ಸಾಹಿತಿ ಎಸ್.ಎಲ್. ಭೈರಪ್ಪ ನಿಧನದಿಂದ ಸಾಹಿತ್ಯ ಲೋಕ ಕಣ್ಣೀರಿನ ಕಡಲಿನಲ್ಲಿ ಮುಳುಗಿದೆ. ಇತ್ತ ಭೈರಪ್ಪ ಅಂತ್ಯಸಂಸ್ಕಾರ ವಿವಾದಕ್ಕೆ ಸಿಲುಕಿದೆ. ಸ್ವತಃ ಭೈರಪ್ಪ ಅವರು ಬರೆದಿರುವ ಉಯಿಲು ಲಭ್ಯವಾಗಿದ್ದು ಅದರ ಪ್ರಕಾರ ಮಗಳಂತೆ ಕಾಳಜಿ ವಹಿಸಿದ್ದ ಬೆಂಗಳೂರು ಮೂಲದ 46 ವರ್ಷದ ಮಹಿಳೆಯೇ ಅಂತ್ಯಸಂಸ್ಕಾರ ನಡೆಸಬೇಕು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಶುಕ್ರವಾರ ಮೈಸೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಇಬ್ಬರು ಪುತ್ರರಿದ್ದರೂ ಅವರನ್ನು ಅಂತ್ಯಸಂಸ್ಕಾರದಿಂದ ದೂರ ಇಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ.
ಉಯಿಲು ಬಹಿರಂಗ ಆಗಿದ್ದು ಹೇಗೆ?: ಕಲಾಮಂದಿರದಲ್ಲಿ ಅಂತಿಮ ದರ್ಶನಕ್ಕೆ ಭೈರಪ್ಪ ಪಾರ್ಥೀವ ಶರೀರ ಇರಿಸಿದ್ದಾಗ ಫಣೀಶ್ ಎಂಬುವವರು ಉಯಿಲನ್ನು ಪ್ರದರ್ಶಿಸಿದರು. ಇದರಿಂದ ಕೆಲಕಾಲ ಗೊಂದಲ ಉಂಟಾಗಿ ಪೊಲೀಸರು ಅವರನ್ನು ವಶಕ್ಕೆ ಪಡೆದರು.
ಈ ವೇಳೆಯಲ್ಲಿ ಅವರ ಅಭಿಮಾನಿಗಳು ಮಕ್ಕಳು ಅಂತ್ಯಸಂಸ್ಕಾರ ನಡೆಸಬಾರದು. ಭೈರಪ್ಪ ಆಸೆಯನ್ನು ನೆರವೇರಿಸುವಂತೆ ಪ್ರತಿಭಟನೆ ಕೂಡ ನಡೆಸಿದರು. ಈ ಸಂದರ್ಭದಲ್ಲಿ ಏಳೆಂಟು ಜನರನ್ನು ಪೊಲೀಸರು ಎಳೆದುಕೊಂಡು ಹೋದರು. ನಂತರ ವಾತಾವರಣ ತಿಳಿಯಾಯಿತು.
ಯಾರೂ ಈ ಮಹಿಳೆ?: 30-1-2025 ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದ ಉಪ ನೋಂದಣಿ ಕಚೇರಿಯಲ್ಲಿ ಈ ತಿದ್ದುಪಡಿ ವಿಲ್ ನೋಂದಣಿ ಆಗಿದೆ. ತಮ್ಮ ಮಗಳಾಗಿ ಕಾಳಜಿ ವಹಿಸುತ್ತಿರುವ ಬೆಂಗಳೂರಿನ ಕೆಂಗೇರಿ ರಸ್ತೆಯ ಮೈಲಸಂದ್ರದ ಸುದರ್ಶನ್ ಎಂಬುವವರ ಪತ್ನಿ ಸಹನ ವಿಜಯಕುಮಾರ್ ನಡೆಸಬೇಕು.
ಈ ದಿನಗಳಲ್ಲಿ ಹೆಣ್ಣು ಮಕ್ಕಳು ಸಹ ಅಂತ್ಯಸಂಸ್ಕಾರ ಕ್ರಿಯೆಯಲ್ಲಿ ತೊಡಗಲು ಯಾವುದೇ ನಿಷೇಧವಿಲ್ಲ ಎಂಬುದು ತಮಗೆ ಮನದಟ್ಟಾಗಿದೆ. ಅಲ್ಲದೆ, ತಮ್ಮ ಇಬ್ಬರು ಪುತ್ರರಾದ ರವಿಶಂಕರ್ ಹಾಗೂ ಉದಯಶಂಕರ್ ತಮ್ಮ ಪಾರ್ಥೀವ ಶರೀರದ ಅಂತ್ಯಸಂಸ್ಕಾರ ಮಾಡಕೂಡದು ಎಂದು ಸ್ಪಷ್ಟಪಡಿಸಿದ್ದಾರೆ.
50 ಲಕ್ಷ ವಾಪಸ್: ಈ ಮೊದಲು ತಾವು ಅಂದರೆ 15.3.2022ರಂದು ನೋಂದಣಿ ಮಾಡಿದ್ದ ವಿಲ್‍ನಲ್ಲಿ ತಿಳಿಸಿದ್ದಂತೆ ಎಸ್.ಟಿ. ಉದಯಶಂಕರ್ ಅವರಿಗೆ ಕೊಡುಗೆಯಾಗಿ ನೀಡಲು ಉದ್ದೇಶಿಸಿದ್ದ 50 ಲಕ್ಷ ನಿರ್ಧಾರ ರದ್ದುಗೊಳಿಸಿರುವುದಾಗಿ ತಿದ್ದುಪಡಿ ವಿಲ್‍ನಲ್ಲಿ ತಿಳಿಸಿದ್ದಾರೆ.
ಹಿಂದೂ ಧರ್ಮಶಾಸ್ತ್ರದ ಪ್ರಕಾರ ಮಾಡಿ ತಮ್ಮ ಕಾಲಾನಂತರ ತಮ್ಮ ಪಾರ್ಥೀವ ಶರೀರಕ್ಕೆ ಹಿಂದೂ ಧರ್ಮಶಾಸ್ತ್ರದ ಪ್ರಕಾರ ಅಂತ್ಯ ಸಂಸ್ಕಾರ ನಡೆಯಬೇಕು. ಪಾರ್ಥೀವ ಶರೀರವನ್ನು ತಮ್ಮ ಹುಟ್ಟೂರಾದ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಸಂತೆಶಿವರ ಗ್ರಾಮಕ್ಕೆ ಕೊಂಡೊಯ್ದು ವಿಧಿವತ್ತಾಗಿ ಅಂತ್ಯಸಂಸ್ಕಾರ ನಡೆಸಬೇಕು ಎಂದು ತಿಳಿಸಿದ್ದಾರೆ.
ಉಯಿಲು ತಿದ್ದುಪಡಿಗೆ ಕಾರಣ ಗೊತ್ತಾ? ನನ್ನ ಪತ್ನಿ ಸರಸ್ವತಿ, ಮಕ್ಕಳಾದ ರವಿಶಂಕರ್, ಉದಯಶಂಕರ್ ಅವರು ಮೈಸೂರು ಪ್ರಧಾನ ಜಿಲ್ಲಾ ನ್ಯಾಯಾಲಯದಲ್ಲಿ (ಬಿ ಅಂಡ್ ಡಬ್ಲ್ಯೂ.ಸಿ.ನಂಬರ್15/20025ರಲ್ಲಿ) ನನ್ನ ಬುದ್ಧಿಮತ್ತೆ ಮತ್ತು ನೆನಪಿನ ಶಕ್ತಿ ಕುಂಠಿತವಾಗಿರುತ್ತದೆ.
ಅವರುಗಳನ್ನು ನಮ್ಮ ಪೋಷಕರನ್ನಾಗಳಾಗಿ ನೇಮಿಸಬೇಕೆಂದು ಆರೋಪಿಸಿದ್ದರು. ಈ ವೇಳೆ ನ್ಯಾಯಾಲಯದಲ್ಲಿನಾನೇ ಪ್ರತಿವಾದಿಯಾಗಿ ಉತ್ತರ ನೀಡಿದೆ. ಈ ಕಾರಣಗಳಿಂದ 30-1-2025 ರಂದು ಮೊದಲ ಉಯಿಲಿಗೆ ತಿದ್ದುಪಡಿ ಮಾಡುತ್ತಿದ್ದೇನೆ ಎಂದು ಭೈರಪ್ಪ ತಿದ್ದುಪಡಿ ವಿಲ್‍ನಲ್ಲಿ ತಿಳಿಸಿದ್ದಾರೆ.