ದುಬೈ: ಪ್ರಸಕ್ತ ಏಷ್ಯಾಕಪ್‌ನಲ್ಲಿ ಫೈನಲ್ ಪ್ರವೇಶಿಸುವ ನಿರ್ಣಾಯಕ ಪಂದ್ಯದಲ್ಲಿ ಪಾಕಿಸ್ತಾನ್ ತಂಡ ಬಾಂಗ್ಲಾದೇಶದ ವಿರುದ್ಧ ರನ್ ಗಳಿಸಲು ಪರದಾಡಿತು.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಬಾಂಗ್ಲಾದೇಶ ಯೋಜನೆಯಂತೆ ಅತ್ಯುತ್ತಮ ಬೌಲಿಂಗ್ ನಡೆಸಿತು. ಆರಂಭದಲ್ಲಿಯೇ ಪಾಕಿಸ್ತಾನದ ಪ್ರಮುಖ ವಿಕೆಟ್‌ಗಳನ್ನು ಉರುಳಿಸುವ ಮೂಲಕ ಸಂಕಷ್ಟಕ್ಕೆ ಸಿಲುಕಿಸಿತು.
ಮೊದಲ ಓವರ್‌ನಲ್ಲಿಯೇ ಸಾಹಿಬ್‌ಜಾದಾ ಫರ್ಹಾನ್ 4 ರನ್ ಗಳಿಸಿ ಔಟಾದರು. ಎರಡನೇ ಓವರ್‌ನಲ್ಲಿ ಸೈಮ್ ಅಯೂಬ್ ಖಾತೆ ತೆರೆಯದೇ ಪೆವಿಲಿಯನ್ ಸೇರಿದರು. ಹೀಗಾಗಿ ಪಾಕ್ ಆರಂಭದಲ್ಲಿ ಸಂಕಷ್ಟಕ್ಕೆ ಸಿಲುಕಿತು.
ಬಳಿಕ ಬಂದ ಫಖರ್ ಜಮಾನ್ (13) ಹಾಗೂ ನಾಯಕ ಸಲ್ಮಾನ್ ಅಗಾ (19) ಕೂಡ ಬಹಳ ಹೊತ್ತು ಕ್ರಿಸ್‌ನಲ್ಲಿ ನಿಲ್ಲಲಿಲ್ಲ. ಹೀಗಾಗಿ 14 ಓವರ್‌ಗಳಾಗುವಷ್ಟರಲ್ಲಿಯೇ ಪಾಕಿಸ್ತಾನ 71 ರನ್‌ಗಳಿಗೆ ಪ್ರಮುಖ 6 ವಿಕೆಟ್‌ಗಳನ್ನು ಕಳೆದುಕೊಂಡಿತು.
ಕೆಳ ಮಧ್ಯಮ ಕ್ರಮಾಂಕದಲ್ಲಿ ಮೊಹಮ್ಮದ್ ಹ್ಯಾರೀಸ್ 31, ವೇಗಿ ಶಾಹೀನ್ ಅಫ್ರಿದಿ 19 ಹಾಗೂ ಮೊಹಮ್ಮದ್ ನವಾಜ್ 25 ರನ್‌ಗಳಿಸಿದ್ದರಿಂದ ಪಾಕ್ ನೂರರ ಗಡಿ ದಾಟಿತು. ಫಹೀಮ್ ಅಶ್ರಫ್ ಕೂಡ 14 ರನ್‌ಗಳಿಸಿದ್ದರಿಂದ ಒಟ್ಟಾರೆ ಪಾಕ್ 20 ಓವರ್‌ಗಳಲ್ಲಿ 8 ವಿಕೆಟ್ 135 ರನ್‌ಗಳಿಸಿತು.
ಸದ್ಯ 136 ರನ್‌ಗಳ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ 6.4 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 37 ರನ್ ಗಳಿಸಿದೆ.