಾನವು ದಾಖಲೆ ಮಟ್ಟಕ್ಕೆ ಏರುತ್ತಿದ್ದು, ಆರೋಗ್ಯ ತಜ್ಞರು ಇದನ್ನು ‘ಮೌನ ಬೆದರಿಕೆ’ ಎಂದು ಬಣ್ಣಿಸಿದ್ದಾರೆ. ಅತಿಯಾದ ಶಾಖವು ಕೇವಲ ಅಸ್ವಸ್ಥತೆಯಲ್ಲದೆ, ನಿರ್ಜಲೀಕರಣ, ಮೂತ್ರಪಿಂಡದ ಸಮಸ್ಯೆ ಮತ್ತು ಜೀವಕ್ಕೆ ಅಪಾಯಕಾರಿಯಾದ ‘ಹೀಟ್‌ಸ್ಟೋಕ್’ಗೆ ಕಾರಣವಾಗಬಹುದು.

ಹೀಗಾಗಿ ಈ ಬೇಸಿಗೆಯಲ್ಲಿ ಮಾನವ ದೇಹವು ಬೆವರಿನ ಮೂಲಕ ತನ್ನನ್ನು ತಾನು ತಂಪಾಗಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಆದ್ರೆ ವಿಪರೀತ ಶಾಖ ಅಥವಾ ತೇವಾಂಶವಿದ್ದಾಗ ಈ ಪ್ರಕ್ರಿಯೆ ವಿಫಲವಾಗುತ್ತದೆ. ಇದರ ಮೊದಲ ಹಂತವೇ ‘ಶಾಖದ ಒತ್ತಡ’. ಈ ಹಂತದಲ್ಲಿ ತಲೆತಿರುಗುವಿಕೆ, ಅತಿಯಾದ ದಣಿವು, ಸ್ನಾಯು ಸೆಳೆತ ಮತ್ತು ಗಾಢ ಹಳದಿ ಬಣ್ಣದ ಮೂತ್ರ ವಿಸರ್ಜನೆಯಂತಹ ಲಕ್ಷಣಗಳು ಕಂಡುಬರುತ್ತವೆ. ಇದನ್ನು ನಿರ್ಲಕ್ಷಿಸಿದರೆ ಅದು ‘ಶಾಖದ ಬಳಲಿಕೆ’ಗೆ (Heat Exhaustion) ದಾರಿ ಮಾಡಿಕೊಡುತ್ತದೆ.

ಹೀಟ್‌ಸ್ಟೋಕ್: ವೈದ್ಯಕೀಯ ತುರ್ತು ಪರಿಸ್ಥಿತಿ ಶಾಖದ ಹೊಡೆತದ ಅತ್ಯಂತ ತೀವ್ರ ಹಂತವೆಂದರೆ ಹೀಟ್‌ಸ್ಟೋಕ್. ದೇಹದ ಉಷ್ಣತೆ ಅತಿಯಾಗಿ ಹೆಚ್ಚಾದಾಗ ವ್ಯಕ್ತಿಯು ಪ್ರಜ್ಞೆ ತಪ್ಪಬಹುದು ಅಥವಾ ಗೊಂದಲಕ್ಕೊಳಗಾಗಬಹುದು. ಇಂತಹ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯಕೀಯ ನೆರವು ಪಡೆಯುವುದು ಅನಿವಾರ್ಯ. ಚಿಕಿತ್ಸೆ ವಿಳಂಬವಾದರೆ ಇದು ಪ್ರಾಣಾಪಾಯಕ್ಕೆ ಕಾರಣವಾಗಬಹುದು. ವಿಶೇಷವಾಗಿ ಮಕ್ಕಳು, ವೃದ್ಧರು, ಗರ್ಭಿಣಿಯರು ಮತ್ತು ಹೃದ್ರೋಗಿಗಳಿಗೆ ಈ ಅಪಾಯ ಹೆಚ್ಚು.

ತಡೆಗಟ್ಟುವ ಕ್ರಮಗಳು ಮತ್ತು ಮುನ್ನೆಚ್ಚರಿಕೆ: ತೀವ್ರ ಶಾಖದಿಂದ ರಕ್ಷಿಸಿಕೊಳ್ಳಲು ತಜ್ಞರು ಈ ಕೆಳಗಿನ ಸಲಹೆ ಪ್ರಕಾರ:

ಹೈಡ್ರೇಶನ್ ಅಗತ್ಯ: ಬಾಯಾರಿಕೆ ಇಲ್ಲದಿದ್ದರೂ ನಿಯಮಿತವಾಗಿ ನೀರು ಕುಡಿಯಿರಿ. ಎಳನೀರು, ಮಜ್ಜಿಗೆ ಮತ್ತು ಓ.ಆರ್.ಎಸ್ (ORS) ದ್ರಾವಣಗಳು ದೇಹದ ಲವಣಾಂಶವನ್ನು ಕಾಪಾಡುತ್ತವೆ. ಕೆಫೀನ್ ಮತ್ತು ಆಲ್ಕೋಹಾಲ್ ಸೇವನೆಯನ್ನು ಮಿತಿಗೊಳಿಸಿ.

ಸಮಯದ ನಿರ್ವಹಣೆ: ಮಧ್ಯಾಹ್ನ 12 ರಿಂದ ಸಂಜೆ 4 ಗಂಟೆಯ ನಡುವೆ ನೇರ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿ. ಅನಿವಾರ್ಯವಿದ್ದಲ್ಲಿ ಛತ್ರಿ ಅಥವಾ ಟೋಪಿ ಬಳಸಿ.

ಉಡುಗೆ-ತೊಡುಗೆ: ಸಡಿಲವಾದ, ಹಗುರವಾದ ಮತ್ತು ತಿಳಿ ಬಣ್ಣದ ಹತ್ತಿ ಬಟ್ಟೆಗಳನ್ನು ಧರಿಸಿ. ಇದು ದೇಹಕ್ಕೆ ಗಾಳಿಯಾಡಲು ಸಹಾಯ ಮಾಡುತ್ತದೆ.

ಪರಿಸರವನ್ನು ತಂಪಾಗಿಡಿ: ಹಗಲಿನಲ್ಲಿ ಕಿಟಕಿ ಪರದೆಗಳನ್ನು ಮುಚ್ಚಿ ಮನೆಯೊಳಗೆ ಶಾಖ ಬರದಂತೆ ತಡೆಯಿರಿ. ಆಗಾಗ್ಗೆ ತಣ್ಣೀರಿನ ಸ್ನಾನ ಮಾಡುವುದು ಪ್ರಯೋಜನಕಾರಿ.

ಒಟ್ಟಾರೆಯಾಗಿ.. ಬದಲಾಗುತ್ತಿರುವ ಹವಾಮಾನದಲ್ಲಿ ಜಾಗೃತಿ ಮತ್ತು ಸಿದ್ಧತೆ ಅತ್ಯಗತ್ಯ. ನಿಮ್ಮ ದೇಹ ನೀಡುವ ಆರಂಭಿಕ ಎಚ್ಚರಿಕೆಗಳನ್ನು ನಿರ್ಲಕ್ಷಿಸಬೇಡಿ. ಸಣ್ಣ ಮುನ್ನೆಚ್ಚರಿಕೆಗಳು ನಿಮ್ಮ ಮತ್ತು ನಿಮ್ಮ ಕುಟುಂಬದ ಜೀವವನ್ನು ಉಳಿಸಬಹುದು. ಬಿಸಿಲಿನಿಂದ ಜಾಗರೂಕರಾಗಿರಿ.

The post ಬಿಸಿಲಿನ ಅಲೆಗೆ ಬಲಿಯಾಗಬೇಡಿ: ಹೊರಹೋಗುವ ಮುನ್ನ ಎಚ್ಚರ; ʻಹೀಟ್‌ಸ್ಟ್ರೋಕ್ʼ ಬಗ್ಗೆ ಗಮನ ಇರಲಿ, ಇಲ್ಲಿದೆ ಮಾಹಿತಿ appeared first on Samyukta Karnataka.

CET ಪರೀಕ್ಷೆಯಲ್ಲಿ ಜನಿವಾರ ಜಟಾಪಟಿ: 25 ಲಕ್ಷ ದಂಡಕ್ಕೆ ಆಗ್ರಹಿಸಿದ ಬ್ರಾಹ್ಮಣ ಮಹಾಸಭಾ!
ಬೆಂಗಳೂರು: ರಾಜ್ಯದಲ್ಲಿ ಸಿಇಟಿ (CET) ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಜನಿವಾರ ವಿವಾದ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಪರೀಕ್ಷೆಗೆ ಹಾಜರಾಗಿದ್ದ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರವನ್ನು ಬಲವಂತವಾಗಿ ತೆಗೆಸಿದ ಘಟನೆ ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಖಡಕ್ ಪತ್ರ ಬರೆದು ದೂರು ನೀಡಿದೆ.

ಏನಿದು ಘಟನೆ?: ಇತ್ತೀಚೆಗೆ ನಡೆದ ಸಿಇಟಿ ಪರೀಕ್ಷೆಯಲ್ಲಿ, ಆನಂದ್ ಸುಧೀರ್ ರಾವ್ ಎಂಬ ವಿದ್ಯಾರ್ಥಿ ಸೇರಿದಂತೆ ಐದಕ್ಕೂ ಹೆಚ್ಚು ಬ್ರಾಹ್ಮಣ ವಿದ್ಯಾರ್ಥಿಗಳನ್ನು ಪರೀಕ್ಷಾ ಕೊಠಡಿಯೊಳಗೆ ಬಿಡುವ ಮುನ್ನ, ಭದ್ರತಾ ಸಿಬ್ಬಂದಿ ಅವರ ಜನಿವಾರವನ್ನು ತೆಗೆಸಿದ್ದಾರೆ. ಪರೀಕ್ಷಾ ಮಾರ್ಗಸೂಚಿಯಲ್ಲಿ ಜನಿವಾರ ತೆಗೆಸುವ ಬಗ್ಗೆ ಯಾವುದೇ ಅಧಿಕೃತ ನಿಯಮವಿಲ್ಲದಿದ್ದರೂ, ಸಿಬ್ಬಂದಿ ಹೀಗೆ ವರ್ತಿಸಿರುವುದು ವಿದ್ಯಾರ್ಥಿಗಳಿಗೆ ಮತ್ತು ಅವರ ಪೋಷಕರಿಗೆ ತೀವ್ರ ಮಾನಸಿಕ ಕಿರುಕುಳ ಉಂಟುಮಾಡಿದೆ.

ಮಹಾಸಭಾ ಆಗ್ರಹವೇನು?: ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಸ್. ರಘುನಾಥ್, ಇದು ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ನೇರ ಹಲ್ಲೆ ಎಂದು ಕಿಡಿಕಾರಿದ್ದಾರೆ. “ಯಾವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದೆಯೋ, ಆ ಕಾಲೇಜಿನ ಲೈಸೆನ್ಸ್ (ಪರವಾನಗಿ) ಅನ್ನು ತಕ್ಷಣವೇ ರದ್ದು ಮಾಡಬೇಕು. ಅಲ್ಲದೆ, ಆ ಆಡಳಿತ ಮಂಡಳಿಗೆ ಕನಿಷ್ಠ 25 ಲಕ್ಷ ರೂಪಾಯಿಗಳ ದಂಡ ವಿಧಿಸಬೇಕು” ಎಂದು ಸಿಎಂಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ. ಈ ಬೆನ್ನಲ್ಲೇ ಮಡಿವಾಳ ಠಾಣೆ ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಮುಂದುವರಿದ ಹೋರಾಟದ ಎಚ್ಚರಿಕೆ : ಕಳೆದ ವರ್ಷ ಕೂಡ ಇದೇ ರೀತಿಯ ಘಟನೆ ನಡೆದಾಗ ಮಹಾಸಭಾ ಹೈಕೋರ್ಟ್ ಮೆಟ್ಟಿಲೇರಿತ್ತು. ಆಗ, ‘ಮತ್ತೆ ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳುತ್ತೇವೆ’ ಎಂದು ಡಿಸೆಂಬರ್ 2025ರಲ್ಲಿ ಸರ್ಕಾರ ಭರವಸೆ ನೀಡಿತ್ತು. ಆದರೆ, ಸರ್ಕಾರದ ಆದೇಶವನ್ನು ಪರೀಕ್ಷಾ ಕೇಂದ್ರಗಳು ಗಾಳಿಗೆ ತೂರಿವೆ. ಕೇವಲ ಬೆಂಗಳೂರು ಮಾತ್ರವಲ್ಲದೆ, ಚಿಕ್ಕಬಳ್ಳಾಪುರದ ಪರೀಕ್ಷಾ ಕೇಂದ್ರವೊಂದರಲ್ಲೂ ಇದೇ ರೀತಿ ಜನಿವಾರ ತೆಗೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. “ಪೊಲೀಸರು ಈ ಬಗ್ಗೆ ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಿ ನಮಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ” ಎಂದು ಮಹಾಸಭಾ ಎಚ್ಚರಿಕೆ ನೀಡಿದೆ.

The post CET ಪರೀಕ್ಷೆಯಲ್ಲಿ ಜನಿವಾರ ಜಟಾಪಟಿ: 25 ಲಕ್ಷ ದಂಡಕ್ಕೆ ಆಗ್ರಹಿಸಿದ ಬ್ರಾಹ್ಮಣ ಮಹಾಸಭಾ! appeared first on Samyukta Karnataka.

SSLC 2026 ಫಲಿತಾಂಶ: ಈ ಬಾರಿಯೂ ವಿದ್ಯಾರ್ಥಿನಿಯರದ್ದೇ ಮೇಲುಗೈ; ಯಾವ ಜಿಲ್ಲೆಗಳಲ್ಲಿ ಹೆಚ್ಚು ಪಾಸ್?
ಬೆಂಗಳೂರು: ರಾಜ್ಯದ ಲಕ್ಷಾಂತರ SSLC ವಿದ್ಯಾರ್ಥಿಗಳ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದ್ದು, 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ (ಪರೀಕ್ಷೆ-1) ಫಲಿತಾಂಶವನ್ನುಇಂದು (ಗುರುವಾರ) ಸರಿಯಾಗಿ 12:00 ಗಂಟೆಗೆ ಅಧಿಕೃತವಾಗಿ ಪ್ರಕಟಿಸಲಾಗಿದೆ. ಈ ಬಾರಿ ರಾಜ್ಯದಲ್ಲಿ ದಾಖಲೆ ಮಟ್ಟದ ಅಂದರೆ ಶೇಕಡಾ 94.1 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ಹಾಗೇ ನಗರದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಫಲಿತಾಂಶದ ವಿವರಗಳನ್ನು ಹಂಚಿಕೊಂಡರು. ಜಿಲ್ಲಾವಾರು ಸಾಧನೆಯಲ್ಲಿ ಈ ಬಾರಿಯೂ ಕರಾವಳಿ ಜಿಲ್ಲೆಗಳು ಸಿಂಹಪಾಲು ಪಡೆದಿವೆ. ದಕ್ಷಿಣ ಕನ್ನಡ ಜಿಲ್ಲೆಯು ಪ್ರಥಮ ಸ್ಥಾನವನ್ನು ಅಲಂಕರಿಸಿದರೆ, ಉಡುಪಿ ದ್ವಿತೀಯ ಹಾಗೂ ಉತ್ತರ ಕನ್ನಡ ಜಿಲ್ಲೆ ತೃತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಕಳೆದ ಬಾರಿಗಿಂತ ಈ ಬಾರಿ ಫಲಿತಾಂಶದ ಗುಣಮಟ್ಟದಲ್ಲಿ ಗಣನೀಯ ಸುಧಾರಣೆ ಕಂಡುಬಂದಿದೆ ಎಂದು ಸಚಿವರು ತಿಳಿಸಿದರು.

ಫಲಿತಾಂಶದ ಅಂಕಿ-ಅಂಶಗಳು:
ಒಟ್ಟು ನೋಂದಣಿ: 7.75 ಲಕ್ಷ ವಿದ್ಯಾರ್ಥಿಗಳು.
ಪರೀಕ್ಷೆಗೆ ಹಾಜರಾದವರು:7.7 ಲಕ್ಷ ವಿದ್ಯಾರ್ಥಿಗಳು.
ಗೈರಾದವರು: 5,000 ವಿದ್ಯಾರ್ಥಿಗಳು.
ಉತ್ತೀರ್ಣರಾದವರು: 7.7 ಲಕ್ಷ ವಿದ್ಯಾರ್ಥಿಗಳು.

ತಂತ್ರಜ್ಞಾನದ ಬಳಕೆ ಮತ್ತು ಸೌಲಭ್ಯ:
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಬಾರಿ ಹಲವು ಸುಧಾರಣೆಗಳನ್ನು ತರಲಾಗಿದೆ. ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗಳಿಗೆ ವಾಟ್ಸ್‌ಆ್ಯಪ್‌ ಮತ್ತು ಎಸ್‌ಎಂಎಸ್ ಮೂಲಕ ನೇರವಾಗಿ ಫಲಿತಾಂಶವನ್ನು ರವಾನಿಸಲಾಗಿದೆ. ವಿಶೇಷವೆಂದರೆ, ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳು ತಮ್ಮ ಅಧಿಕೃತ ಅಂಕಪಟ್ಟಿಯನ್ನು ಡಿಜಿಲಾಕರ್ (DigiLocker) ಮೂಲಕ ಡೌನ್‌ಲೋಡ್ ಮಾಡಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.

ಅದೇ ರೀತಿಯಾಗಿ ಕಳೆದ ಬಾರಿ puc ವಿದ್ಯಾರ್ಥಿಗಳ ಫಲಿತಾಂಶವನ್ನ ಯಾವುದೇ ಸಮಸ್ಯ ಅಡ್ಡಿಯಾಗದ ಹಾಗೇ ಡಿಜಿಲಾಕರ್‌ ವ್ಯವಸ್ಥ ಮಾಡಿದ್ದರು. ಈಗ SSLC ವಿದ್ಯಾರ್ಥಿಗಳಿಗೂ ಇಂಥದ್ದೆ ನಿಯಮ ಅಳವಡಿಸಲಾಗಿದೆ. ಅಲ್ಲದೇ.. ಡಿಜಿಲಾಕರ್‌ ಮೂಲಕ ಅಂಕಪಟ್ಟಿಯನ್ನು ನೋಡಬಹುದು.

ಹಾಗೇ ಇಂದು ಮಧ್ಯಾಹ್ನ 12 ಗಂಟೆಯ ನಂತರ ರಾಜ್ಯದ ಎಲ್ಲಾ ಪ್ರೌಢಶಾಲೆಗಳ ನೋಟಿಸ್ ಬೋರ್ಡ್‌ಗಳಲ್ಲಿ ಫಲಿತಾಂಶವನ್ನು ಪ್ರಕಟಿಸಲು ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಫೇಲಾದ ಅಥವಾ ಅಂಕ ಕಡಿಮೆ ಬಂದ ವಿದ್ಯಾರ್ಥಿಗಳು ಧೃತಿಗೆಡಬಾರದು, ಅವರಿಗೆ ಪರೀಕ್ಷೆ-2 ಮತ್ತು 3ರಲ್ಲಿ ಅವಕಾಶ ನೀಡಲಾಗುವುದು ಎಂದು ಸಚಿವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

The post SSLC 2026 ಫಲಿತಾಂಶ: ಈ ಬಾರಿಯೂ ವಿದ್ಯಾರ್ಥಿನಿಯರದ್ದೇ ಮೇಲುಗೈ; ಯಾವ ಜಿಲ್ಲೆಗಳಲ್ಲಿ ಹೆಚ್ಚು ಪಾಸ್? appeared first on Samyukta Karnataka.

SSLC ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್: 3ನೇ ಭಾಷೆಗೆ ಗ್ರೇಡ್ ಬದಲು ಅಂಕ, ಹೈಕೋರ್ಟ್ ಮಹತ್ವದ ಆದೇಶ!
SSLC ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಕಾಡುತ್ತಿದ್ದ ಬಹುದೊಡ್ಡ ಗೊಂದಲವೊಂದಕ್ಕೆ ಕರ್ನಾಟಕ ಹೈಕೋರ್ಟ್ ತೆರೆ ಎಳೆದಿದೆ. ಹತ್ತನೇ ತರಗತಿಯ 3ನೇ ಭಾಷೆಯ ಪರೀಕ್ಷಾ ಮೌಲ್ಯಮಾಪನದಲ್ಲಿ ‘ಗ್ರೇಡಿಂಗ್ ಸಿಸ್ಟಮ್’ ಅಳವಡಿಸುವ ರಾಜ್ಯ ಸರ್ಕಾರದ ವಿವಾದಾತ್ಮಕ ನಿರ್ಧಾರಕ್ಕೆ ನ್ಯಾಯಾಲಯ ತಡೆ ನೀಡಿದೆ. ಹಿಂದಿನಂತೆಯೇ ವಿದ್ಯಾರ್ಥಿಗಳಿಗೆ ‘ಸಂಖ್ಯಾತ್ಮಕ ಅಂಕಗಳನ್ನು’ ನೀಡುವಂತೆ ಮಹತ್ವದ ಆದೇಶ ಹೊರಡಿಸಿದ್ದು, ಶಿಕ್ಷಣದ ಗುಣಮಟ್ಟವನ್ನು ಕಾಪಾಡುವ ನಿಟ್ಟಿನಲ್ಲಿ ಇದೊಂದು ಐತಿಹಾಸಿಕ ನಿರ್ಧಾರ ಎಂದು ಶಿಕ್ಷಣ ತಜ್ಞರು ಬಣ್ಣಿಸಿದ್ದಾರೆ.

ಪರೀಕ್ಷಾ ಸೀಸನ್‌ನ ಮಧ್ಯದಲ್ಲಿಯೇ ದಿಢೀರನೆ ನಿಯಮಗಳನ್ನು ಬದಲಾಯಿಸಿದ ಸರ್ಕಾರದ ನಡೆಯಿಂದಾಗಿ ರಾಜ್ಯದ ಸುಮಾರು 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ತೀವ್ರ ಗೊಂದಲ ಮತ್ತು ಆತಂಕಕ್ಕೆ ಒಳಗಾಗಿದ್ದರು. ಇದೀಗ ಹೈಕೋರ್ಟ್ ಆದೇಶದಿಂದ ವಿದ್ಯಾರ್ಥಿಗಳಿಗೆ ದೊಡ್ಡ ನಿರಾಳತೆ ಸಿಕ್ಕಂತಾಗಿದೆ.

ಶಿಕ್ಷಣದ ಗುಣಮಟ್ಟದ ಮೇಲೆ ಗ್ರೇಡಿಂಗ್ ವ್ಯವಸ್ಥೆಯ ಕರಾಳ ಪ್ರಭಾವ: ಅಂಕಗಳ ಬದಲಾಗಿ ಕೇವಲ ‘ಗ್ರೇಡ್’ ನೀಡುವ ಪದ್ಧತಿಯನ್ನು ಜಾರಿಗೆ ತಂದರೆ, ವಿದ್ಯಾರ್ಥಿಗಳು ಆ ನಿರ್ದಿಷ್ಟ ಭಾಷೆಯನ್ನು ಸರಿಯಾಗಿ ಓದಲು ಅಥವಾ ಬರೆಯಲು ಕಲಿಯದಿದ್ದರೂ ಸುಲಭವಾಗಿ ಹತ್ತನೇ ತರಗತಿಯನ್ನು ಪಾಸು ಮಾಡಬಹುದು. ಮೇಲ್ನೋಟಕ್ಕೆ ಇದು ಸುಲಭ ಎನಿಸಿದರೂ, ಒಟ್ಟಾರೆಯಾಗಿ ರಾಜ್ಯದ ಶಿಕ್ಷಣದ ಗುಣಮಟ್ಟವನ್ನು ಇದು ಪಾತಾಳಕ್ಕೆ ತಳ್ಳುತ್ತದೆ. ಸಂಖ್ಯಾತ್ಮಕ ಅಂಕಗಳನ್ನು ತೆಗೆದುಹಾಕುವ ಮೂಲಕ, ಸರ್ಕಾರಿ ಶಾಲೆಯ ಬಡ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಸಿಬಿಎಸ್‌ಇ (CBSE) ಮತ್ತು ಐಸಿಎಸ್‌ಇ (ICSE) ಶಾಲೆಗಳ ವಿದ್ಯಾರ್ಥಿಗಳೊಂದಿಗೆ ಪೈಪೋಟಿ ನಡೆಸಲು ಬೇಕಾದ ಸ್ಪರ್ಧಾತ್ಮಕ ಮನೋಭಾವವನ್ನು ಕಿತ್ತುಕೊಳ್ಳುವ ಹುನ್ನಾರ ಇದರ ಹಿಂದಿತ್ತು ಎಂಬ ಗಂಭೀರ ಆರೋಪಗಳಿದ್ದವು.

ಮೂರನೇ ಭಾಷೆಗೆ ಗ್ರೇಡ್ ತರುವ ಈ ನಿಯಮವನ್ನು “ಕನ್ನಡವನ್ನು ರಕ್ಷಿಸುವ” ಹೆಜ್ಜೆ ಎಂದು ಬಿಂಬಿಸಲಾಗಿತ್ತು. ಆದರೆ ವಾಸ್ತವದಲ್ಲಿ ಇದು 3ನೇ ಭಾಷೆಯಾಗಿ ಕನ್ನಡ ಕಲಿಯುತ್ತಿದ್ದವರಿಗೆ ಲಾಭಕ್ಕಿಂತ ಹೆಚ್ಚು ನಷ್ಟವನ್ನೇ ಉಂಟುಮಾಡಿತ್ತು.

ರಾಜ್ಯದಲ್ಲಿ ಭಾಷಾ ಕಲಿಕೆಯ ಅಸಲಿ ಸಮಸ್ಯೆ ಇರುವುದು ಭಾಷೆಯಲ್ಲ, ಬದಲಾಗಿ ‘ಬೋಧನಾ ಕ್ರಮ’ದಲ್ಲಿ ಎಂಬುದನ್ನು 2024ರ ಎಸ್‌ಎಸ್‌ಎಲ್‌ಸಿ ಅಂಕಿ-ಅಂಶಗಳು ಬಟಾಬಯಲು ಮಾಡಿವೆ. ಅಚ್ಚರಿಯ ವಿಚಾರವೆಂದರೆ, ಪ್ರಥಮ ಭಾಷೆಯಾಗಿ ಕನ್ನಡ ಬರೆದ ಬರೋಬ್ಬರಿ 1.32 ಲಕ್ಷ ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ! ಆದರೆ, 3ನೇ ಭಾಷೆಯಾಗಿ ಕನ್ನಡ ಬರೆದು ಫೇಲ್ ಆದವರ ಸಂಖ್ಯೆ ಕೇವಲ 1,992. ಅಂದರೆ, ಸಂಸ್ಕೃತ, ಹಿಂದಿ ಅಥವಾ ಇಂಗ್ಲಿಷ್ ಅನ್ನು ಪ್ರಥಮ ಭಾಷೆಯಾಗಿ ಆಯ್ಕೆ ಮಾಡಿಕೊಂಡವರು ಅದರಲ್ಲಿ ಅತ್ಯುತ್ತಮ ಅಂಕ ಪಡೆದು ತೇರ್ಗಡೆಯಾಗಿದ್ದಾರೆ, ಆದರೆ ಪ್ರಥಮ ಭಾಷೆಯಾಗಿ ಕನ್ನಡ ಆಯ್ದುಕೊಂಡವರು ಫೇಲ್ ಆಗಿದ್ದಾರೆ. ಇದರರ್ಥ, ಕನ್ನಡವನ್ನು ಶಾಲೆಗಳಲ್ಲಿ ಬೋಧಿಸುತ್ತಿರುವ ರೀತಿಯಲ್ಲಿ ದೋಷವಿದೆಯೇ ಹೊರತು, ಅದು ಎಷ್ಟನೇ ಭಾಷೆಯಾಗಿ ಕೂತಿದೆ ಎಂಬುದರಲ್ಲಲ್ಲ.

ತನ್ನ ಶೈಕ್ಷಣಿಕ ವೈಫಲ್ಯಗಳನ್ನು ಮುಚ್ಚಿಡಲು ಸರ್ಕಾರವು “ಹಿಂದಿ ಹೇರಿಕೆ” ಎಂಬ ರಾಜಕೀಯ ಅಸ್ತ್ರವನ್ನು ಬಳಸಿಕೊಂಡಿತು. 2025ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯದ ಒಟ್ಟಾರೆ ತೇರ್ಗಡೆ ಪ್ರಮಾಣ ಶೇ. 62.34ಕ್ಕೆ ಕುಸಿದಿದ್ದು, ಇದು ಕಳೆದ ಇಪ್ಪತ್ತು ವರ್ಷಗಳಲ್ಲೇ ಅತಿ ಕಳಪೆ ಸಾಧನೆಯಾಗಿದೆ.

3ನೇ ಭಾಷೆಯನ್ನು (ಸಾಮಾನ್ಯವಾಗಿ ಹಿಂದಿ) ಕಡೆಗಣಿಸುವುದರಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಭಾರಿ ಹಿನ್ನಡೆಯಾಗಲಿದೆ. ಭವಿಷ್ಯದಲ್ಲಿ ಭಾರತೀಯ ಸೇನೆಗೆ ಸೇರಲು, ನೀಟ್ (NEET), ಜೆಇಇ (JEE) ನಂತಹ ರಾಷ್ಟ್ರೀಯ ಪ್ರವೇಶ ಪರೀಕ್ಷೆಗಳನ್ನು ಎದುರಿಸಲು ಹಾಗೂ ಉದ್ಯೋಗ ಅರಸಿ ಬೇರೆ ರಾಜ್ಯಗಳಿಗೆ ಹೋಗಲು ನಮ್ಮ ವಿದ್ಯಾರ್ಥಿಗಳು ಪರದಾಡಬೇಕಾಗುತ್ತದೆ. ಇದರಿಂದ ಕಂಗಾಲಾಗುವ ಪೋಷಕರು ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ರಾಜ್ಯ ಪಠ್ಯಕ್ರಮವನ್ನು ಬಿಟ್ಟು ಸಿಬಿಎಸ್‌ಇ ಅಥವಾ ಐಸಿಎಸ್‌ಇ ಬೋರ್ಡ್‌ಗಳತ್ತ ಮುಖ ಮಾಡುತ್ತಾರೆ. ಇದು ಪರೋಕ್ಷವಾಗಿ ಕನ್ನಡ ಮಾಧ್ಯಮ ಶಾಲೆಗಳಿಗೆ ಬೇಡಿಕೆ ಕುಸಿಯುವಂತೆ ಮಾಡುತ್ತದೆ.

ಶಾಲೆಗಳ ಮುಚ್ಚುವಿಕೆ ಮತ್ತು ಅನುದಾನದ ತಾರತಮ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ (2013–2018 ಮತ್ತು 2023 ರಿಂದ ಇಲ್ಲಿಯವರೆಗೆ) ಸಾವಿರಾರು ಕನ್ನಡ ಶಾಲೆಗಳಿಗೆ ಬೀಗ ಜಡಿಯಲಾಗಿದೆ ಎಂಬ ಅಂಕಿ-ಅಂಶಗಳು ಆತಂಕಕಾರಿಯಾಗಿವೆ. ಮಾಧ್ಯಮ ವರದಿಗಳ ಪ್ರಕಾರ, 2016ರಲ್ಲಿ 2,959 ಸರ್ಕಾರಿ ಶಾಲೆಗಳು ಮುಚ್ಚಲ್ಪಟ್ಟರೆ, 2025ರಲ್ಲಿ ಬರೋಬ್ಬರಿ 25,000 ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವ ಅಥವಾ ವಿಲೀನಗೊಳಿಸುವ ಯೋಜನೆ ರೂಪಿಸಲಾಗಿತ್ತು. 2026ರಲ್ಲಿ 600 ಖಾಸಗಿ ಕನ್ನಡ ಶಾಲೆಗಳು ಮುಚ್ಚುವ ಭೀತಿಯಲ್ಲಿವೆ.

ಆದರೆ, ಇದೇ ಸಮಯದಲ್ಲಿ ಉರ್ದು ಸಂಸ್ಥೆಗಳ ಅಭಿವೃದ್ಧಿಗಾಗಿ ರೂ. 400 ಕೋಟಿ ಅನುದಾನ ಮೀಸಲಿಡಲಾಗಿದೆ, ಅಂಗನವಾಡಿ ಶಿಕ್ಷಕಿಯರ ನೇಮಕಾತಿಗೆ ಉರ್ದು ಭಾಷಾ ಜ್ಞಾನ ಕಡ್ಡಾಯಗೊಳಿಸಲಾಗಿದೆ ಮತ್ತು ರಂಜಾನ್ ಹಬ್ಬದ ಅನುಕೂಲಕ್ಕಾಗಿ ಪರೀಕ್ಷಾ ವೇಳಾಪಟ್ಟಿಗಳನ್ನು ಬದಲಾಯಿಸಲಾಗಿದೆ. ಇವೆಲ್ಲವೂ ಭಾಷಾ ನೀತಿಯಲ್ಲಿನ ತಾರತಮ್ಯವನ್ನು ಎತ್ತಿತೋರಿಸುತ್ತವೆ ಎಂಬ ಟೀಕೆ ವ್ಯಕ್ತವಾಗಿದೆ.

ಉರ್ದು ಶಾಲೆಗಳಲ್ಲಿ ‘ಕನ್ನಡ’ ಮಾಯವಾಗುವ ಭೀತಿ!:  ಹೊಸ ಗ್ರೇಡಿಂಗ್ ನಿಯಮದ ಅತಿ ದೊಡ್ಡ ಅಪಾಯವೆಂದರೆ, ರಾಜ್ಯದಲ್ಲಿರುವ 4,000ಕ್ಕೂ ಹೆಚ್ಚು ಉರ್ದು ಮಾಧ್ಯಮ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು 3ನೇ ಭಾಷೆಯಾಗಿರುವ ‘ಕನ್ನಡ’ವನ್ನು ಸುಲಭವಾಗಿ ಕೈಬಿಡುವ ಅವಕಾಶ ಸೃಷ್ಟಿಯಾಗುತ್ತಿತ್ತು. ಇದರಿಂದಾಗಿ, ಮುಸ್ಲಿಂ ವಿದ್ಯಾರ್ಥಿಗಳ ಇಡೀ ತಲೆಮಾರೊಂದು ರಾಜ್ಯದ ಅಧಿಕೃತ ಭಾಷೆಯಾದ ಕನ್ನಡವನ್ನು ಕಲಿಯದೆಯೇ ಬೆಳೆಯುವಂತಾಗುತ್ತಿತ್ತು. ಇದು ಸರ್ಕಾರದ “ಕನ್ನಡ ಮೊದಲು” ಎಂಬ ನೀತಿಗೆ ತದ್ವಿರುದ್ಧವಾಗಿದ್ದು, ಸಮುದಾಯಗಳ ನಡುವಿನ ಒಗ್ಗಟ್ಟಿಗೂ ಧಕ್ಕೆ ತರುವಂತಿತ್ತು. ಒಂದು ನಿರ್ದಿಷ್ಟ ಸಮುದಾಯಕ್ಕೆ ಕಠಿಣ ಭಾಷಾ ನಿಯಮಗಳಿಂದ ವಿನಾಯಿತಿ ನೀಡುವ ಉದ್ದೇಶದಿಂದಲೇ ಇಂತಹ ನೀತಿ ರೂಪಿಸಲಾಗಿತ್ತೇ ಎಂಬ ಅನುಮಾನಗಳೂ ದಟ್ಟವಾಗಿದ್ದವು.

The post SSLC ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್: 3ನೇ ಭಾಷೆಗೆ ಗ್ರೇಡ್ ಬದಲು ಅಂಕ, ಹೈಕೋರ್ಟ್ ಮಹತ್ವದ ಆದೇಶ! appeared first on Samyukta Karnataka.

‘ಅಣ್ಣ’ ಎಂದವನ ಜೊತೆಯೇ ಎಸ್ಕೇಪ್: ಗಂಡನಿಗೆ ಕೈಕೊಟ್ಟ ಪತ್ನಿ, ಬೆನ್ನಿಗೆ ಚೂರಿಹಾಕಿದ ಬೆಸ್ಟ್ ಫ್ರೆಂಡ್!
ಇತ್ತೀಚಿನ ದಿನಗಳಲ್ಲಿ ವಿವಾಹೇತರ ಸಂಬಂಧಗಳು ಸುಂದರ ಸಂಸಾರಗಳನ್ನು ಬೀದಿಗೆ ತರುತ್ತಿವೆ. ಪ್ರೀತಿಸಿ, ನಂಬಿ ಕೈಹಿಡಿದ ಸಂಗಾತಿಯೇ ನಂಬಿಕೆ ದ್ರೋಹ ಮಾಡುತ್ತಿರುವ ಘಟನೆಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಇದೀಗ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂಥದ್ದೇ ಒಂದು ಶಾಕಿಂಗ್ ಘಟನೆ ನಡೆದಿದ್ದು, ತನ್ನ ಪ್ರಾಣದ ಗೆಳೆಯನೇ ಬೆನ್ನಿಗೆ ಚೂರಿ ಹಾಕಿದ್ದಾನೆ ಎಂದು ಜಿಮ್ ಟ್ರೈನರ್ ಒಬ್ಬರು ಕಣ್ಣೀರಿಡುತ್ತಿದ್ದಾರೆ.

ಬೆಂಗಳೂರಿನ ನಿತೇಶ್ ಎಂಬ ಯುವಕ ವೃತ್ತಿಯಲ್ಲಿ ಜಿಮ್ ಟ್ರೈನರ್. ಇವರು ಹಾಗೂ ನವೀನ್ ಎಂಬಾತ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವಾಗ ಅತ್ಯಂತ ಆಪ್ತ ಸ್ನೇಹಿತರಾಗಿದ್ದರು. ನಿತೇಶ್ ಯುವತಿಯೊಬ್ಬಳನ್ನು ಪ್ರೀತಿಸಿ, ಎರಡೂ ಕುಟುಂಬಗಳ ಒಪ್ಪಿಗೆ ಮೇರೆಗೆ ಅದ್ಧೂರಿಯಾಗಿ ಮದುವೆಯಾಗಿದ್ದರು. ಮದುವೆಯ ಬಳಿಕ ನಿತೇಶ್ ತನ್ನ ಗೆಳೆಯ ನವೀನ್‌ನ ಮನೆಯಲ್ಲೇ ಬಾಡಿಗೆಗೆ ವಾಸವಿದ್ದರು.

ಆದರೆ, ಮನೆಗೆ ಬರುತ್ತಿದ್ದ ನವೀನ್ ತನ್ನ ಗೆಳೆಯನ ಹೆಂಡತಿಯ ಮೇಲೆಯೇ ಕಣ್ಣು ಹಾಕಿದ್ದ. ಇತ್ತ ಪತ್ನಿ ಕೂಡ, ಗಂಡನಿಗೆ ಅನುಮಾನ ಬಾರದಿರಲಿ ಎಂದು ಪ್ರಿಯಕರ ನವೀನ್ ನಂಬರ್ ಅನ್ನು ಹುಡುಗಿಯೊಬ್ಬಳ ಹೆಸರಿನಲ್ಲಿ ಸೇವ್ ಮಾಡಿಕೊಂಡು ವಾಟ್ಸಾಪ್ ಚಾಟಿಂಗ್ ಮಾಡುತ್ತಿದ್ದಳು! ಗಂಡ ಈ ಬಗ್ಗೆ ವಿಚಾರಿಸಿದರೆ, ‘ಅವನು ನನಗೆ ಅಣ್ಣನ ಸಮಾನ’ ಎಂದು ನಾಟಕವಾಡುತ್ತಿದ್ದಳು.

ನಾಟಕವಾಡಿ ಮನೆ ಬಿಟ್ಟ ಮಹಿಳೆ: ಪತ್ನಿಯ ಈ ಕಳ್ಳಾಟ ನಿಧಾನವಾಗಿ ನಿತೇಶ್‌ಗೆ ತಿಳಿದುಬಂದಿತ್ತು. ಎಚ್ಚೆತ್ತ ಆತ, ಪತ್ನಿಗೆ ಕಟ್ಟುನಿಟ್ಟಾಗಿ ಬುದ್ಧಿವಾದ ಹೇಳಿ, ಆ ಮನೆಯನ್ನು ಖಾಲಿ ಮಾಡಿ ಬನಶಂಕರಿಯ ಬೇರೊಂದು ಮನೆಗೆ ವಾಸ್ತವ್ಯ ಬದಲಾಯಿಸಿದ್ದರು. ಆದರೆ, ಆಕೆಯ ಕಳ್ಳಾಟ ಅಲ್ಲಿಯೂ ಮುಂದುವರಿದಿತ್ತು. ಮೂರು ದಿನಗಳ ಹಿಂದೆ ‘ಹೊಟ್ಟೆನೋವು, ಕೆಲಸಕ್ಕೆ ಹೋಗುವುದಿಲ್ಲ’ ಎಂದು ನಾಟಕವಾಡಿದ್ದ ಪತ್ನಿ, ಗಂಡ ಕೆಲಸಕ್ಕೆ ಹೋಗುತ್ತಿದ್ದಂತೆ ಬ್ಯಾಗ್ ಪ್ಯಾಕ್ ಮಾಡಿಕೊಂಡು ಅದೇ ನವೀನ್ ಜೊತೆ ಎಸ್ಕೇಪ್ ಆಗಿದ್ದಳು.

ಕೆಲಸ ಮುಗಿಸಿ ಮನೆಗೆ ಬಂದ ನಿತೇಶ್‌ಗೆ ಪತ್ನಿ ನಾಪತ್ತೆಯಾಗಿರುವುದು ಅರಿವಿಗೆ ಬಂದಿದೆ. ತಕ್ಷಣವೇ ಆತ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಾರ್ಯಾಚರಣೆ ನಡೆಸಿದ ಪೊಲೀಸರು, ನವೀನ್ ಹಾಗೂ ಆಕೆಯನ್ನು ಪತ್ತೆಹಚ್ಚಿ ಠಾಣೆಗೆ ಕರೆತಂದಿದ್ದಾರೆ. ಆದರೆ, ಠಾಣೆಯಲ್ಲಿ ಆಕೆ ಆಡಿದ ಮಾತು ಕೇಳಿ ನಿತೇಶ್ ಅಕ್ಷರಶಃ ಕುಸಿದುಹೋಗಿದ್ದಾರೆ. “ನಾನು ಯಾವುದೇ ಕಾರಣಕ್ಕೂ ಗಂಡನ ಮನೆಗೆ ಹೋಗುವುದಿಲ್ಲ. ನನಗೆ ಆತನ ಜೊತೆ ಬಾಳಲು ಇಷ್ಟವಿಲ್ಲ, ಬೇಕಿದ್ದರೆ ಪಿಜಿಯಲ್ಲಿ ಇರುತ್ತೇನೆ” ಎಂದು ಹಠ ಹಿಡಿದಿದ್ದಾಳೆ.

The post ‘ಅಣ್ಣ’ ಎಂದವನ ಜೊತೆಯೇ ಎಸ್ಕೇಪ್: ಗಂಡನಿಗೆ ಕೈಕೊಟ್ಟ ಪತ್ನಿ, ಬೆನ್ನಿಗೆ ಚೂರಿಹಾಕಿದ ಬೆಸ್ಟ್ ಫ್ರೆಂಡ್! appeared first on Samyukta Karnataka.

ಬಣ್ಣದ ಲೋಕದಲ್ಲೂ ಮಿಂಚಿ, ಓದಿನಲ್ಲೂ ‘ಶತಕ’ ಬಾರಿಸಿದ ನಟಿ ಅಂಕಿತಾ; ಪಿಯು ಫಲಿತಾಂಶದಲ್ಲಿ ಭರ್ಜರಿ ಸಾಧನೆ!
ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, ರಾಜ್ಯದ ಸಾವಿರಾರು ವಿದ್ಯಾರ್ಥಿಗಳ ಮುಖದಲ್ಲಿ ಮಂದಹಾಸ ಮೂಡಿದೆ. ಈ ಸಂಭ್ರಮದ ನಡುವೆ ಕನ್ನಡ ಕಿರುತೆರೆಯ ಜನಪ್ರಿಯ ನಟಿ ಅಂಕಿತಾ ಜಯರಾಮ್ ಕೂಡ ಒಬ್ಬರು.

ಶೂಟಿಂಗ್‌ ಮತ್ತು ಬಣ್ಣದ ಲೋಕದ ಕೆಲಸಗಳಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ, ಓದಿನ ಕಡೆಗೆ ಅಷ್ಟೇ ಗಮನ ನೀಡಿದ್ದ ಅಂಕಿತಾ ಈಗ 97% ಅಂಕಗಳನ್ನು ಪಡೆಯುವ ಮೂಲಕ ಅಪ್ಪ-ಅಮ್ಮ ಮೆಚ್ಚುವಂತಹ ಮಗಳಾಗಿದ್ದಾರೆ.

ಸಂಖ್ಯಾಶಾಸ್ತ್ರದಲ್ಲಿ ‘ಪರ್ಫೆಕ್ಟ್ 100′: ಬೆಂಗಳೂರಿನ ಎಸ್‌ಎಸ್‌ಎಂಆರ್‌ವಿ ಕಾಲೇಜಿನಲ್ಲಿ ವಾಣಿಜ್ಯ (Commerce) ವಿಭಾಗದಲ್ಲಿ ವ್ಯಾಸಂಗ ಮಾಡಿದ್ದ ಅಂಕಿತಾ, ಒಟ್ಟು 600 ಅಂಕಗಳಿಗೆ 579 ಅಂಕಗಳನ್ನು ಗಳಿಸಿದ್ದಾರೆ. ವಿಶೇಷವೆಂದರೆ ಸಂಖ್ಯಾಶಾಸ್ತ್ರದಲ್ಲಿ 100ಕ್ಕೆ 100 ಅಂಕಗಳನ್ನು ಪಡೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಉಳಿದಂತೆ ವ್ಯವಹಾರ ಅಧ್ಯಯನದಲ್ಲಿ 98, ಕನ್ನಡದಲ್ಲಿ 97 ಹಾಗೂ ಅಕೌಂಟೆನ್ಸಿಯಲ್ಲಿ 96 ಅಂಕಗಳನ್ನು ಪಡೆದು ‘ಡಿಸ್ಟಿಂಕ್ಷನ್’ನಲ್ಲಿ ತೇರ್ಗಡೆಯಾಗಿದ್ದಾರೆ. ಎಸ್‌ಎಸ್‌ಎಲ್‌ಸಿಯಲ್ಲೂ 95% ಅಂಕ ಗಳಿಸಿದ್ದರು ಎಂಬುದು ಗಮನಾರ್ಹ.

ಬಾಲನಟಿಯಿಂದ ನಾಯಕಿಯವರೆಗೆ: ಅಂಕಿತಾ ಜಯರಾಮ್ ಕನ್ನಡಿಗರಿಗೆ ಚಿರಪರಿಚಿತ ಮುಖ. ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ನಟಿ ಪುನೀತ್ ರಾಜ್‌ಕುಮಾರ್, ದರ್ಶನ್, ಸುದೀಪ್ ಹಾಗೂ ಶಿವರಾಜ್ ಕುಮಾರ್ ಅವರಂತಹ ದಿಗ್ಗಜ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಸದ್ಯ ‘ಕರ್ಣ’ ಧಾರಾವಾಹಿಯಲ್ಲಿ ‘ರಿಯಾ’ ಪಾತ್ರದ ಮೂಲಕ ಮನೆಮಾತಾಗಿದ್ದಾರೆ. ಅಷ್ಟೇ ಅಲ್ಲದೆ, ‘ಕಾಗದ’ ಚಿತ್ರದ ಮೂಲಕ ನಾಯಕಿಯಾಗಿಯೂ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಿದ್ದಾರೆ.

ತಂದೆಗೆ ಕೊಟ್ಟ ವಿಶೇಷ ಗಿಫ್ಟ್: ಈ ಅದ್ಭುತ ಗೆಲುವನ್ನು ಅಂಕಿತಾ ತಮ್ಮ ತಂದೆಯ ಹುಟ್ಟುಹಬ್ಬದ ಉಡುಗೊರೆ ಎಂದು ಕರೆದಿದ್ದಾರೆ. “ಕಂಡ ಕನಸು ನನಸಾದ ಸುದಿನ. ರಾಯರ ಕೃಪೆ ಮತ್ತು ನಿಮ್ಮೆಲ್ಲರ ಹಾರೈಕೆಯಿಂದ ಈ ಸಾಧನೆ ಸಾಧ್ಯವಾಗಿದೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ನಟನೆ ಮತ್ತು ಶಿಕ್ಷಣ ಎರಡನ್ನೂ ಸಮತೋಲನದಿಂದ ನಿಭಾಯಿಸಿದ ಅಂಕಿತಾ ಈ ಹಾದಿ ಅನೇಕ ಯುವ ಪ್ರತಿಭೆಗಳಿಗೆ ಸ್ಫೂರ್ತಿಯಾಗಿದೆ.

The post ಬಣ್ಣದ ಲೋಕದಲ್ಲೂ ಮಿಂಚಿ, ಓದಿನಲ್ಲೂ ‘ಶತಕ’ ಬಾರಿಸಿದ ನಟಿ ಅಂಕಿತಾ; ಪಿಯು ಫಲಿತಾಂಶದಲ್ಲಿ ಭರ್ಜರಿ ಸಾಧನೆ! appeared first on Samyukta Karnataka.

ಕಿಡ್ನಿ ದಾನಕ್ಕೆ ಬದಲಾದ ಮಾರ್ಗಸೂಚಿ: ಸುಸಜ್ಜಿತ ಕಸಿ ವ್ಯವಸ್ಥೆ; ರೋಗಿಗಳ ಹಿತರಕ್ಷಣೆಗಾಗಿ ಹೊಸ ನಿಯಮ ಜಾರಿ!
ಕಿಡ್ನಿ ದಾನ ಮಾಡಲು ಇರುವ ಮಾರ್ಗಸೂಚಿಗಳಲ್ಲಿ ಕೆಲವು ಬದಲಾವಣೆ ಮಾಡಿರುವ ಕರ್ನಾಟಕ ಸರ್ಕಾರ, ಬಹು ಜೋಡಿ ಮೂತ್ರಪಿಂಡ ವಿನಿಮಯ ಕಸಿ ಮಾರ್ಗಸೂಚಿ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಕಿಡ್ನಿ ದಾನಿಗಳು ಲಭ್ಯವಿದ್ದರೂ, ರಕ್ತದ ಗುಂಪು ಅಥವಾ ಆಂಗಾಂಶಗಳು ಹೊಂದಾಣಿಕೆಯಾಗದ ಕಾರಣ ಕಸಿ ಸಾಧ್ಯವಾಗದೆ ಪರದಾಡುತ್ತಿದ್ದ ರೋಗಿಗಳ ನೆರವಿಗೆ ಧಾವಿಸಿರುವ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಈ ನೂತನ ನಿಯಮಾವಳಿಯಿಂದಾಗಿ ಇನ್ನು ಮುಂದೆ ದ್ವಿಮುಖ (ಇಬ್ಬರು ದಾನಿಗಳು), ತ್ರಿಮುಖ ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಜೋಡಿಗಳು ಪರಸ್ಪರ ಕಿಡ್ನಿಗಳನ್ನು ವಿನಿಮಯ ಮಾಡಿಕೊಂಡು ಮರುಜೀವ ಪಡೆಯಲು ಕಾನೂನುಬದ್ಧ ಅವಕಾಶ ಸಿಕ್ಕಂತಾಗಿದೆ.

ಏನಿದು ‘ಬಹು-ಜೋಡಿ’ ವಿನಿಮಯ: ಸಾಮಾನ್ಯವಾಗಿ ರೋಗಿಯ ಕುಟುಂಬದವರೇ ಕಿಡ್ನಿ ದಾನ ಮಾಡಲು ಮುಂದೆ ಬಂದರೂ, ರಕ್ತದ ಗುಂಪು ಹೊಂದಾಣಿಕೆಯಾಗದಿದ್ದರೆ ಕಸಿ ಮಾಡುವುದು ಕಷ್ಟವಾಗುತ್ತಿತ್ತು. ಈಗ ಜಾರಿಗೆ ಬಂದಿರುವ ‘ಸ್ವಾಪ್’ ವ್ಯವಸ್ಥೆಯಲ್ಲಿ, ಎ ಎಂಬ ರೋಗಿಯ ದಾನಿಯು ಬಿಎಂಬ ರೋಗಿಗೆ ಮತ್ತು ಬಿ ರೋಗಿಯ ದಾನಿಯು ಎ ರೋಗಿಗೆ ಕಿಡ್ನಿ ನೀಡಬಹುದು. ಈ ಹೊಸ ಮಾರ್ಗಸೂಚಿಯಡಿ ಕೇವಲ ಇಬ್ಬರಷ್ಟೇ ಅಲ್ಲದೆ, ಮೂರು ಅಥವಾ ಅದಕ್ಕಿಂತ ಹೆಚ್ಚು ಜೋಡಿಗಳು ಒಟ್ಟಾಗಿ ಈ ವಿನಿಮಯ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಪ್ರಮುಖ ಅಂಶಗಳು:

1994ರ ಮಾನವ ಅಂಗಾಂಗ ಕಸಿ ಕಾಯ್ದೆಯಡಿ ವ್ಯಾಖ್ಯಾನಿಸಲಾದ ‘ಸಮೀಪ ಸಂಬಂಧಿಗಳು’ ಮಾತ್ರ ಈ ವಿನಿಮಯ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹರು.
ದಾನಿ ಮತ್ತು ಸ್ವೀಕರಿಸುವವರ ನಡುವೆ ರಕ್ತದ ಗುಂಪು ಅಥವಾ ಅಂಗಾಂಶಗಳ ಅಸಾಮರಸ್ಯ ಇರುವುದು ಅಧಿಕೃತವಾಗಿ ಪ್ರಮಾಣೀಕರಿಸಲ್ಪಟ್ಟಿರಬೇಕು.

ವಿನಿಮಯ ಗುಂಪಿನಲ್ಲಿರುವ ಎಲ್ಲಾ ದಾನಿಗಳು ಮತ್ತು ಸ್ವೀಕರಿಸುವವರು ಒಟ್ಟಾಗಿ ದಾನ ನೀಡಲು ಮತ್ತು ಸ್ವೀಕರಿಸಲು ಒಂದೇ ಜಂಟಿ ಒಪ್ಪಂದಕ್ಕೆ ಸಹಿ ಮಾಡುವುದು ಕಡ್ಡಾಯ.”ಯಾವುದೇ ಹಂತದಲ್ಲಿ ಹಣದ ವ್ಯವಹಾರ ಅಥವಾ ವಾಣಿಜ್ಯ ವಹಿವಾಟು ನಡೆದರೆ ಅಂತಹ ಪ್ರಕರಣಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಪ್ರತಿಯೊಂದು ಕಸಿ ಪ್ರಕ್ರಿಯೆಗೂ ಮುನ್ನ ‘ರಾಜ್ಯ ಮಟ್ಟದ ಅಧಿಕಾರ ಸಮಿತಿ’ಯಿಂದ ಕಡ್ಡಾಯವಾಗಿ ಅನುಮೋದನೆ ಪಡೆಯಬೇಕು. ಇಡೀ ಪ್ರಕ್ರಿಯೆಯನ್ನು

ಪಾರದರ್ಶಕತೆಗೆ ಆದ್ಯತೆ: ಈ ಕಸಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಎನ್ಎಬಿಎಲ್ ಮಾನ್ಯತೆ ಪಡೆದ ಪ್ರಯೋಗಾಲಯಗಳಿಂದಲೇ ರಕ್ತದ ಅಡ್ಡ-ಹೊಂದಾಣಿಕೆ ಪರೀಕ್ಷೆ ನಡೆಸಬೇಕು ಮತ್ತು ಅಗತ್ಯವಿದ್ದಲ್ಲಿ ಡಿಎನ್ಎ ಪ್ರೊಫೈಲಿಂಗ್ ವರದಿಗಳನ್ನು ಸಲ್ಲಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

The post ಕಿಡ್ನಿ ದಾನಕ್ಕೆ ಬದಲಾದ ಮಾರ್ಗಸೂಚಿ: ಸುಸಜ್ಜಿತ ಕಸಿ ವ್ಯವಸ್ಥೆ; ರೋಗಿಗಳ ಹಿತರಕ್ಷಣೆಗಾಗಿ ಹೊಸ ನಿಯಮ ಜಾರಿ! appeared first on Samyukta Karnataka.

KEA ನೇಮಕಾತಿ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)ವು ಕಲ್ಯಾಣ ಕರ್ನಾಟಕ ವೃಂದದ ವಿವಿಧ ನಿಗಮ/ಮಂಡಳಿಗಳ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್ ನೀಡಿದ್ದು, ಲಿಖಿತ ಪರೀಕ್ಷೆಗಳ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ.

ಬೆಂಗಳೂರು ಜಲಮಂಡಳಿ (BWSSB), ಕರ್ನಾಟಕ ರಾಜ್ಯ ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್ಮೆಂಟ್ ಕಾರ್ಪೊರೇಷನ್ (KSSIDC), ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (RGUHS) ಸೇರಿದಂತೆ ವಿವಿಧ ಸಂಸ್ಥೆಗಳ ಹುದ್ದೆಗಳ ಭರ್ತಿಗೆ ಪರೀಕ್ಷೆಗಳು ನಡೆಯಲಿವೆ.

ಏಪ್ರಿಲ್ 26ಕ್ಕೆ ಮೊದಲ ಹಂತದ ಪರೀಕ್ಷೆ: KEA ಪ್ರಕಟಿಸಿದ ವೇಳಾಪಟ್ಟಿಯ ಪ್ರಕಾರ, KSSIDC ಮತ್ತು BWSSB ಸಂಸ್ಥೆಗಳಲ್ಲಿನ ವ್ಯವಸ್ಥಾಪಕರು (Managers), ಸಹಾಯಕ ವ್ಯವಸ್ಥಾಪಕರು (Assistant Managers) ಸಹಾಯಕ ಎಂಜಿನಿಯರ್ (Electrical), ಹುದ್ದೆಗಳಿಗೆ ಏಪ್ರಿಲ್ 26ರಂದು ಲಿಖಿತ ಪರೀಕ್ಷೆ ನಡೆಯಲಿದೆ.

ಮೇ 10ರಂದು ಎರಡನೇ ಹಂತದ ಪರೀಕ್ಷೆ: ಮುಂದಿನ ಹಂತದಲ್ಲಿ, RGUHS, KSSIDC, BWSSB, ಹಾಗೂ ಕೃಷಿ ಮಾರಾಟ ಇಲಾಖೆಯ ವಿವಿಧ ಹುದ್ದೆಗಳಿಗೆ ಸಾಮಾನ್ಯ ಜ್ಞಾನ (General Knowledge) ಮತ್ತು ನಿರ್ದಿಷ್ಟ ವಿಷಯಗಳ ಪ್ರಶ್ನಾಪತ್ರಿಕೆಗಳೊಂದಿಗೆ ಮೇ 10ರಂದು ಪರೀಕ್ಷೆ ನಡೆಸಲಾಗುತ್ತದೆ.

ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆಗಳು: KEA ಕಾರ್ಯನಿರ್ವಾಹಕ ನಿರ್ದೇಶಕ ಹೆ. ಪ್ರಸನ್ನ ನೀಡಿರುವ ಸೂಚನೆಗಳ ಪ್ರಕಾರ ಪರೀಕ್ಷಾ ಕೇಂದ್ರಗಳಲ್ಲಿ ಮುಖ ಚಹರೆ ಗುರುತಿಸುವ ತಂತ್ರಜ್ಞಾನ (Face Recognition) ಬಳಸಿ ಪರಿಶೀಲನೆ ನಡೆಯಲಿದೆ. ಆದ್ದರಿಂದ ಅಭ್ಯರ್ಥಿಗಳು ಕನಿಷ್ಠ 2 ಗಂಟೆಗಳ ಮೊದಲು ಕೇಂದ್ರಕ್ಕೆ ಹಾಜರಾಗಬೇಕು. ಪರೀಕ್ಷೆಯಲ್ಲಿ ಋಣಾತ್ಮಕ ಮೌಲ್ಯಮಾಪನ (Negative Marking) ಇರುತ್ತದೆ. ಉತ್ತರಿಸದೇ ಇರುವ ಪ್ರಶ್ನೆಗಳಿಗೆ ಕೊನೆಯ ಬೆಲ್ ನಂತರ ಹೆಚ್ಚುವರಿ 5 ನಿಮಿಷ ನೀಡಲಾಗುತ್ತದೆ. ಯಾವುದೇ ಆಯ್ಕೆಯನ್ನು ಗುರುತಿಸದಿದ್ದರೆ ಪ್ರತಿ ಪ್ರಶ್ನೆಗೆ 1/4 ಅಂಕ ಕಡಿತ ಮಾಡಲಾಗುತ್ತದೆ ಎಂದು KEA ಸ್ಪಷ್ಟಪಡಿಸಿದೆ.

ಈ ವೇಳಾಪಟ್ಟಿ ಪ್ರಕಟವಾದ ಹಿನ್ನೆಲೆಯಲ್ಲಿ, ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳಲ್ಲಿ ಚಟುವಟಿಕೆ ಹೆಚ್ಚಾಗಿದೆ. ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳು ಈ ನೇಮಕಾತಿಯನ್ನು ಮಹತ್ವದ ಅವಕಾಶವಾಗಿ ಪರಿಗಣಿಸಿದ್ದಾರೆ.

KEA ಪ್ರಕಟಿಸಿರುವ ಹೊಸ ನಿಯಮಗಳು ಮತ್ತು ತಾಂತ್ರಿಕ ಕ್ರಮಗಳು ಪರೀಕ್ಷಾ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕ ಮತ್ತು ಕಟ್ಟುನಿಟ್ಟಾಗಿಸಲು ಸಹಾಯ ಮಾಡಲಿವೆ.

ಬಾಗಲಕೋಟೆ ಉಪಚುನಾವಣೆ LIVE: ಕ್ಷಣಕ್ಷಣದ ಅಪ್‌ಡೇಟ್

The post KEA ನೇಮಕಾತಿ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ appeared first on Samyukta Karnataka.