Home ಸುದ್ದಿ ರಾಜ್ಯ ಕೇಂದ್ರ ಸರ್ಕಾರದ ವಿವಿಧ ಯೋಜನೆ ಫಲಾನುಭವಿಗಳಿಗೆ ಮಹತ್ವದ ಮಾಹಿತಿ

ಕೇಂದ್ರ ಸರ್ಕಾರದ ವಿವಿಧ ಯೋಜನೆ ಫಲಾನುಭವಿಗಳಿಗೆ ಮಹತ್ವದ ಮಾಹಿತಿ

0

ಬೆಂಗಳೂರು: ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಮಹತ್ವದ ಮಾಹಿತಿಯೊಂದಿದೆ. ಭಾರತ ಸರ್ಕಾರದ ಹಣಕಾಸು ಸೇವೆಗಳ ಇಲಾಖೆಯ ಮಾರ್ಗಸೂಚಿಯಂತೆ ಫಲಾನುಭವಿಗಳು ಮರು-ಕೆವೈಸಿ ಮಾಡಿಸುವುದು ಅತ್ಯಗತ್ಯವಾಗಿದೆ. ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಲಾಗಿದೆ.

ಪ್ರಕಟಣೆಯಲ್ಲಿ ಭಾರತ ಸರ್ಕಾರದ ಹಣಕಾಸು ಸೇವೆಗಳ ಇಲಾಖೆಯ ಮಾರ್ಗಸೂಚಿಯಂತೆ ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY), ಪ್ರಧಾನ್ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಮತ್ತು ಪ್ರಧಾನ ಮಂತ್ರಿ ಜನ್-ಧನ್ ಯೋಜನೆ (PMJDY) ಉಳಿತಾಯ ಖಾತೆಗಳ ಮರು ಕೆವೈಸಿಗಾಗಿ ಅಭಿಯಾನ ನಡೆಯುತ್ತಿದೆ ಎಂದು ಹೇಳಿದೆ.

ಈ ಅಭಿಯಾನದ ಅಡಿಯಲ್ಲಿ ಎಲ್ಲಾ ನಾಗರಿಕರು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ [PMJJBY] ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ [PMSBY] ಮರು ನವೀಕರಣ ಅಥವಾ ನೋಂದಣಿ ಮಾಡಿಸಿಕೊಳ್ಳಲು ಹಾಗೂ ತಮ್ಮ ಪ್ರಧಾನ ಮಂತ್ರಿ ಜನ್ ಧನ್ ಯೋಜನೆ [PMJDY] ಮತ್ತು ಉಳಿತಾಯ ಖಾತೆಗಳ ಮರು-ಕೆವೈಸಿ ಪ್ರಕ್ರಿಯೆ ತಕ್ಷಣವೇ ಪೂರ್ಣಗೊಳಿಸಬೇಕಿದೆ.

ಮರು-ಕೆವೈಸಿ ಏಕೆ ಅತ್ಯಂತ ಅಗತ್ಯ?: ಪ್ರಧಾನ ಮಂತ್ರಿ ಜನ ಧನ್ ಯೋಜನೆಯು 28 ಆಗಸ್ಟ್ 2014ರಂದು ಪ್ರಾರಂಭಿಸಲಾಯಿತು. ಈಗ ಪ್ರಾಥಮಿಕ ಹಂತದ ಬಹುತೇಕ ಖಾತೆಗಳು 2024ರ ಆಗಸ್ಟ್‌ನಲ್ಲಿ 10 ವರ್ಷಗಳನ್ನು ಪೂರ್ಣಗೊಳಿಸುತ್ತಿವೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಯಮಾನುಸಾರ, ಎಲ್ಲಾ ಉಳಿತಾಯ ಖಾತೆಗಳಿಗೆ ಪ್ರತಿ 10 ವರ್ಷಕ್ಕೆ ಕಡ್ಡಾಯವಾಗಿ ಕೆವೈಸಿ ನವೀಕರಣ ಅಗತ್ಯವಿದೆ. ಒಂದು ವೇಳೆ ಮರು-ಕೆವೈಸಿ ಮಾಡಿಸದಿದ್ದರೆ ಖಾತೆ ನಿಷ್ಕ್ರಿಯ ಆಗಬಹುದು. ಶೂನ್ಯ ಖಾತೆಯಲ್ಲಿರುವ ಹಣವನ್ನು DEAF [Depositor Education and Awareness Fund] ವರ್ಗಾಯಿಸಲಾಗುತ್ತದೆ. ಆಮೇಲೆ ಹಣ ಹಿಂತೆಗೆದುಕೊಳ್ಳುವುದು ತುಂಬಾ ದೀರ್ಘ ಪ್ರಕ್ರಿಯೆ ಹಾಗೂ ಕಷ್ಟಕರವಾಗುತ್ತದೆ.

ಈ ತೊಂದರೆಗಳನ್ನು ತಪ್ಪಿಸಿಕೊಳ್ಳಲು ಖಾತೆದಾರರು ಕೈಗೊಳ್ಳಬೇಕಾದ ಕ್ರಮಗಳು. ತಾವು ಖಾತೆ ಹೊಂದಿರುವ ಬ್ಯಾಂಕ್ ಶಾಖೆ ಅಥವಾ ಹತ್ತಿರದ CSP (Customer Service Point)ಗೆ ತಕ್ಷಣ ಭೇಟಿ ನೀಡಿ. ಶೂನ್ಯ ಮಾನ್ಯತೆ ಪಡೆದ ಗುರುತಿನ ದಾಖಲೆಗಳೊಂದಿಗೆ (ಆಧಾರ್, ಮತದಾರರ ಗುರುತಿನ ಚೀಟಿ, ಪ್ಯಾನ್ ಇತ್ಯಾದಿ) ದಾಖಲೆಗಳ ಜೊತೆಗೆ ತೆರಳಬೇಕು.

PMJJBY ಮತ್ತು PMSBY ಯೋಜನೆಗಳ ನವೀಕರಣ ಅಥವಾ ನೊಂದಣಿಯನ್ನು ಪರಿಶೀಲಿಸಿ. ಈ ಅಭಿಯಾನ ಯಶಸ್ವಿಯಾಗಲು ಎಲ್ಲಾ ಬ್ಯಾಂಕುಗಳಿಗೆ ಸಹಕಾರ ನೀಡುವಂತೆ ಸೂಚಿಸಲಾಗಿದೆ, ಎಲ್ಲಾ ನಾಗರೀಕರು ಇದರ ಸದುಪಯೋಗ ಪಡಿಸಿಕೊಳ್ಳುವುದು ಎಂದು ಮನವಿ ಮಾಡಲಾಗಿದೆ.

ರೆಪೋ ದರದ ಕುರಿತು ಪತ್ರಿಕಾಗೋಷ್ಠಿ ನಡೆಸಿದ್ದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 10 ವರ್ಷ ಪೂರೈಸಿರುವ ಪ್ರಧಾನ ಮಂತ್ರಿ ಜನ ಧನ್ ಖಾತೆಗಳ ಮರು ಕೆ-ವೈಸಿ ಕುರಿತು ಸಹ ಘೋಷಣೆ ಮಾಡಿತ್ತು. ಈ ಯೋಜನೆಯಡಿ ಸುಮಾರು 56 ಕೋಟಿ ಖಾತೆಗಳಿವೆ. 2014-15ರಲ್ಲಿ ಈ ಖಾತೆ ತೆರೆಯಲಾಗಿದ್ದು, ಈಗ ಮರು ಇ-ಕೆವೈಸಿ ಅಗತ್ಯವಾಗಿದೆ ಎಂದು ಆರ್‌ಬಿಐ ಹೇಳಿತ್ತು.

ಜುಲೈ 1 ರಿಂದ ಸೆಪ್ಟೆಂಬರ್ 30ರ ತನಕ ಮರು ಮರು-ಕೆವೈಸಿ ಮಾಡಿಸಬೇಕಿದೆ. ಈಗಾಗಲೇ ಹಲವು ಬ್ಯಾಂಕುಗಳು ಜನರ ಮನೆ ಬಾಗಿಲಿಗೆ ಹೋಗಿ ಮರು-ಕೆವೈಸಿ ಮಾಡಿಸುತ್ತಿವೆ. ಜನರು ತಮ್ಮ ಹತ್ತಿರದ ಬ್ಯಾಂಕುಗಳಿಗೆ ಭೇಟಿ ನೀಡಿ ಅಲ್ಲಿ ವಿಶೇಷವಾಗಿ ರಚನೆ ಮಾಡಲಾಗಿರುವ ಕೌಂಟರ್‌ನಲ್ಲಿ ಮರು-ಕೆವೈಸಿ ಮಾಡಿಸಬಹುದು.

ಶೂನ್ಯ ಠೇವಣಿಯೊಂದಿಗೆ ಪ್ರಧಾನ ಮಂತ್ರಿ ಜನ ಧನ್ ಖಾತೆಯನ್ನು ಜನರು ತೆರೆಯಬಹುದಾಗಿದೆ. ಈ ಖಾತೆಗಳು ಹಲವು ಉಪಯೋಗವನ್ನು ಹೊಂದಿದೆ. ಉಳಿತಾಯ ಖಾತೆ, ಡೆಪಾಸಿಟ್ ಮೇಲೆ ಬಡ್ಡಿ, ರುಪೇ ಡೆಬಿಟ್ ಕಾರ್ಡ್ ಜೊತೆಗೆ ಅಪಘಾತ ವಿಮೆ ಮತ್ತು 10,000 ರೂ. ತನಕ ಓವರ್ ಡ್ರಾಫ್ಟ್‌ ಸೌಲಭ್ಯವು ಇದರಲ್ಲಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version