Home ತಾಜಾ ಸುದ್ದಿ KIADBಯಿಂದ 12 ಎಕರೆ ಜಮೀನು ಮಂಜೂರು: ನಿರಾಣಿ ಸ್ಪಷ್ಟನೆ

KIADBಯಿಂದ 12 ಎಕರೆ ಜಮೀನು ಮಂಜೂರು: ನಿರಾಣಿ ಸ್ಪಷ್ಟನೆ

0

ಬಾಗಲಕೋಟೆ: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ಕನ್ನಡ ನಟಿ ರನ್ಯಾ ರಾವ್ ಅವರಿಗೆ ಸಂಬಂಧಿಸಿದ ಮೆಸರ್ಸ್ ಕ್ಸಿರೋಡಾ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗೆ ಜನವರಿ 2, 2023 ರಂದು 12 ಎಕರೆ ಭೂಮಿ ಮಂಜೂರು ಮಾಡಲಾಗಿದೆ ಎಂದು ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಮಾಜಿ ಸಚಿವ ಮುರಗೇಶ ನಿರಾಣಿ ಸ್ಪಷ್ಟನೆ ನೀಡಿದ್ದಾರೆ.
ರಾಜ್ಯ ಮಟ್ಟದ ಏಕ ವಿಂಡೋ ಕ್ಲಿಯರೆನ್ಸ್ ಸಮಿತಿ (ಎಸ್‌ಎಲ್‌ಎಸ್‌ಡಬ್ಲ್ಯೂಸಿಸಿ) ಸಭೆಯಲ್ಲಿ ಹಂಚಿಕೆಗೆ ಅನುಮೋದಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಕುರಿತಂತೆ ಮಾತನಾಡಿರುವ ಅವರು, “ರನ್ಯಾ ಅವರು 2022ರಲ್ಲಿ 12 ಎಕರೆ ಭೂಮಿ ನೀಡಲು ಮನವಿ ಮಾಡಿದ್ದರು. 2023 ಜನವರಿಯಲ್ಲಿ ಅದು ಕ್ಲೀಯರ್‌ ಆಗಿದೆ. ಆ ಸಂದರ್ಭದಲ್ಲಿ ಕೈಗಾರಿಕಾ ಸಚಿವರಾಗಿ ನಾನು ಚೇರ್‌ ಪರ್ಸನ್‌ ಆಗಿದ್ದೇ. ಅಂದಿನ ಕಮೀಟಿ ಅದನ್ನ ಅಪ್ರೂವಲ್‌ ಮಾಡಿ ಸಿಂಗಲ್‌ ವಿಂಡೋಗೆ ತೆಗೆದುಕೊಂಡು ಬಂದಿತ್ತು. ಸಿಂಗಲ್‌ ವಿಂಡೋದಲ್ಲಿ 30 ಜನ ಹಿರಿಯ ಅಧಿಕಾರಿಗಳು ಒಳಗೊಂಡಿದ್ದ ತಂಡದಲ್ಲಿ ಆ ಯೋಜನೆಯ ಸಾಧಕ-ಭಾದಕಗಳನ್ನು ಚರ್ಚೆ ಮಾಡಿ ಆ ಸಂದರ್ಭದಲ್ಲಿ ಅದನ್ನು ಅಲೌಟ್‌ ಮಾಡಲಾಗಿದೆ. ಇದರಲ್ಲಿ ಕೈಗಾರಿಕಾ ಸಚಿವರದ್ದಾಗಲಿ, ಹಿರಿಯ ಅಧಿಕಾರಿಗಳದ್ದಾಗಲಿ ಯಾವುದೇ ರೀತಿಯಿಂದ ಕಾನೂನು ಲೋಪದೋಷಗಳಾಗಿಲ್ಲ. ಯಾವುದೇ ರೀತಿಯಿಂದ ಅವರ ಫೇವರ್‌ ಮಾಡಿರುವುದಿಲ್ಲ. ಇದರ ಬಗ್ಗೆ ಯಾವುದೇ ಸಂಶಯವಿದ್ದರೆ ಸ್ಪಷ್ಟಿಕರಣ ನೀಡಲು ಸಿದ್ಧನಿದ್ದೇನೆ” ಎಂದು ಅವರು ತಿಳಿಸಿದರು.

Exit mobile version