ಕೆಎಸ್ಆರ್‌ಟಿಸಿ: ನೌಕರರ ಕುಟುಂಬ ಕಲ್ಯಾಣ ಯೋಜನೆ ಪರಿಷ್ಕರಣೆ, ಸೌಲಭ್ಯಗಳು

0
94

ಬೆಂಗಳೂರು: ಕೆಎಸ್‌ಆರ್‌ಟಿಸಿ ನೌಕರರ ಕುಟುಂಬ ಕಲ್ಯಾಣ ಯೋಜನೆಯನ್ನು ಪರಿಷ್ಕರಣೆ ಮಾಡಿದೆ. ಯೋಜನೆಯ ಪರಿಹಾರ ಮೊತ್ತವನ್ನು ಹೆಚ್ಚಿಸಲಾಗಿದ್ದು, ಈ ಕುರಿತು ಅಧಿಕೃತ ಆದೇಶವನ್ನು ಹೊರಡಿಸಲಾಗಿದೆ.

ಈ ಕುರಿತು ಅಕ್ರಂ ಪಾಷ ವ್ಯವಸ್ಥಾಪಕ ನಿರ್ದೇಶಕರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಆದೇಶವನ್ನು ಹೊರಡಿಸಿದ್ದಾರೆ. ಆದೇಶ ಕರಾರಸಾ ನಿಗಮದ ನೌಕರರ ಕುಟುಂಬ ಕಲ್ಯಾಣ ಯೋಜನೆಯ ಪರಿಹಾರ ಮೊತ್ತವನ್ನು ರೂ.10 ಲಕ್ಷಗಳಿಂದ ರೂ.14 ಲಕ್ಷಗಳಿಗೆ ಪರಿಷ್ಕರಿಸುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.

ಆದೇಶದ ವಿವರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ನೌಕರರ ಕುಟುಂಬ ಕಲ್ಯಾಣ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಈ ಯೋಜನೆಗೆ ಸಹಮತಿ ನೀಡಿರುವ ಎಲ್ಲಾ ಸದಸ್ಯ ನೌಕರರು/ ಅಧಿಕಾರಿಗಳಿಂದ ಮಾಸಿಕ ರೂ. 350 ವಂತಿಕೆಯನ್ನು ಪಡೆದು ನಿಗಮದ ವತಿಯಿಂದ ಪ್ರತಿ ಸದಸ್ಯ ನೌಕರನಿಗೆ ಮಾಸಿಕ ರೂ. 150 ವಂತಿಗೆಯನ್ನು ನೀಡಲಾಗುತ್ತಿದೆ.

ಈ ಯೋಜನೆಯಡಿ ಸಾಮಾನ್ಯ ಮರಣ ಪ್ರಕರಣಗಳಲ್ಲಿ ಅವರ ನಾಮನಿರ್ದೇಶಿತರಿಗೆ ರೂ. 10 ಲಕ್ಷಗಳು ಹಾಗೂ ಅಪಘಾತದಿಂದ ಮರಣ ಹೊಂದಿದಲ್ಲಿ ರೂ. 50 ಲಕ್ಷಗಳ ಪರಿಹಾರ ಮೊತ್ತವನ್ನು ನೀಡುತ್ತಿರುವುದು ಸರಿಯಷ್ಟೆ.

ಸೇವೆಯಲ್ಲಿರುವಾಗ ಸಿಬ್ಬಂದಿಗಳು ಖಾಸಗಿ ಅಥವಾ ಕರ್ತವ್ಯ ನಿರತ ಅಪಘಾತದಲ್ಲಿ ಮೃತಪಟ್ಟಲ್ಲ ಅವರ ಅವಲಂಬಿತರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾನವರೊಂದಿಗೆ ರೂ. 50 ಲಕ್ಷಗಳ ವೇತನ ಆಧಾರಿತ (CSP) ವೈಯಕ್ತಿಕ ಅಪಘಾತ ವಿಮಾ ಯೋಜನೆಯನ್ನು ನವೆಂಬರ್- 2022 ರಿಂದ ಜಾರಿಗೆ ತರಲಾಗಿದೆ.

ದಿನಾಂಕ 16.01.2025 ರಂದು ಪರಿಷ್ಕೃತ ಒಡಂಬಡಿಕೆಯನ್ನು ಮಾಡಿಕೊಂಡು ಅಪಘಾತ ಮರಣ ಪ್ರಕರಣಗಳಗೆ ರೂ. 1 ಕೋಟಿಗಳ ಅಪಘಾತ ವಿಮೆಯನ್ನು ಜಾರಿಗೊಳಸಲಾಗಿರುತ್ತದೆ. ಆದುದರಿಂದ ನೌಕರರ ಕುಟುಂಬ ಕಲ್ಯಾಣ ಯೋಜನೆಯಡಿ ನೀಡುತ್ತಿದ್ದ ರೂ. 50 ಲಕ್ಷಗಳ ಅಪಘಾತ ಪರಿಹಾರ ಮೊತ್ತವನ್ನು ದಿನಾಂಕ 16.01.2025 ರಿಂದ ಜಾರಿಗೆ ಬರುವಂತೆ ಸ್ಥಗಿತಗೊಳಸಲಾಗಿರುತ್ತದೆ.

ಈ ಹಿನ್ನೆಲೆಯಲ್ಲಿ ನೌಕರರ ಕುಟುಂಬ ಕಲ್ಯಾಣ ಯೋಜನೆಯಡಿ ವಾರ್ಷಿಕ ಅಂದಾಜು 10 ಅಪಘಾತ ಮರಣ ಪ್ರಕರಣಗಳಿಗೆ ನೀಡುತ್ತಿದ್ದ ತಲಾ ರೂ. 50 ಲಕ್ಷಗಳ ಪರಿಹಾರ ಮೊತ್ತವನ್ನು ಸ್ಥಗಿತಗೊಳಸಿ, ವಾರ್ಷಿಕ ಅಂದಾಜು 144 ಸಾಮಾನ್ಯ ಮರಣ ಪ್ರಕರಣಗಳಗೆ ತಲಾ ರೂ. 10 ಲಕ್ಷಗಳಿಂದ ರೂ. 14 ಲಕ್ಷಗಳಿಗೆ ಪರಿಹಾರ ಮೊತ್ತವನ್ನು ಹೆಚ್ಚಿಸಿ ಈ ಕೆಳಗಿನಂತೆ ಪರಿಷ್ಕರಿಸಲಾಗಿದೆ.

  • ಅಪಘಾತ ಹೊರತುಪಡಿಸಿ ಇತರೇ ಯಾವುದೇ ಕಾರಣಗಳಿಂದ ಮೃತಪಟ್ಟ ಪ್ರಕರಣಗಳಲ್ಲಿ ನೀಡಲಾಗುತ್ತಿರುವ ಪರಿಹಾರ ಮೊತ್ತವನ್ನು ರೂ. 10 ಲಕ್ಷಗಳಿಂದ ರೂ. 14 ಲಕ್ಷಗಳಿಗೆ ಹೆಚ್ಚಿಸಿ, ಪರಿಷ್ಕರಿಸಲಾಗಿದೆ.
  • ಅಪಘಾತ ಮರಣ ಪ್ರಕರಣಗಳಲ್ಲಿ ನೀಡಲಾಗುತ್ತಿದ್ದ ರೂ. 50 ಲಕ್ಷಗಳ ಅಪಘಾತ ಪರಿಹಾರ ಮೊತ್ತವನ್ನು ದಿನಾಂಕ 16.01.2025 ರಿಂದಲೇ ಜಾರಿಗೆ ಬರುವಂತೆ ಸ್ಥಗಿತಗೊಳಸಲಾಗಿದೆ.
  • ನೌಕರರ ಮಾಸಿಕ ವಂತಿಕೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಸಾಮಾನ್ಯ ಮರಣ ಪ್ರಕರಣಗಳ ಪರಿಷ್ಕೃತ ಪರಿಹಾರ ಮೊತ್ತ ರೂ. 14 ಲಕ್ಷಗಳು ದಿನಾಂಕ 01.09.2025 ರಿಂದ ಜಾರಿಗೆ ಬರುವಂತೆ ಮುಂದುವರೆದ ಸಾಮಾನ್ಯ ಮರಣ ಪ್ರಕರಣಗಳಿಗೆ ಮಾತ್ರ ಅನ್ವಯಿಸುತ್ತದೆ. ಉಳಿದಂತೆ ಈ ಯೋಜನೆಯ ಅನುಷ್ಠಾನ ಸಂಬಂಧ ಹೊರಡಿಸಿರುವ ಸುತ್ತೋಲೆಗಳು ನೀಡಿರುವ ನಿರ್ದೇಶನಗಳಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

Previous articleಉಪರಾಷ್ಟ್ರಪತಿ ಚುನಾವಣೆ: ಮೋದಿಗೆ ಬಿಗ್‌ ಚಾಲೆಂಜ್
Next articleವಿಷ್ಣು ಸ್ಮಾರಕಕ್ಕಾಗಿ ಜಾಗ ಖರೀದಿಸಿದ ಸುದೀಪ್: ಸೆ. 18ರಂದು ಅಡಿಗಲ್ಲು

LEAVE A REPLY

Please enter your comment!
Please enter your name here