Home ಕ್ರೀಡೆ ಭಾರತ – ಆಸ್ಟ್ರೇಲಿಯಾ 2ನೇ ಅನಧಿಕೃತ ಟೆಸ್ಟ್: ರಾಹುಲ್ ಶತಕ – ಗೆಲುವಿನತ್ತ ಭಾರತ

ಭಾರತ – ಆಸ್ಟ್ರೇಲಿಯಾ 2ನೇ ಅನಧಿಕೃತ ಟೆಸ್ಟ್: ರಾಹುಲ್ ಶತಕ – ಗೆಲುವಿನತ್ತ ಭಾರತ

0

ಲಕ್ನೋ: ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ‘ಎ’ ಮತ್ತು ಆಸ್ಟ್ರೇಲಿಯಾ ‘ಎ’ ನಡುವೆ ನಡೆಯುತ್ತಿರುವ ಎರಡನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟ್ಸ್‌ಮನ್‌ಗಳು ಅದ್ಭುತ ಆಟವಾಡುತ್ತಿದ್ದಾರೆ. ನಾಲ್ಕನೇ ಹಾಗೂ ಅಂತಿಮ ದಿನದಲ್ಲಿ ಬೃಹತ್ ರನ್‌ಗಳ ಗುರಿ ಬೆನ್ನಟ್ಟಿದ ವೇಳೆ, ಕೆಎಲ್ ರಾಹುಲ್ ಮತ್ತು ಬಿ. ಸಾಯಿ ಸುದರ್ಶನ್ ತಲಾ ಶತಕ ಬಾರಿಸಿ ತಂಡವನ್ನು ಮುನ್ನಡೆಸಿದ್ದಾರೆ.

ರಾಹುಲ್‌ನ 22ನೇ ಪ್ರಥಮ ದರ್ಜೆ ಶತಕ: ನಿನ್ನೆ ಆಟದ ಕೊನೆಯ 30 ನಿಮಿಷಗಳು ಬಾಕಿ ಇರುವಾಗ 74 ರನ್ ಗಳಿಸಿ ಗಾಯಗೊಂಡು ನಿವೃತ್ತರಾದ ರಾಹುಲ್, ಇಂದು ಮತ್ತೆ ಮೈದಾನಕ್ಕಿಳಿದು ಶತಕ ಪೂರೈಸಿದರು. 136 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದ ಅವರು, 12ನೇ ಬೌಂಡರಿ ಬಾರಿಸಿದ್ದಾರೆ. ಇದು ರಾಹುಲ್ ಅವರ 22ನೇ ಪ್ರಥಮ ದರ್ಜೆ ಶತಕ. ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ನಡೆದ ಐದು ಟೆಸ್ಟ್ ಸರಣಿಯಲ್ಲಿ ಅವರು 53.20 ಸರಾಸರಿಯಲ್ಲಿ 532 ರನ್‌ಗಳನ್ನು ಗಳಿಸಿದ್ದರು, ಇದರಲ್ಲಿ ಎರಡು ಶತಕಗಳೂ ಸೇರಿವೆ.

ರಾಹುಲ್‌ ಟೆಸ್ಟ್ ಅಂಕಿಅಂಶಗಳು: ಕನ್ನಡಿಗ ಕೆಎಲ್ ರಾಹುಲ್ ಈಗಾಗಲೇ 63 ಟೆಸ್ಟ್ ಪಂದ್ಯಗಳಲ್ಲಿ 3789 ರನ್ ಗಳಿಸಿದ್ದಾರೆ. ಅವರ ಬ್ಯಾಟಿಂಗ್ ಸರಾಸರಿ 35.00 ಇದ್ದು ಇದರಲ್ಲಿ 10 ಶತಕ ಮತ್ತು 19 ಅರ್ಧಶತಕಗಳು ಸೇರಿವೆ. ಟೆಸ್ಟ್ ತಂಡದಲ್ಲಿ ಹಲವು ಕ್ರಮಾಂಕಗಳಲ್ಲಿ ಬ್ಯಾಟ್ ಮಾಡಿದ ರಾಹುಲ್, ಈಗ ಆರಂಭಿಕ ಬ್ಯಾಟ್ಸ್‌ಮನ್ ಆಗಿ ತಂಡಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ.

ಸಾಯಿ ಸುದರ್ಶ ಕಂಗಳಿಸಿದ ಶತಕ: ಭಾರತದ ಇನ್ನೊಬ್ಬ ಯುವ ಬ್ಯಾಟ್ಸ್‌ಮನ್ ಬಿ. ಸಾಯಿ ಸುದರ್ಶನ್ ಕೂಡ ಅದ್ಭುತ ಶತಕ ಬಾರಿಸಿ ತಂಡದ ಹೋರಾಟವನ್ನು ಬಲಪಡಿಸಿದ್ದಾರೆ. ಅವರ ಶಾಂತ ಮತ್ತು ಧೈರ್ಯಶೀಲ ಆಟ ಆಸ್ಟ್ರೇಲಿಯಾ ಬೌಲರ್‌ಗಳ ಮೇಲೆ ಒತ್ತಡ ಹೆಚ್ಚಿಸಿದೆ.

ಪಂದ್ಯದ ಸ್ಥಿತಿ: ಭಾರತ ‘ಎ’ ತಂಡವು ಬೃಹತ್‌ ರನ್‌ಗಳ ದೊಡ್ಡ ಗುರಿಯನ್ನು ಬೆನ್ನಟ್ಟುತ್ತಿದ್ದರೂ, ಹಿರಿಯ ಆಟಗಾರರ ಅನುಭವ ಹಾಗೂ ಯುವ ಆಟಗಾರರ ಚೈತನ್ಯದೊಂದಿಗೆ ಪಂದ್ಯವನ್ನು ರೋಚಕ ಹಂತಕ್ಕೆ ತಂದಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version